ವಿನಯ್‌ ಗುರೂಜಿ ಆಶ್ರಮದಲ್ಲಿ ಮೊಳಗಿತು ಡಿಕೆಶಿ ಸಿಎಂ ಕಹಳೆ!

ಡಿ.ಕೆ. ಶಿವಕುಮಾರ್‌ ಸಿಎಂ ಆಗುವಂತೆ ಆಶೀರ್ವಾದ ಮಾಡಿ ಎಂದು ಶಾಸಕ ತಮ್ಮಯ್ಯ ವಿನಯ್‌ ಗುರೂಜಿ ಬಳಿ ಮನವಿ ಮಾಡಿದ್ದಾರೆ.
 

Share this Video
  • FB
  • Linkdin
  • Whatsapp

ಚಿಕ್ಕಮಗಳೂರು: ಜಿಲ್ಲೆಯ ಕೊಪ್ಪ ತಾಲೂಕಿನ ಸ್ವರ್ಣಪೀಠಿಕೇಶ್ವರಿ ದತ್ತಾಶ್ರಮದಲ್ಲಿ ಡಿ.ಕೆ. ಶಿವಕುಮಾರ್‌ ಸಿಎಂ ಆಗಬೇಕು ಎಂಬ ಕೂಗು ಕೇಳಿಬರುತ್ತಿದೆ. ಡಿಸಿಎಂ ಡಿ.ಕೆ ಶಿವಕುಮಾರ್‌ ಅವರು ಸಿಎಂ ಆಗುವಂತೆ ಆಶೀರ್ವದಿಸಿ ಎಂದು ಚಿಕ್ಕಮಗಳೂರು ಕಾಂಗ್ರೆಸ್ ಶಾಸಕ ಹೆಚ್.ಡಿ ತಮ್ಮಯ್ಯ ಮನವಿ ಮಾಡಿದ್ದಾರೆ.ಗೌರಿಗದ್ದೆಯಲ್ಲಿ ಡಿಕೆಶಿ ಸಿಎಂ ಆಗುವಂತೆ ಆಶೀರ್ವದಿಸಿ ಎಂದು ಶಾಸಕ ತಮ್ಮಯ್ಯ ವಿನಯ್‌ ಗುರೂಜಿ ಬಳಿ ಕೇಳಿಕೊಂಡಿದ್ದಾರೆ. ಡಿಕೆಶಿ ಸಿಎಂ ಆಗುವ ಆಸೆಯನ್ನ ನೂರಾರು ಜನರ ಮುಂದೆ ತಮ್ಮಯ್ಯ ಹೊರಹಾಕಿದ್ದಾರೆ. ನಮಗೆಲ್ಲ ಟಿಕೆಟ್ ನೀಡಿ ತುಂಬಾ ಸಹಾಯ ಮಾಡಿದ್ದಾರೆ. ಅವರಿಗೆ ಸಿಎಂ ಆಗುವಂತೆ ಆಶೀರ್ವದಿಸಿ ಎಂದು ಅವಧೂತ ವಿನಯ್ ಗುರೂಜಿ ಬಳಿ ಮನವಿ ಮಾಡಿದ್ದಾರೆ.ಜೊತೆಗೆ ಜೆಡಿಎಸ್‌ನ ವಿಧಾನ ಪರಿಷತ್ ಸದಸ್ಯ ಶರವಣ ಡಿಕೆಶಿ ಸಿಎಂ ಆಗಲಿ ಎಂದು ಹೇಳಿದ್ದಾರೆ. 

ಇದನ್ನೂ ವೀಕ್ಷಿಸಿ: ನಾವೂ ಕಾಂಗ್ರೆಸ್‌ಗೆ ಮತ ಹಾಕಿದ್ದೇವೆ, ಬಸ್ ಯಾಕೆ ನಿಲ್ಲಿಸಲ್ಲ: ರಸ್ತೆಯಲ್ಲಿ ಮಂಗಳಮುಖಿಯರ ರಂಪಾಟ

Related Video