Suvarna Special: ಮತ್ತೆ ಕಾಡುತ್ತಿದೆ ನವಂಬರ್ ನಿಗೂಢ ರಹಸ್ಯ! 5 ವರ್ಷ ನಾನೇ ಸಿಎಂ.. ಸಿದ್ದು ಪ್ರತಿಜ್ಞೆ!

Siddaramaiah Firm on Full Term Amidst Karnataka November Kranthi Buzz  ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ನಾಯಕತ್ವ ಹಂಚಿಕೆಯ ಚರ್ಚೆ ಮತ್ತೆ ಮುನ್ನೆಲೆಗೆ ಬಂದಿದೆ. ಎರಡೂವರೆ ವರ್ಷದ ಅವಧಿ ಸಮೀಪಿಸುತ್ತಿದ್ದಂತೆ ಅಧಿಕಾರ ಬದಲಾವಣೆಯ ಮಾತುಗಳು ಕೇಳಿಬರುತ್ತಿದೆ.

Share this Video
  • FB
  • Linkdin
  • Whatsapp

ಬೆಂಗಳೂರು (ಅ.3): ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ಅಸ್ತಿತ್ವಕ್ಕೆ ಬಂದಾಗಿನಿಂದಲೂ ನಾಯಕತ್ವದ ಹಂಚಿಕೆ ಕುರಿತು ಕೇಳಿಬರುತ್ತಿದ್ದ ನಿಗೂಢ ರಹಸ್ಯ ಮತ್ತೊಮ್ಮೆ ತೀವ್ರಗೊಂಡಿದೆ. ಏಕೆಂದರೆ ಶೀಘ್ರದಲ್ಲೇ ಸಮ್ಮಿಶ್ರ ಸರ್ಕಾರದ ಎರಡೂವರೆ ವರ್ಷದ ಅವಧಿ ಪೂರ್ಣಗೊಳ್ಳುವ ಸಂದರ್ಭ ಎದುರಾಗಿದ್ದು, ಮತ್ತೊಮ್ಮೆ ಅಧಿಕಾರ ಬದಲಾವಣೆಯ ಮಾತುಗಳು ರಾಜಕೀಯ ವಲಯದಲ್ಲಿ ಮಾರ್ದನಿಸುತ್ತಿವೆ.

ಸೆಪ್ಟೆಂಬರ್ ತಿಂಗಳು ಕಳೆದು ಅಕ್ಟೋಬರ್ ಆರಂಭವಾಗುತ್ತಿದ್ದಂತೆಯೇ, ಇಡೀ ಕೈ ಕೋಟೆಯೊಳಗೆ ನವೆಂಬರ್ ಕ್ರಾಂತಿಯ ರಣ ಕಹಳೆ ಮೊಳಗುತ್ತಿದೆಯಾ ಎಂಬ ಪ್ರಶ್ನೆ ಎದ್ದಿದೆ.

ಕರೂರು ಕಾಲ್ತುಳಿತ ಬೆನ್ನಲ್ಲೇ ದಳಪತಿ ವಿಜಯ್ ಮೇಲೆ ಚಪ್ಪಲಿ ಎಸೆತ ಮತ್ತು ಬಾಂಬ್ ಬೆದರಿಕೆ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯ ರಾಜಕಾರಣದ ಅತ್ಯಂತ ಶಕ್ತಿಶಾಲಿ ಮತ್ತು ಪ್ರಭಾವಿ ನಾಯಕರು. ಅವರು ಯಾವುದಕ್ಕಾದರೂ ಪಟ್ಟು ಹಿಡಿದರು ಅಂದರೆ, ಅದನ್ನು ಸಾಧಿಸಿಯೇ ಸಿದ್ಧ. ಈ ಹಿನ್ನೆಲೆಯಲ್ಲಿ, "ಐದು ವರ್ಷ ನಾನೇ ಸಿಎಂ" ಎಂಬರ್ಥದಲ್ಲಿ ಅವರ ಪ್ರತಿಜ್ಞೆ ಇದೆ ಎಂದು ಅವರ ಆಪ್ತ ಮೂಲಗಳು ಹೇಳುತ್ತಿವೆ. ಇಷ್ಟು ಸುಲಭವಾಗಿ ಅವರು ಪಟ್ಟ ಬಿಟ್ಟುಕೊಡುವುದಿಲ್ಲ ಎಂಬುದು ರಾಜಕೀಯ ಲೆಕ್ಕಾಚಾರವಾಗಿದೆ.

Related Video