
ನಾವೂ ಕಾಂಗ್ರೆಸ್‌ಗೆ ಮತ ಹಾಕಿದ್ದೇವೆ, ಬಸ್ ಯಾಕೆ ನಿಲ್ಲಿಸಲ್ಲ: ರಸ್ತೆಯಲ್ಲಿ ಮಂಗಳಮುಖಿಯರ ರಂಪಾಟ
ಕೈ ಅಡ್ಡ ಹಾಕಿದ್ರೂ ಬಸ್ ನಿಲ್ಲಿಸದಕ್ಕೆ, ಬಸ್ ತಡೆದು ಮಂಗಳಮುಖಿಯರು ಬೀದಿ ರಂಪಾಟ ನಡೆಸಿದ್ದಾರೆ.
ಚಿಕ್ಕೋಡಿ: ಕೈ ಮಾಡಿದ್ರೂ ಕೆಎಸ್‌ಆರ್‌ಟಿಸಿ ಬಸ್ ಡ್ರೈವರ್ ಬಸ್ ನಿಲ್ಲಿಸದ ಹಿನ್ನೆಲೆ ಮಂಗಳಮುಖಿಯರು ರಂಪಾಟ ನಡೆಸಿದ್ದಾರೆ. ಬಸ್ ತಡೆದು ಬೀದಿ ರಂಪಾಟ ಮಾಡಿದ್ದಾರೆ. ನಾವು ಕೂಡ ಕಾಂಗ್ರೆಸ್‌ಗೆ ಮತ ಹಾಕಿದ್ದೇವೆ. ನಮಗ್ಯಾಕೆ ಬಸ್ ನಿಲ್ಲಿಸುವುದಿಲ್ಲ ಎಂದು ರಂಪಾಟ ಮಾಡಿದ್ದಾರೆ. ಈ ಘಟನೆ ಬೆಳಗಾವಿಯ ಜಿಲ್ಲೆಯ ರಾಯಭಾಗ ತಾಲೂಕಿನ ಹಾರೂಗೇರಿಯಲ್ಲಿ ನಡೆದಿದೆ. ಹಾರೂಗೇರಿ ಬಸ್ ನಿಲ್ದಾಣದಲ್ಲಿ ಡ್ರೈವರ್‌ನನ್ನು ಮಂಗಳಮುಖಿಯರು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ. ಮಹಿಳೆಯರಿಗೆ ಬಸ್ ನಿಲ್ಲಿಸ್ತೀರಿ ನಮಗ್ಯಾಕೆ ಬಸ್ ನಿಲ್ಲಿಸಲ್ಲ ಎಂದು ಗಲಾಟೆ ಮಾಡಿದ್ದಾರೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಇದನ್ನೂ ವೀಕ್ಷಿಸಿ: ಗಡಿ ವಿವಾದ ಬಳಿಕ, ಮಹದಾಯಿ ವಿಚಾರದಲ್ಲೂ 'ಮಹಾ'ಪುಂಡಾಟ: ಗೋವಾಗೆ ಸಿಎಂ ಶಿಂದೆ ಸಾಥ್