'ಗೌರಿ’ ರಿಲೀಸ್ ಡೇಟ್ ಅನೌನ್ಸ್! ವಿಶೇಷ ದಿನದಂದು ತೆರೆಗೆ ಬರುತ್ತಿದೆ ಸಿನಿಮಾ!

ಬಹಳ ದಿನದಿಂದ ಈ ಸಿನಿಮಾ ರಿಲೀಸ್ ಡೇಟ್‌ಗಾಗಿ ಸ್ಯಾಂಡಲ್‌ವುಡ್ ಕಾಯುತ್ತಿತ್ತು. ಕೊನೆಗೂ ಚಿತ್ರಮಂದಿರಕ್ಕೆ ಎಂಟ್ರಿ ಕೊಡುತ್ತಿದೆ ಗೌರಿ.  ಸ್ವಾತಂತ್ರ್ಯ ದಿನಾಚರಣೆಗೆ ತೆರೆಗೆ ಬರುತ್ತಿದೆ ಸಮರ್ಜಿತ್ ಲಂಕೇಶ್ ಮೊದಲ ಸಿನಿಮಾ.

First Published Jul 1, 2024, 11:40 AM IST | Last Updated Jul 1, 2024, 11:41 AM IST

ಸ್ಯಾಂಡಲ್‌ವುಡ್‌ನ ಬಹು ನಿರೀಕ್ಷೆಯ ಸಿನಿಮಾಗಳಲ್ಲಿ ಒಂದಾಗಿರುವ ಗೌರಿ ಸಿನಿಮಾ(Gauri movie) ಚಿತ್ರಮಂದಿರಕ್ಕೆ ಬರಲು ಸಜ್ಜಾಗಿದೆ. ಇವಾಗಲೇ ಸಿಕ್ಕಾಪಟ್ಟೆ ಹೈಪ್ ಕ್ರಿಯೇಟ್ ಮಾಡಿರುವ ಈ ಸಿನಿಮಾ ಯಾವಾಗ ತೆರೆಗೆ ಬರಲಿದೆ ಎಂದು ಚಿತ್ರ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದರು. ಅದರೀಗ ಆ ಕುತುಹಲಕ್ಕೆ ತೆರೆ ಬಿದ್ದಿದೆ. ಇಂದ್ರಜಿತ್ ಲಂಕೇಶ್ ನಿರ್ದೇಶನದ ಅವರ ಪುತ್ರ ಸಮರ್ಜಿತ್ (Samarjith Lankesh) ಮತ್ತು ನಟಿ ಸಾನಿಯಾ ಅಭಿನಯದ ಮೊದಲ ಸಿನಿಮಾವಿದು. ಇಂದಿ ಸಿನಿಮಾ ತಂಡ  ಮಾಧ್ಯಮದ ಮುಂದೆ ಹಾಜರಾಗುವ ಮೂಲಕ ಚಿತ್ರದ ರಿಲೀಸ್ ಡೇಟ್ ಅನೌನ್ಸ್ ಮಾಡಿದೆ. ಈಗಾಗಲೆ ಟೀಸರ್ ಟ್ರೈಲರ್ ಮೂಲಕ ಸದ್ದು ಮಾಡುತ್ತಿರೋ ಗೌರಿ ಆಗಸ್ಟ್ 15ಕ್ಕೆ ತೆರೆಕಾಣಲು ಸಜ್ಜಾಗಿದೆ. ರಿಲೀಸ್ (Release) ಡೇಟ್ ಅನೌನ್ಸ್ ಕಾರ್ಯಕ್ರಮದಲ್ಲಿ ಮಾತನಾಡಿದ ನಿರ್ದೇಶಕ ಇಂದ್ರಜಿತ್ ಲಂಕೇಶ್ ‘ಕನ್ನಡದ ಯುವ ಪ್ರತಿಭೆಗಳನ್ನು ಬೆಳಸಿ. ಆಗಸ್ಟ್ 15 ಒಳ್ಳೆಯ ದಿನ ಪ್ರೇಕ್ಷಕರನ್ನು ಮತ್ತೆ ಚಿತ್ರಮಂದಿರಕ್ಕೆ ಕರೆತರುವ ಪ್ರಯತ್ನ ಇದು. ಎಲ್ಲಾ ಸಿನಿಮಾಗಳು ಕನ್ನಡ ಸಿನಿಮಾಗಳೇ ಪ್ರೋತ್ಸಾಹಿಸಬೇಕು’ಎಂದರು. ಕನಸು ನನಸಾದ ಸಮಯಚಿದು. ನನ್ನ ಮೊದಲ ಸಿನಿಮಾವನ್ನು ಎಲ್ಲರೂ ನೋಡಿ ಎಂದರು.

ಇದನ್ನೂ ವೀಕ್ಷಿಸಿ:  ‘ಕೃಷ್ಣಂ ಪ್ರಣಯ ಸಖಿ’ ಚಿತ್ರದ ಚಿನ್ನಮ್ಮ ಹಾಡು ಆಲ್ ಇಂಡಿಯಾ ಟ್ರೆಂಡಿಂಗ್!