Asianet Suvarna News Asianet Suvarna News

'ಕೈ'ಕಮಾಂಡ್ ಕೈಯಲ್ಲಿ ಸಿದ್ದರಾಮಯ್ಯ ಸಿಂಹಾಸನ ಭವಿಷ್ಯ: ತಲೆದಂಡವೋ.. ಪದತ್ಯಾಗವೋ.. ರಣರಂಗದಲ್ಲಿ ಕುಸ್ತಿಯೋ..?

ಸಿದ್ದು ರಾಜೀನಾಮೆಗೆ ಪ್ರತಿಪಕ್ಷಗಳು ಪಟ್ಟ ಹಿಡಿದಿರೋ ಹೊತ್ತಲ್ಲಿ, ತಲೆದಂಡಕ್ಕೆ ಕಾಂಗ್ರೆಸ್ ಹೈಕಮಾಂಡ್ ಮುಂದಾಗುತ್ತಾ..? ಸಿದ್ದು ಸಿಂಹಾಸನದ ವಿಚಾರದಲ್ಲಿ ಕೈ ಹೈಕಮಾಂಡ್'ನ ನಿಲುವೇನು..? ತಲೆದಂಡನಾ, ಬಂಡೆಯಂಥಾ ಬೆಂಬಲನಾ..?

First Published Aug 18, 2024, 1:56 PM IST | Last Updated Aug 18, 2024, 1:56 PM IST

ಸಿದ್ದರಾಮಯ್ಯನವರಿಗೆ ಎದುರಾಯ್ತು ಜೀವನದ ಅತೀ ದೊಡ್ಡ ಅಗ್ನಿಪರೀಕ್ಷೆ..! ಅರಶಿಣ ಕುಂಕುಮದ ಭೂಮಿಯಿಂದಲೇ ಸಿದ್ದು ಸಿಂಹಾಸನಕ್ಕೆ ಕಂಟಕ..! ಮುಖ್ಯಮಂತ್ರಿ ವಿರುದ್ಧ ರಾಜ್ಯಪಾಲರ ಪ್ರಾಸಿಕ್ಯೂಷನ್ ಅಸ್ತ್ರ.., ಸಿದ್ದರಾಮಯ್ಯ ರಾಜೀನಾಮೆಗೆ ಕಮಲದಳ ಪಾಳೆಯದ ಬಿಗಿಪಟ್ಟು..! ಕಾನೂನಿನ ಬಲೆಯಲ್ಲಿ ಬಂಧಿಯಾಗಿರೋ ಸಿದ್ದರಾಮಯ್ಯ, ಮುಂದೇನ್ಮಾಡ್ತಾರೆ..? ರಾಜೀನಾಮೆಗೆ ಸೂಚನೆ ನೀಡುತ್ತಾ ಕಾಂಗ್ರೆಸ್ ಹೈಕಮಾಂಡ್..? ಸಿದ್ದು ಸಿಂಹಾಸನದ ವಿಚಾರದಲ್ಲಿ ಕೈಕಮಾಂಡ್ ನಿಲುವೇನು..? ಕಾನೂನಿನ ಬಲೆಯಲ್ಲಿ ಬಂಧಿಯಾಗಿರುವ ಸಿದ್ದರಾಮಯ್ಯ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಡ್ತಾರಾ..? 

