ಈಗ ಕಾಂಗ್ರೆಸ್ 68% ಕಮಿಷನ್ ಸರ್ಕಾರ ಆಗಿದೆ: ಮಾಜಿ ಶಾಸಕ ಸುರೇಶ್ ಗೌಡ
ಈಗ ಕಾಂಗ್ರೆಸ್ ಸರ್ಕಾರ 68% ಕಮಿಷನ್ ಪಡೆಯುತ್ತಿದೆ ಎಂದು ಮಾಜಿ ಶಾಸಕ ಸುರೇಶ್ ಗೌಡ ಆರೋಪಿಸಿದ್ದಾರೆ.
ಬಿಜೆಪಿ ಮೇಲೆ ಕಾಂಗ್ರೆಸ್ ಈ ಹಿಂದೆ 40% ಕಮಿಷನ್ ಆರೋಪವನ್ನು ಮಾಡಿತ್ತು. ಆದ್ರೆ ಈಗ ಕಾಂಗ್ರೆಸ್ 68% ಕಮಿಷನ್ ಪಡೆಯುತ್ತಿದೆ ಎಂಬ ಆರೋಪ ಕೇಳಿಬಂದಿದೆ. ಅಲ್ಲದೇ ಈ ಆರೋಪವನ್ನು ಸಚಿವ ಚಲುವರಾಯಸ್ವಾಮಿ(Cheluvarayaswamy) ವಿರುದ್ಧ ಮಾಡಲಾಗಿದೆ. ಚಲುವರಾಯಸ್ವಾಮಿ ರೇಟ್ ಕಾರ್ಡ್ ನೂರಕ್ಕೆ ನೂರರಷ್ಟು ಸತ್ಯ. ವಾರಕ್ಕೆ ಒಂದು ದಿನ ಬಂದು ಕಲೆಕ್ಷನ್ ಮಾಡ್ತಾರೆ ಎಂದು ಮಾಜಿ ಶಾಸಕ ಸುರೇಶ್ ಗೌಡ(Suresh Gowda) ಆರೋಪ ಮಾಡಿದ್ದಾರೆ. ಕಾಂಗ್ರೆಸ್‌ನಲ್ಲಿ(Congress) ಗೆದ್ದಿರುವವರಲ್ಲಿ ಕೆಲವರು ಕ್ಯಾನ್ಸರ್‌ಗಳು. ಭ್ರಷ್ಟಚಾರ ದಾಖಲೆಗಳನ್ನು ಮುಂದಿನ ದಿನಗಳಲ್ಲಿ ಬಿಡುತ್ತೇವೆ. ನಾವು ತಂದಿರುವ ಗ್ರ್ಯಾಂಟ್‌ಗಳಿಗೆ ಇವರು ವಸೂಲಿ ಮಾಡುತ್ತಿದ್ದಾರೆ. ನಾಗಮಂಗಲಕ್ಕೆ ವಾರಕ್ಕೆ ಒಂದು ಬಾರಿ ಬರುವುದು, ಅಧಿಕಾರಿ ಕರೆದು ವಸೂಲಿ ಮಾಡುತ್ತಿದ್ದಾರೆ ಎಂದು ಸುರೇಶ್ ಗೌಡ ಆರೋಪಿಸಿದ್ದಾರೆ.
ಇದನ್ನೂ ವೀಕ್ಷಿಸಿ: ಮಾಜಿ ಸೈನಿಕನ ಮಡದಿಯ ಮೇಲೆಯೇ ಘೋರ ಅತ್ಯಾಚಾರ!?: ಏನಿತ್ತು ಆ ವಿಡಿಯೋದಲ್ಲಿ..?