Asianet Suvarna News Asianet Suvarna News

ಗ್ಯಾರಂಟಿಗಳಿಂದ ರಾಜ್ಯ ಖಜಾನೆಗೆ ನಿಜಕ್ಕೂ ತೊಂದರೆ ಆಗಿಲ್ವಾ..? ಅಸಾಧ್ಯವನ್ನು ಸಾಧ್ಯವಾಗಿಸಿ ತೋರಿಸಿದ್ರಾ ಸಿದ್ದು, ಡಿಕೆಶಿ..?

ಸರ್ಕಾರದ 1 ವರ್ಷದ ಸಾಧನೆಗೆ ವಿರೋಧ ಪಕ್ಷ ಹೇಳಿದ್ದೇನು..? 
1 ವರ್ಷದ ಸರ್ಕಾರದ ಮುಂದಿರುವ ಸವಾಲುಗಳು ಯಾವವು..? 
ಗ್ಯಾರಂಟಿಗಳನ್ನು ನಿಭಾಯಿಸಿದ್ದು ಹೇಗೆಂದು ಲೆಕ್ಕ ಕೊಟ್ಟ ಸಿದ್ದು

ಕಾಂಗ್ರೆಸ್ ಆಡಳಿತ ರಾಜ್ಯ ಸರ್ಕಾರಕ್ಕೆ ಈಗ ಒಂದು ವರ್ಷ. ಸಿದ್ದು ನೇತೃತ್ವದ ಸರ್ಕಾರ(Congress government) ನಿನ್ನೆಗೆ ಯಶಸ್ವಿಯಾಗಿ ಒಂದು ವರ್ಷ ಪೂರೈಸಿದೆ. ಸಿಎಂ ಸಿದ್ದರಾಮಯ್ಯ(Siddaramaiah) ತಮ್ಮ ಸರ್ಕಾರದ ಒಂದು ವರ್ಷದ ಸಾಧನೆ ಪಟ್ಟಿನ್ನು ಏಳು ಕೋಟಿ ಕನ್ನಡಿಗರ ಮುಂದಿಟ್ಟಿದ್ದಾರೆ. ಅಸಾಧ್ಯವಾದದ್ದನ್ನು ನಾವು ಸಾಧಿಸಿದ್ದೇವೆಂದು ಡಿಸಿಎಂ ಡಿಕೆ ಶಿವಕುಮಾರ್(DK Shivakumar)ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ. ಕಾಂಗ್ರೆಸ್‌ನ(Congress) ಈ ಸಾಧನಾ ಪಟ್ಟಿಗೆ ರಾಜ್ಯ ಬಿಜೆಪಿ ಲೇವಡಿ ಮಾಡಿದೆ. ಮೇ 20 2023ರಂದು ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಅಧಿಕಾರ ಚುಕ್ಕಾಣಿ ಹಿಡಿದಿತ್ತು. ಅಂದು ಅಧಿಕಾರ ಗದ್ದುಗೆ ಏರಿದ್ದ ಸಿದ್ದು ನೇತೃತ್ವದ ಸರ್ಕಾರಕ್ಕೆ ಈಗ ಒಂದು ವರ್ಷವಾಗಿದೆ. ಸರ್ಕಾರ ಒಂದು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯ ತಮ್ಮ ಎಕ್ಸ್ ಖಾತೆಯಲ್ಲಿ ಸಂತಸ ಹಂಚಿಕೊಂಡಿದ್ದಾರೆ. ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಒಂದು ವರ್ಷ ಯಶಸ್ವಿಯಾಗಿ ಸಾಗುವುದಕ್ಕೆ ಪ್ರಮುಖವಾಗಿ ರಾಜ್ಯದ ಜನತೆ ಕಾರಣ ಹೀಗಾಗಿ ರಾಜ್ಯದ ಏಳು ಕೋಟಿ ಕನ್ನಡಿಗರಿಗೆ ತುಂಬು ಹೃದಯದ ಧನ್ಯವಾದಗಳನ್ನು ಸಿಎಂ ಸಿದ್ದು ತಿಳಿಸಿದ್ದಾರೆ. ಗ್ಯಾರಂಟಿ ಹೆಸರಿನಲ್ಲಿ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಪಕ್ಷ ಒಂದು ವರ್ಷ ಯಶಸ್ವಿಯಾಗಿ ಪೂರೈಸಿದೆ. ಸರ್ಕಾರ ಒಂದು ವರ್ಷ ಯಶಸ್ವಿಯಾಗಿ ಪೂರೈಸಿರುವ ಕುರಿತು ಸಿಎಂ ಸಿದ್ದರಾಮಯ್ಯನವರಿಗೆ ತುಂಬಾ ಹೆಮ್ಮೆಯಿಂದೆ. ಒಂದು ವರ್ಷದ ಸಾಧನೆಯನ್ನು ದೊಡ್ಡ ಸಂಭ್ರಮದೊಂದಿಗೆ ಆಚರಿಸಬೇಕೆಂಬ ಆಸೆ ಸಿಎಂಗೆ ಇತ್ತಂತೆ. ಆದ್ರೆ, ಲೋಕಸಭಾ ಚುನಾವಣೆ ಸಂದರ್ಭ ಇದಾಗಿರೋದ್ರಿಂದ ನೀತಿ ಸಂಹಿತೆ ಇದಕ್ಕೆ ಅಡ್ಡಿಯಾಗಿದೆ.

ಇದನ್ನೂ ವೀಕ್ಷಿಸಿ:  Today Horoscope: ಇಂದು ನರಸಿಂಹ ಜಯಂತಿ ಇದ್ದು, ಇದರ ವಿಶೇಷತೆ ಏನು, ಆಚರಿಸುವುದು ಹೇಗೆ?