DK shivakumar: ಅವರು ಭಾವನೆ ಮೇಲೆ ಹೋಗ್ತಾ ಇದ್ದಾರೆ, ನಾವು ಬದುಕಿನ ಮೇಲೆ ಹೋಗ್ತಾ ಇದ್ದೇವೆ: ಬಿಜೆಪಿ ವಿರುದ್ಧ ಡಿಕೆಶಿ ಕಿಡಿ

ನಾವು ಹಿಂದೂಗಳೇ, ಧರ್ಮ ಬಿಡು ಎಂದು ಹೇಳುವವರು ಯಾರು?, ರಾಮಮಂದಿರ ಉದ್ಘಾಟನೆ ಆಗುವ ಮುನ್ನವೇ ಅಕ್ಷತೆ ಕಾಳನ್ನು ಮನೆ ಮನೆಗೆ ಹಂಚಿದರೆ ಅದನ್ನು ಮೋದಿ ವೇವ್‌ ಎನ್ನಲು ಆಗುತ್ತದಯೇ ಎಂದು ಡಿ ಕೆ ಶಿವಕುಮಾರ್‌ ಪ್ರಶ್ನಿಸಿದ್ದಾರೆ.  
 

First Published Apr 7, 2024, 5:32 PM IST | Last Updated Apr 7, 2024, 5:32 PM IST

ನಾನು ನೋಡ್ತಾ ಇದ್ದೇನೆ, ನನಗೆ ಮೋದಿ ಬಗ್ಗೆ ಯಾವುದೇ ವೇವ್‌ ಕಾಣಲಿಲ್ಲ. ಕೆಲವರು ದೇವಸ್ಥಾನ, ರಾಮಮಂದಿರದ ಬಗ್ಗೆ ಮಾತನಾಡುತ್ತಾರೆ. ಆದರೆ ರಾಮ ಮಂದಿರ ನಮ್ಮದಲ್ಲವೇ ಎಂದು  ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ (DK Shivakumar) ಹೇಳಿದ್ದಾರೆ. ಬಿಜೆಪಿ(BJP)-ಜೆಡಿಎಸ್‌(JDS) ಮೈತ್ರಿ ನಮಗೆ ಸವಾಲಲ್ಲ ಎಂದು ತಮ್ಮ ಡಿ ಕೆ ಸುರೇಶ್‌(DK Suresh) ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದ ಅವರು, ಬಿಜೆಪಿಯ ಎಲ್ಲಾ ಸಂಸದರನ್ನೂ ಸಹ ಕೇಳಿ, ನನ್ನ ತಮ್ಮನ ಬಗ್ಗೆ ಉತ್ತಮವಾದ ಅಭಿಪ್ರಾಯ ಇದೆ. ಒಬ್ಬ ಪಂಚಾಯತಿ ಮೆಂಬರ್‌ ತರ ನಿಂತುಕೊಂಡು ಕೆಲಸ ಮಾಡುತ್ತಾನೆ. ನಾನೂ ಸಹ ನನ್ನ ಕ್ಷೇತ್ರಕ್ಕೆ ಒಮ್ಮೆ ಮಾತ್ರ ಹೋಗಿದ್ದೆ. ಆದರೂ ನನಗೆ ದೊಡ್ಡ ಮಟ್ಟದ ಲೀಡ್‌ ಬಂತು. ಇದಕ್ಕೆ ಹೊಣೆಯಾರು ಎಂದು ತಮ್ಮನನ್ನು ಹೊಗಳಿದ್ದಾರೆ. ಈ ವೇಳೆ ರಾಜಕಾರಣಿಗಳ ಮಕ್ಕಳಿಗೆ ಯಾಕೆ ಟಿಕೆಟ್‌ ನೀಡಲಾಗಿದೆ ಅನ್ನೋದರ ಬಗ್ಗೆ ಮಾತನಾಡಿ, ಜನರು, ಸರ್ವಜನಿಕ ಜೀವನ, ಕಾರ್ಯಕರ್ತರು ಇವೆಲ್ಲಾ ಅವರಿಗೆ ತುಂಬಾ ಚೆನ್ನಾಗಿ ತಿಳಿದಿರುತ್ತದೆ. ನಾವು ಟಿಕೆಟ್‌ ಕೊಡುವುದು ಬೇಡ ಅಂದರೂ ಕಾರ್ಯಕರ್ತರೂ ಬಿಡುವುದಿಲ್ಲ ಎಂದಿದ್ದಾರೆ.

ಇದನ್ನೂ ವೀಕ್ಷಿಸಿ:  Siddaramaiah: "ಗೆದ್ದರೆ ಅಧಿಕಾರ, ಸೋತರೆ ತಲೆದಂಡ.." ಡಿಸಿಎಂ ಡಿಕೆ ವಾರ್ನಿಂಗ್! ನಾನು ಇರ್ಬೇಕೋ ಬೇಡ್ವೋ” ಅಂದಿದ್ದೇಕೆ ಸಿಎಂ ?