ಹೆಚ್ಚುವರಿ ಡಿಸಿಎಂ VS ಸಿಎಂ ಬದಲಾವಣೆ ತಿಕ್ಕಾಟ ಎಲ್ಲಿಗೆ ಬಂತು ? ಹೈಕಮಾಂಡ್ ನಾಯಕರು ಕೊಟ್ಟ ಸೂಚನೆ ಏನು..?

ರಾಹುಲ್‌ಗೆ ಲೋಕಸಭಾ ಚುನಾವಣೆ ರಿಪೋಟ್ ಕೊಟ್ಟ ಸಿಎಂ
ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಪ್ರಸ್ತಾಪಿಸಿದ ಸಿದ್ದರಾಮಯ್ಯ
ಹೆಚ್ಚುವರಿ ಡಿಸಿಎಂ ಗದ್ದಲದ ಬಗ್ಗೆಯೂ ರಾಹುಲ್‌ಗೆ ವಿವರಣೆ

First Published Jul 1, 2024, 12:13 PM IST | Last Updated Jul 1, 2024, 12:13 PM IST

ಹೆಚ್ಚುವರಿ ಡಿಸಿಎಂ VS ಸಿಎಂ ಬದಲಾವಣೆಗೆ(CM change) ಸಂಬಂಧಿಸಿದಂತೆ ಹೈಕಮಾಂಡ್ ನಾಯಕರನ್ನು ಸಿಎಂ(Siddaramaiah), ಡಿಸಿಎಂ(DK Shivakumar ಭೇಟಿ ಮಾಡಿದ್ದಾರೆ. ರಾಹುಲ್ ಗಾಂಧಿ(Rahul Gandhi) ಜೊತೆ ಸಿದ್ದರಾಮಯ್ಯ ಸೀಕ್ರೆಟ್ ಮೀಟಿಂಗ್ ನಡೆಸಿದ್ದು, ಡಿಸಿಎಂ ಅನುಪಸ್ಥಿತಿಯಲ್ಲಿ ರಾಹುಲ್ ಭೇಟಿಯನ್ನು ಸಿಎಂ & ಟೀಮ್ ಮಾಡಿದೆ. ಜೊತೆಗಿದ್ದವರನ್ನು ಬಿಟ್ಟು ರಾಹುಲ್ ಜೊತೆ ಸಿಎಂ ಪ್ರತ್ಯೇಕ ಮಾತುಕತೆ ನಡೆಸಿದ್ದಾರೆ. 10 ನಿಮಿಷಗಳ ಸಿಎಂ-ರಾಹುಲ್ ಒನ್ ಟು ಒನ್ ಮಾತುಕತೆ ನಡೆಸಿದ್ದಾರೆ. ಇತ್ತ ರಾಹುಲ್ ಬದಲು ಖರ್ಗೆಯನ್ನು(Mallikarjun Kharge) ಡಿಸಿಎಂ ಡಿಕೆಶಿ ಭೇಟಿ ಮಾಡಿದ್ದಾರೆ. ಖರ್ಗೆ ಜೊತೆ ಡಿಕೆಶಿ 30 ನಿಮಿಷ ಒನ್ ಟು ಒನ್ ಮಾತುಕತೆ ನಡೆಸಿದ್ದಾರೆ.

ಇದನ್ನೂ ವೀಕ್ಷಿಸಿ:  'ಗೌರಿ’ ರಿಲೀಸ್ ಡೇಟ್ ಅನೌನ್ಸ್! ವಿಶೇಷ ದಿನದಂದು ತೆರೆಗೆ ಬರುತ್ತಿದೆ ಸಿನಿಮಾ!