RADO ವಾಚ್ ಗಿಫ್ಟ್ ಕೊಟ್ಟ ಸಿದ್ದರಾಮಯ್ಯ ಪತ್ನಿ: ಡಿಕೆಶಿ, ಎಂ.ಬಿ. ಪಾಟೀಲ್‌ಗೆ ವಾಚ್ ತೋರಿಸಿದ ಸಿಎಂ !
ಸಿದ್ದರಾಮಯ್ಯ ಪತ್ನಿ ಪಾರ್ವತಿ ಅವರಿಗೆ ವಾಚ್ ಗಿಫ್ಟ್ ಮಾಡಿದ್ದಾರೆ. ಈ ಸಂತೋಷವನ್ನು ಸಿಎಂ ಡಿಸಿಎಂ ಮತ್ತು ಸಚಿವ ಎಂ.ಬಿ. ಪಾಟೀಲ್ ಬಳಿ ಹೇಳಿಕೊಂಡಿದ್ದಾರೆ.
ಸಿಎಂ ಸಿದ್ದರಾಮಯ್ಯ ಅವರ ಪತ್ನಿ ಪ್ರೀತಿಯಿಂದ ಅವರಿಗೆ ವಾಚ್ ಗಿಫ್ಟ್ ಕೊಟ್ಟಿದ್ದಾರೆ. ಸಿದ್ದರಾಮಯ್ಯ ಸಿಎಂ ಆದ ಖುಷಿಗೆ ಮಡದಿ ಪಾರ್ವತಿ ಈ ಗಿಫ್ಟ್‌ನನ್ನು ಕೊಟ್ಟಿದ್ದಾರೆ. ಈ ವಾಚ್‌ನನ್ನು ಕಟ್ಟಿಕೊಂಡಿರುವ ಸಿದ್ದರಾಮಯ್ಯ ಗಿಫ್ಟ್ ಮಾಡಿದ ಬಗ್ಗೆ ಸಚಿವ ಎಂ.ಬಿ. ಪಾಟೀಲ್ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಬಳಿ ಹೇಳಿಕೊಂಡಿದ್ದಾರೆ. ಸಿದ್ದರಾಮಯ್ಯ ಪತ್ನಿ ಪಾರ್ವತಿ RADO ವಾಚ್ ಗಿಫ್ಟ್ ಕೊಟ್ಟಿದ್ದು, ಇದು ಸಿಎಂ ಖುಷಿಯನ್ನ ಮತ್ತಷ್ಟು ಹೆಚ್ಚಿಸಿದೆ. ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಬಹುಮತ ಬಂದ ಹಿನ್ನೆಲೆ ಸಿದ್ದರಾಮಯ್ಯ ಸಿಎಂ ಆಗಿ ಶನಿವಾರ ಪ್ರಮಾಣ ವಚನ ಸ್ವೀಕರಿಸಿದ್ದರು.
ಇದನ್ನೂ ವೀಕ್ಷಿಸಿ: ಸಚಿವ ಎಂ.ಬಿ. ಪಾಟೀಲ್‌ಗೆ ಎಚ್ಚರಿಕೆ ಕೊಟ್ಟ ಡಿಸಿಎಂ: ಡೋಂಟ್ ಡಿಸ್ಟರ್ಪ್ ಎಂದ ಡಿಕೆಶಿ !