ವರುಣದಲ್ಲಿ ಸಿದ್ದು ಸತತ ಪ್ರಚಾರ: 'ಆ ಭಯ ಇರಬೇಕು' ಎಂದ ಪ್ರತಾಪ್ ಸಿಂಹ

ವರುಣದಲ್ಲಿ ಸಿದ್ದರಾಮಯ್ಯ ಸತತ ಪ್ರಚಾರ
ಸಿದ್ದುಗೆ ಟಾಂಗ್‌ ಕೊಟ್ಟ ಪ್ರತಾಪ್‌ ಸಿಂಹ 
ಪ್ರತಾಪ್‌ ಸಿಂಹ ಯಾರು ಎಂದ ಸಿದ್ದರಾಮಯ್ಯ

Share this Video
  • FB
  • Linkdin
  • Whatsapp

ಮೈಸೂರು: ಈ ಬಾರಿಯ ವಿಧಾನಸಭಾ ಚುನಾವಣಾ ಅಖಾಡ ರಂಗೇರಿದ್ದು, ಕಾಂಗ್ರೆಸ್‌ ಅಭ್ಯರ್ಥಿ ಮತ್ತು ಮಾಜಿ ಸಿಎಂ ಸಿದ್ದರಾಮಯ್ಯ ವರುಣದಲ್ಲಿ ಪ್ರಚಾರಕ್ಕೆ ಇಳಿದಿದ್ದಾರೆ. ಸಿದ್ದು ಪ್ರಚಾರಕ್ಕೆ ಇಳಿದಿರುವುದನ್ನು ಸಂಸದ ಪ್ರತಾಪ್‌ ಸಿಂಹ ವ್ಯಂಗ್ಯವಾಡಿದ್ದಾರೆ. ಸಿದ್ದರಾಮಯ್ಯನವರು ನಾಮಪತ್ರ ಸಲ್ಲಿಸಲು ಮಾತ್ರ ಬರುತ್ತೇನೆ ಎಂದಿದ್ರು. ಆದ್ರೆ ಈಗ ವರುಣದಲ್ಲಿ ಪ್ರಚಾರಕ್ಕೆ ಇಳಿದಿದ್ದಾರೆ. ಬಿಜೆಪಿ ಅಭ್ಯರ್ಥಿ ವಿ. ಸೋಮಣ್ಣ ಸ್ಪರ್ಧೆಯಿಂದ ಸಿದ್ದರಾಮಯ್ಯ ಅವರಿಗೆ ಭಯ ಶುರುವಾದಂತೆ ಕಾಣುತ್ತದೆ. ಹಾಗಾಗಿ ಅವರು ಪ್ರಚಾರಕ್ಕೆ ಬಂದಿದ್ದಾರೆ ಎಂದು ಪ್ರತಾಪ್‌ ಸಿಂಹ ಟಾಂಗ್ ನೀಡಿದ್ದಾರೆ. ಅಲ್ಲದೇ ಸಿದ್ದರಾಮಯ್ಯನವರೇ ಆ ಭಯ ನಿಮಗೆ ಇರಬೇಕು ಎಂದಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಸಿದ್ದರಾಮಯ್ಯ ಪ್ರತಾಪ್‌ ಸಿಂಹ ಯಾರು ಎಂದು ಕೇಳಿದ್ದಾರೆ.

ಇದನ್ನೂ ವೀಕ್ಷಿಸಿ: ಸಿದ್ದು ಸ್ವ ಕ್ಷೇತ್ರದಲ್ಲಿ ಜಂಪಿಂಗ್ ಪಾಲಿಟಿಕ್ಸ್‌: ಕಾಂಗ್ರೆಸ್‌ ತೊರೆದು ಬಿಜೆಪಿ ಸೇರಿದ ಕಾರ್ಯಕರ್ತರು

Related Video