ಸಿದ್ದು ರಾಜೀನಾಮೆಗೆ ಪ್ರತಿಪಕ್ಷಗಳು ಪಟ್ಟ ಹಿಡಿದಿರೋ ಹೊತ್ತಲ್ಲಿ, ತಲೆದಂಡಕ್ಕೆ ಕಾಂಗ್ರೆಸ್ ಹೈಕಮಾಂಡ್ ಮುಂದಾಗುತ್ತಾ..? ಸಿದ್ದು ಸಿಂಹಾಸನದ ವಿಚಾರದಲ್ಲಿ ಕೈ ಹೈಕಮಾಂಡ್'ನ ನಿಲುವೇನು..? ತಲೆದಂಡನಾ, ಬಂಡೆಯಂಥಾ ಬೆಂಬಲನಾ..? ಮುಡಾ ಮಾಯಾಜಾಲದ ಬಲೆಯಲ್ಲಿ ಬಂಧಿಯಾಗಿರುವ ಸಿದ್ದರಾಮಯ್ಯ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಡ್ತಾರಾ..? ರಾಜ್ಯಪಾಲರು ಸಿದ್ದು ವಿರುದ್ಧ ಪ್ರಾಸಿಕ್ಯೂಷನ್'ಗೆ ಅನುಮತಿ ನೀಡಿದ ಬೆನ್ನಲ್ಲೇ ಎದ್ದಿರೋ ಪ್ರಶ್ನೆ ಇದು. ಸಿದ್ದರಾಮಯ್ಯನವರ ಸಿಂಹಾಸನದ ವಿಚಾರದಲ್ಲಿ ಕಾಂಗ್ರೆಸ್ ಹೈಕಮಾಂಡ್'ನ ನಿಲುವೇನು..? ತಲೆದಂಡನಾ, ಸಿದ್ದುಗೆ ಬೆಂಬಲನಾ..? ಸದ್ಯದ ಮಟ್ಟಿಗೆ ಕಾಂಗ್ರೆಸ್ ಹೈಕಮಾಂಡ್ ಸಿದ್ದರಾಮಯ್ಯನವರ ಬೆಂಬಲಕ್ಕೆ ನಿಂತು ಬಿಟ್ಟಿದೆ. ಮುಂದೇನು..? ಕಾನೂನು ಹೋರಾಟ.. ಆ ಕಾನೂನು ಹೋರಾಟ ಹೇಗಿರಲಿದೆ..? 

ಸಿದ್ದು ಸಿಂಹಾಸನದ ಭವಿಷ್ಯ ನಿರ್ಧರಿಸಲಿರೋ ಆ ಕಾನೂನು ಹೋರಾಟದ ಬಗ್ಗೆ ಇಂಚಿಂಚೂ ಮಾಹಿತಿ ಇಲ್ಲಿದೆ. ರಾಜೀನಾಮೆ ಪ್ರಶ್ನೆಯೇ ಇಲ್ಲ ಅಂತಿದ್ದಾರೆ ಸಿದ್ದರಾಮಯ್ಯ. ಸಿದ್ದು ಬೆಂಬಲಕ್ಕೆ ಬಂಡೆಯಂತೆ ನಿಂತು ಬಿಟ್ಟಿದೆ ಕೈ ಹೈಕಮಾಂಡ್. ಹಾಗಾದ್ರೆ ಮುಂದೇನು..? ಅದುವೇ ಕಾನೂನು ಹೋರಾಟ. ಸಿದ್ದರಾಮಯ್ಯ ಪದತ್ಯಾಗವೋ, ತಲೆದಂಡವೋ.. ಇದನ್ನು ನಿರ್ಧರಿಸಲಿರೋ ಕಾನೂನು ಹೋರಾಟದ ಸ್ವರೂಪ ಹೇಗಿರಲಿದೆ ಅನ್ನೋದ್ರ ಇಂಟ್ರೆಸ್ಟಿಂಗ್ ಸ್ಟೋರಿ ಇಲ್ಲಿದೆ ನೋಡಿ. ಸದ್ಯಕ್ಕಂತೂ ಸಿದ್ದರಾಮಯ್ಯನವರು ರಾಜೀನಾಮೆ ಕೊಡೋದು ಡೌಟು. ಕಾನೂನಿನ ಕುಣಿಗೆ ಅದೆಷ್ಟು ಬಿಗಿಯಾಗಲಿದೆ ಅನ್ನೋದ್ರ ಮೇಲೆ ಸಿದ್ದು ಸಿಂಹಾಸನದ ಭವಿಷ್ಯ ನಿಂತಿದೆ. 

Video Top Stories