Asianet Suvarna News Asianet Suvarna News

Siddaramaiah: "ಗೆದ್ದರೆ ಅಧಿಕಾರ, ಸೋತರೆ ತಲೆದಂಡ.." ಡಿಸಿಎಂ ಡಿಕೆ ವಾರ್ನಿಂಗ್! ನಾನು ಇರ್ಬೇಕೋ ಬೇಡ್ವೋ” ಅಂದಿದ್ದೇಕೆ ಸಿಎಂ ?

ಲೋಕಯುದ್ಧದಲ್ಲಿ ಕಾಂಗ್ರೆಸ್ ಸೋತರೆ ಕಂಪಿಸಲಿದ್ಯಾ ರಾಜ್ಯ ರಾಜಕಾರಣ?
ಸ್ವಂತ ನೆಲದಲ್ಲೇ ಸಿಂಹಾಸನದ ಬಗ್ಗೆ ವರುಣಾ ವಾರಸ್ದಾರನ ಮಾತು..!
ಸಿದ್ದು ಸಂಪುಟದ ಮಂತ್ರಿಗಳಿಗೂ ಯುದ್ಧ ಗೆಲ್ಲುವ ಟಾಸ್ಕ್..ಟಾರ್ಗೆಟ್..!

ಹಿಟ್ ಔಟ್ or ಗೆಟ್ ಔಟ್... ಇದು ಲೋಕಯುದ್ಧ ಗೆಲ್ಲಲು ಕಾಂಗ್ರೆಸ್(Congress)ಪಾಳೆಯದಲ್ಲಿ ರೆಡಿಯಾಗಿರೋ ಯುದ್ಧತಂತ್ರ. ಅಂದ್ರೆ ಇದ್ರ ಅರ್ಥ ಮಾಡು ಇಲ್ಲ ಮಡಿ ಅಂತ. ಇದು ಸಿಎಂ ಸಿದ್ದರಾಮಯ್ಯ(Siddaramaiah) ಮತ್ತು ಡಿಸಿಎಂ ಡಿಕೆ ಶಿವಕುಮಾರ್(DK Shivakumar) ಅವರ ಯುದ್ಧ ಶಿಬಿರದಲ್ಲಿ ಸಿದ್ಧವಾಗಿರೋ ಜಂಟಿವ್ಯೂಹದ ಒಂಟಿ ಅಸ್ತ್ರ. ಅಸ್ತ್ರದ ಜೊತೆ ಒಂದು ಖಡಕ್ ವಾರ್ನಿಂಗ್. 20 ಸೀಟಗಳನ್ನು ರಾಜ್ಯದಲ್ಲಿ ಗೆದ್ದೇ ಸಿದ್ಧ ಅಂತ ಮುಖ್ಯಮಂತ್ರಿ ಸಿದ್ದರಾಮಯ್ಯ ಶಪಥ ಮಾಡಿದ್ದಾರೆ. ಮತ್ತೊಂದ್ಕಡೆ ಬಿಜೆಪಿ(BJP)-ಜೆಡಿಎಸ್(JDS) ದೋಸ್ತಿಗಳು 28ಕ್ಕೆ 28ನ್ನೂ ಗೆಲ್ಲೋ ಪಣ ತೊಟ್ಟು ರಣರಂಗ ಪ್ರವೇಶ ಮಾಡಿದ್ದಾರೆ. ಇರೋ 28ರಲ್ಲಿ 20 ಗೆಲ್ತೀವಿ ಅಂತ ಕಾಂಗ್ರೆಸ್ ನಾಯಕರು.. 28ಕ್ಕೆ ಇಪ್ಪತ್ತೆಂಟೂ ನಮ್ಮದೇ ಅಂತ ದೋಸ್ತಿಗಳು. ಯಾರು ಎಷ್ಟು ಗೆಲ್ತಾರೆ ಅನ್ನೋದು ಮಿಲಿಯನ್ ಡಾಲರ್ ಪ್ರಶ್ನೆ.. ಇದ್ರ ಮಧ್ಯೆ ಎದ್ದು ಕೂತಿರೋದು ಕೈ ನಾಯಕರ ಹಿಚ್ ಔಟ್ or ಗೆಟ್ ಔಟ್ ರಣವ್ಯೂಹ. ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಲೋಕಸಭಾ ಅಖಾಡದಲ್ಲಿ ಹಿಟ್ ಔಟ್ or ಗೆಟ್ ಔಟ್ ಯುದ್ಧಕ್ಕೆ ಇಳಿದಿದ್ದಾರೆ. ಸಿಎಂ-ಡಿಸಿಎಂಗೆ 20 ಸೀಟುಗಳನ್ನು ಗೆಲ್ಲೇಲೇಬೇಕು ಅನ್ನೋ ಹಠ. ಇದಕ್ಕಾಗಿ ಪಕ್ಷದ ಮುಖಂಡರಿಗೆ, ಕಾಂಗ್ರೆಸ್ ಕಾರ್ಯಕರ್ತರಿಗೆ ಟಾಸ್ಕ್ ಮೇಲೆ ಟಾಸ್ಕ್ ಕೊಡ್ತಾ ಇದ್ದಾರೆ. ಸಿಎಂ ಸಿದ್ದರಾಮಯ್ಯ ಅವರಂತೂ ಮೊನ್ನೆ ಮೊನ್ನೆಯಷ್ಟೇ ಸ್ವಕ್ಷೇತ್ರ ವರುಣಾದಲ್ಲಿ ಭಾಷಣ ಮಾಡ್ತಾ, 60 ಸಾವಿರ ಲೀಡ್ ಬರದೇ ಇದ್ರೆ, ನನ್ನ ಕುರ್ಚಿಯೇ ಅಲುಗಾಡತ್ತೆ ಅನ್ನೋ ಅರ್ಥದಲ್ಲಿ ಮಾತಾಡಿದ್ದಾರೆ.

ಇದನ್ನೂ ವೀಕ್ಷಿಸಿ:  Turning point: ಸಂಧಾನ ಫಲಿಸಲಿಲ್ಲ..ಸಂಘರ್ಷ ತಪ್ಪಲಿಲ್ಲ..ದೇಶವನ್ನೇ ಸುಡಲು ಹಬ್ಬಿತ್ತು ಪ್ರತೀಕಾರದ ಕಿಚ್ಚು!

Video Top Stories