Asianet Suvarna News Asianet Suvarna News

Today Horoscope: ಇಂದು ನರಸಿಂಹ ಜಯಂತಿ ಇದ್ದು, ಇದರ ವಿಶೇಷತೆ ಏನು, ಆಚರಿಸುವುದು ಹೇಗೆ?

ಇಂದಿನ ಪಂಚಾಂಗ ಫಲಗಳು ಹೇಗಿವೆ? ನಿಮ್ಮ ರಾಶಿಯ ಇಂದಿನ ಭವಿಷ್ಯ ಹೇಗಿದೆ? ದ್ವಾದಶ ರಾಶಿಗಳ ಇಂದಿನ ಭವಿಷ್ಯವನ್ನು ಪ್ರಾಜ್ಞರಾದ ಶ್ರೀಕಂಠ ಶಾಸ್ತ್ರಿಗಳ ಮಾತಿನಲ್ಲಿ ಕೇಳೋಣ. ಯಾವ್ಯಾವ ರಾಶಿಗೆ ಯಾವ ರೀತಿ ಫಲ ಇದೆ ಅನ್ನೋದನ್ನ ನೋಡಿ.

ಶ್ರೀ ಕ್ರೋಧಿ ನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ವೈಶಾಖ ಮಾಸ, ಶುಕ್ಲ ಪಕ್ಷ, ಮಂಗಳವಾರ, ತ್ರಯೋದಶಿ ತಿಥಿ, ಸ್ವಾತಿ ನಕ್ಷತ್ರ.

ಇಂದು ನರಸಿಂಹ ಸ್ವಾಮಿ ಆರಾಧನೆ ಮಾಡುವವರಿಗೆ ಭಯ, ಕಷ್ಟಗಳು ಇರುವುದಿಲ್ಲ. ಭಗವಾನ್‌ ವಿಷ್ಣುವಿನ 9 ಅವತಾರಗಳಲ್ಲಿ ನರಸಿಂಹ ಅವತಾರವೂ ಒಂದಾಗಿದೆ. ಮೀನಾ ರಾಶಿಯವರಿಗೆ ವೃತ್ತಿಯಲ್ಲಿ ಕಠಿಣ ಸವಾಲು ಎದುರಾಗಲಿದೆ. ಆಗಂತುಕ ಸಮಸ್ಯೆಗಳು ಎದುರಾಗಲಿವೆ. ಸಾಲಬಾಧೆ. ಶತ್ರುಗಳ ಬಾಧೆ. ನರಸಿಂಹ ಪ್ರಾರ್ಥನೆ ಮಾಡಿ. ವೃಶ್ಚಿಕ ರಾಶಿಯವರು ಆಪ್ತರಿಗಾಗಿ ವ್ಯಯ ಮಾಡಲಿದ್ದೀರಿ. ಕಡಿಮೆ ಲಾಭ. ವೃತ್ತಿಯಲ್ಲಿ ಕಿರಿಕಿರಿ. ವಿಘ್ನ ಸಂಭವ. ನರಸಿಂಹ ಪ್ರಾರ್ಥನೆ ಮಾಡಿ.

ಇದನ್ನೂ ವೀಕ್ಷಿಸಿ:  ಶ್ರೀ ರಾಮಮಂದಿರ ಪರವೋ..? ವಿರೋಧವೋ..? ಖರ್ಗೆ ಹೇಳಿದ್ದೇನು..? ಕಾಂಗ್ರೆಸ್‌ಗೆ ಬಿಸಿತುಪ್ಪವಾದ ಪ್ರಭು ಶ್ರೀರಾಮ..!