
ಅನಾಮಿಕನ ಹಿಂದಿದ್ಯಾ ಅಪಪ್ರಚಾರದ ಹುನ್ನಾರ? ಕೈ ಪಡೆಯಿಂದಲೂ ಕೇಳಿ ಬರ್ತಿದೆ ಅಪಸ್ವರದ ಧ್ವನಿ!
ಧರ್ಮಸ್ಥಳದಲ್ಲಿ ಒಂದಾದ ಮೇಲೆ ಒಂದು ಸ್ಥಳದಲ್ಲಿ ಮಣ್ಣು ಹೊರ ತೆಗೆಯಲಾಗ್ತಲೇ ಇದೆ.. ಆದ್ರೆ ಅನಾಮಿಕ ದೂರುದಾರ ಹೇಳಿದ ಹಾಗೆ ಅಲ್ಲಿ ಯಾವ ಅಸ್ಥಿಯೂ ಸಿಗ್ತಿಲ್ಲ.. ಈ ಮಧ್ಯೆ ರಾಜಕೀಯ ಜಟಾಪಟಿ ಜೋರಾಗಿದೆ.
ಬುರುಡೆ ಶೋಧ..ಖಾಲಿ ಗುಂಡಿ.. ಒಡೆದ ತಾಳ್ಮೆ ಕಟ್ಟೆ..! ಅನಾಮಿಕನ ಹಿಂದಿದ್ಯಾ ಅಪಪ್ರಚಾರದ ಹುನ್ನಾರ..? ಸದನದೊಳಗೂ ಕಿಚ್ಚು. ಹೊರಗೂ ಆಕ್ರೋಶ.. ಶುರು ‘ಧರ್ಮ’ ಯುದ್ಧ..! ಧರ್ಮಸ್ಥಳ ಚಲೋ. ಹೋರಾಟಕ್ಕೆ ಸಜ್ಜಾದ ಕಮಲ ಪಡೆ..! ಇದೇ ಇವತ್ತಿನ ಸುವರ್ಣ ಸ್ಪೆಷಲ್ ಧರ್ಮಸ್ಥಳ ಕಿಚ್ಚು. ಬುರುಡೆ ಬೆಂಕಿ. ದಿನಗಳು ಉರುಳುತ್ತಲೇ ಇವೆ.. ಧರ್ಮಸ್ಥಳದಲ್ಲಿ ಒಂದಾದ ಮೇಲೆ ಒಂದು ಸ್ಥಳದಲ್ಲಿ ಮಣ್ಣು ಹೊರ ತೆಗೆಯಲಾಗ್ತಲೇ ಇದೆ. ಆದ್ರೆ ಅನಾಮಿಕ ದೂರುದಾರ ಹೇಳಿದ ಹಾಗೆ ಅಲ್ಲಿ ಯಾವ ಅಸ್ಥಿಯೂ ಸಿಗ್ತಿಲ್ಲ.. ಈ ಮಧ್ಯೆ ರಾಜಕೀಯ ಜಟಾಪಟಿ ಜೋರಾಗಿದೆ. ಧರ್ಮಸ್ಥಳ ಚಲೋ ಅಂತ ಬಿಜೆಪಿ ಸಜ್ಜಾಗಿದ್ರೆ, ಕೈ ಸಾಮ್ರಾಜ್ಯದೊಳಗಿಂದಲೇ ಇನ್ನೆಷ್ಟು ಗುಂಡಿ ಅಗಿತೀರಿ ಅನ್ನೋ ಪ್ರಶ್ನೆಗಳು ಕೇಳಿ ಬರ್ತಿವೆ. ಇಷ್ಟೆಲ್ಲದರ ಮಧ್ಯೆ ರಾಜ್ಯಾದ್ಯಂತ ಜನರು ಕೂಡ ಧರ್ಮಸ್ಥಳದ ಪರವಾಗಿ ಬೀದಿಗಿಳಿದಿದ್ದಾರೆ.
ಇನ್ನೆಷ್ಟು ದಿನ ಅನಾಮಿಕ ತೋರಿಸಿದ ಕಡೆಯೆಲ್ಲಾ ಗುಂಡಿ ಅಗೆಯುತ್ತೀರಿ ಅನ್ನೋ ಪ್ರಶ್ನೆಯನ್ನ ಜನ್ರು ಕೇಳೋಕೆ ಶುರು ಮಾಡಿದ್ದಾರೆ.. ರಾಜ್ಯಾದ್ಯಂತ ಧರ್ಮಸ್ಥಳದ ಪರವಾಗಿ ಪ್ರತಿಭಟನೆಗಳೂ ನಡೆದಿವೆ. ರಾಜ್ಯಾದ್ಯಂತ ಸಿಡಿದೆದ್ದಿರೋ ಧರ್ಮಸ್ಥಳ ಮಂಜುನಾಥ ಸ್ವಾಮಿ ಭಕ್ತರು, ಕ್ಷೇತ್ರದ ಬಗ್ಗೆ ಅಪಪ್ರಚಾರ ಮಾಡಲಾಗ್ತಿದೆ ಅಂತ ತಮ್ಮ ಆಕ್ರೋಶ ಹೊರಹಾಕಿದ್ದಾರೆ. ಹಾಗಿದ್ರೆ ರಾಜ್ಯಾದ್ಯಂತ ಹೇಗಿತ್ತು ಭಕ್ತರ ಹೋರಾಟ..? ಅವರ ಆಗ್ರಹವೇನು..? ಆಕ್ರೋಶವೇನು..? ಭಕ್ತರು ಹೀಗೆ ಬೀದಿಗಿಳಿದು ಹೋರಾಡ್ತಿದ್ರೆ, ಅತ್ತ ಅನಾಮಿಕ ದೂರುದಾರ ಮತ್ತೊಂದು ಹೊಸ ಬೇಡಿಕೆಯನ್ನ ಎಸ್ಐಟಿ ಮುಂದಿಟ್ಟಿದ್ದಾನೆ. ಅನಾಮಿಕ ದೂರುದಾರ ಮತ್ತೊಂದು ಬಾಂಬ್ ಸಿಡಿಸಿದ್ದಾನೆ. ಹೊಸದಾಗಿ 30 ಜಾಗ ಗುರುತಿಸ್ತೀನಿ. ಅಲ್ಲಿ 300ಕ್ಕೂ ಹೆಚ್ಚು ಹೆಣ ಇದ್ದಾವೆ. ಅಲ್ಲಿ ಶೋಧಕಾರ್ಯ ನಡೆಸುವಂತೆ ಮುಸುಕುಧಾರಿ ಎಸ್ಐಟಿ ಮುಂದೆ ಬೇಡಿಕೆ ಇಟ್ಟಿದ್ದಾನಂತೆ.