ಮಾಜಿ ಸೈನಿಕನ ಮಡದಿಯ ಮೇಲೆಯೇ ಘೋರ ಅತ್ಯಾಚಾರ!?: ಏನಿತ್ತು ಆ ವಿಡಿಯೋದಲ್ಲಿ..?

ಹೊತ್ತಿ ಉರಿಯುತ್ತಿದೆ ಒಂದಿಡೀ ರಾಜ್ಯ..!
ಆಕ್ರೋಶದ ಜ್ವಾಲಾಮುಖಿಯ ಆಸ್ಫೋಟ..!
ದೇಶವನ್ನೇ ಕೆರಳಿಸಿದೆ ಘನಘೋರ ಅತ್ಯಾಚಾರ!
 

Share this Video
  • FB
  • Linkdin
  • Whatsapp

ಭಾರತದ ಅತ್ಯಂತ ಕಡಿಮೆ ಜನಸಂಖ್ಯೆ ಇರೋ ರಾಜ್ಯಗಳ ಪೈಕಿ, ಮಣಿಪುರ(Manipura) ಅನ್ನೋ ಪುಟ್ಟ ರಾಜ್ಯವೂ ಕೂಡ ಒಂದು. ಆದ್ರೆ ಈಗ ಆ ಪುಟ್ಟ ನಾಡಿನಲ್ಲಿ, ಅತಿ ದೊಡ್ಡ ಹೋರಾಟ, ವಿಧ್ವಂಸ ನಡೀತಿದೆ. ಎರಡು ಜನಾಂಗಗಳ ಮಧ್ಯೆ ಹುಟ್ಟಿಕೊಂಡ ದ್ವೇಷಾಸೂಯೆ, ಇವತ್ತು ಮಣಿಪುರಕ್ಕೆ ಘೋರ ಶಾಪವಾಗಿ ಬದಲಾಗಿದೆ. ಜುಲೈ 20ನೇ ತಾರೀಖು ಒಂದು ಅಮಾನುಷ ವಿಡಿಯೋ ಭಾರತದಾತ್ಯಂತ ವೈರಲ್ ಆಗಿತ್ತು. ಅದರಲ್ಲೇನಿತ್ತು ಅಂತ ನಾವ್ ನಿಮಗೆ ತೋರ್ಸೋದಿಲ್ಲ. ಯಾಕಂದ್ರೆ, ಅದನ್ನ ತೋರಿಸೋಕೆ ನಮಗೂ ಮನಸಿಲ್ಲ. ಅದನ್ನ ನೋಡಿದ್ರೆ ನಿಮಗೂ ನೆಮ್ಮದಿ ಇರಲ್ಲ.ಅದೂ ಅಲ್ಲದೆ, ಕೇಂದ್ರ ಸರ್ಕಾರವೂ ಸಹ ಈ ವಿಡಿಯೋ ತೋರ್ಸೋದನ್ನ, ಸೋಷಿಯಲ್ ಮೀಡಿಯಾಗಳಲ್ಲಿ ಹಂಚಿಕೊಳ್ಳೋದನ್ನ ನಿಲ್ಲಿಸಿಬಿಡಿ ಅಂತ ಸೂಚನೆ ಕೊಟ್ಟಿದೆ. ಇಬ್ಬರು ಮಹಿಳೆಯರನ್ನ(Women) ಬೆತ್ತಲೆ ಮಾಡಿ ರಾಕ್ಷಸರು ಮೆರವಣಿಗೆ ನಡೆಸಿದ್ದಾರೆ. ಮಹಿಳೆಯರ ಪೈಕಿ ಒಬ್ಬರಿಗೆ 20 ವರ್ಷ ಮತ್ತೊಬ್ಬರಿಗೆ 40 ವರ್ಷವಾಗಿದೆ. ನೂರಕ್ಕೂ ಅಧಿಕ ಪುರುಷರಿಂದ ಇಬ್ಬರು ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ(sexually assault) ಎಸಗಿಸಲಾಗಿದೆ. ಅಲ್ಲದೇ ಹೊಲಕ್ಕೆ ಎಳೆದೊಯ್ದು ಮಹಿಳೆಯರ ಸಾಮೂಹಿಕ ಅತ್ಯಾಚಾರ(Rape) ಸಹ ಮಾಡಲಾಗಿದೆ.

ಇದನ್ನೂ ವೀಕ್ಷಿಸಿ: ಮಲಗಿದಲ್ಲೇ ಕೊಲೆಯಾಗಿದ್ದ ಹೋಟೆಲ್ ಕ್ಯಾಷಿಯರ್: ಕೊಂದವನು ಅದೇ ಹೋಟೆಲ್‌ನಲ್ಲಿದ್ದ..!

Related Video