ನಾನು ಭೂತನೂ ಅಲ್ಲ, ಪಿಶಾಚಿಯೂ ಅಲ್ಲ, ನಾನು ಮನುಷ್ಯ: ಸಿದ್ದುಗೆ ಸೋಮಣ್ಣ ಟಾಂಗ್‌

ವರುಣದಲ್ಲಿನ ಸಿದ್ದು ಪ್ರಚಾರಕ್ಕೆ ಸೋಮಣ್ಣ ವ್ಯಂಗ್ಯ
ಅವರು ಎಷ್ಟು ಬಾರಿಯಾದ್ರೂ ಪ್ರಚಾರ ಮಾಡಲಿ
ನಾನು ಅವರನ್ನು ಪ್ರಶ್ನೆ ಮಾಡಲ್ಲ ಎಂದ ಸೋಮಣ್ಣ

Share this Video
  • FB
  • Linkdin
  • Whatsapp

ಮೈಸೂರು: ರಾಜ್ಯದಲ್ಲಿ ವಿಧಾನಸಭಾ ಚುನಾವಣಾ ಅಖಾಡ ರಂಗೇರಿದ್ದು,ವರುಣದಲ್ಲಿ ನಾಯಕರ ನಡುವಿನ ಟಾಕ್‌ ಫೈಟ್‌ ಸಹ ಜೋರಾಗಿದೆ. ನಾನು ಭೂತನೂ ಅಲ್ಲ, ಪಿಶಾಚಿಯೂ ಅಲ್ಲ, ನಾನು ಮನುಷ್ಯ ಎಂದು ಹೇಳುವ ಮೂಲಕ ಬಿಜೆಪಿ ಅಭ್ಯರ್ಥಿ ವಿ. ಸೋಮಣ್ಣ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಹೆಚ್ಚಿನ ಪ್ರಚಾರವನ್ನು ವ್ಯಂಗ್ಯವಾಡಿದ್ದಾರೆ. ಸಿದ್ದರಾಮಯ್ಯ, ಅವರ ಕರ್ತವ್ಯ ಮಾಡುತ್ತಿದ್ದಾರೆ. ನಾವಿಬ್ಬರೂ ಒಟ್ಟಿಗೆ ಕೆಲಸ ಮಾಡಿದ್ದೇವೆ. ಅವರು ನನಗಿಂತ ದೊಡ್ಡ ನಾಯಕರು. ಸಿದ್ದರಾಮಯ್ಯ ಅವರು ಪ್ರಚಾರಕ್ಕೆ ಎಷ್ಟು ಬಾರಿಯಾದ್ರೂ ಬರಲಿ. ಅದನ್ನು ನಾನು ಯಾಕೆ ಪ್ರಶ್ನೆ ಮಾಡಬೇಕು ಎಂದು ಸೋಮಣ್ಣ ಕೇಳಿದ್ದಾರೆ. 

ಇದನ್ನೂ ವೀಕ್ಷಿಸಿ: ವರುಣದಲ್ಲಿ ಸಿದ್ದು ಸತತ ಪ್ರಚಾರ: 'ಆ ಭಯ ಇರಬೇಕು' ಎಂದ ಪ್ರತಾಪ್ ಸಿಂಹ

Related Video