ಸಿದ್ದರಾಮಯ್ಯ- ಸುಮಲತಾ ಮುಖಾಮುಖಿ; ನೋಡಿ ಮುಂದೇನಾಯ್ತು ಮೊದಲ ಭೇಟಿ!

ಮಂಡ್ಯದಲ್ಲಿ ಅಪರೂಪದ ಬೆಳವಣಿಗೆಯೊಂದು ಘಟಿಸಿದೆ. ಮಾಜಿ ಸಿಎಂ ಸಿದ್ದರಾಮಯ್ಯ ಮತ್ತು ‘ಮಂಡ್ಯ ಸಂಸದೆ’ ಸುಮಲತಾ ಮೊದಲ ಬಾರಿಗೆ ಮುಖಾಮುಖಿಯಾದರು. ಮಳಿಗೆಯೊಂದರ ಉದ್ಘಾಟನೆ ಸುಮಲತಾ ಅಂಬರೀಷ್, ಸಿದ್ದರಾಮಯ್ಯರಿಗೆ ಕಾದ ಘಟನೆ ನಡೆದಿದೆ. ಬಳಿಕ ಮುಖಾಮುಖಿಯಾದ ಅವರಿಬ್ಬರು ಒಂದೇ ವೇದಿಕೆಯನ್ನು ಹಂಚಿಕೊಂಡರು. ಮುಂದೇನಾಯ್ತು? ಈ ಸ್ಟೋರಿ ನೋಡಿ.... 

First Published Oct 31, 2019, 6:27 PM IST | Last Updated Oct 31, 2019, 6:30 PM IST

ಮಂಡ್ಯ (ಅ.31): ಮಂಡ್ಯದಲ್ಲಿ ಅಪರೂಪದ ಬೆಳವಣಿಗೆಯೊಂದು ಘಟಿಸಿದೆ. ಮಾಜಿ ಸಿಎಂ ಸಿದ್ದರಾಮಯ್ಯ ಮತ್ತು ‘ಮಂಡ್ಯ ಸಂಸದೆ’ ಸುಮಲತಾ ಮೊದಲ ಬಾರಿಗೆ ಮುಖಾಮುಖಿಯಾದರು.

ಮಳಿಗೆಯೊಂದರ ಉದ್ಘಾಟನೆ ಸುಮಲತಾ ಅಂಬರೀಷ್, ಸಿದ್ದರಾಮಯ್ಯರಿಗೆ ಕಾದ ಘಟನೆ ನಡೆದಿದೆ. ಬಳಿಕ ಮುಖಾಮುಖಿಯಾದ ಅವರಿಬ್ಬರು ಒಂದೇ ವೇದಿಕೆಯನ್ನು ಹಂಚಿಕೊಂಡರು. ಮುಂದೇನಾಯ್ತು? ಈ ಸ್ಟೋರಿ ನೋಡಿ.... 

ಅಂಬರೀಷ್ ನಿಧನದ ಬಳಿಕ, ಲೋಕಸಭಾ ಚುನಾವಣೆಗೆ ಮಂಡ್ಯದಿಂದ  ಸುಮಲತಾ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದರು. ಕಾಂಗ್ರೆಸ್-ಜೆಡಿಎಸ್ ಮೈತ್ರಿ ಮಾಡಿಕೊಂಡ ಕಾರಣ ಎಚ್.ಡಿ. ಕುಮಾರಸ್ವಾಮಿ ಪುತ್ರ ನಿಖಿಲ್‌ ಗೌಡ ಕಣಕ್ಕಿಳಿದಿದ್ದರು. ಸುಮಲತಾ ಅಂಬರೀಷ್ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದು ಜಯಭೇರಿ ಬಾರಿಸಿದ್ದರು.