ರಾಜಕೀಯ ಅಖಾಡಕ್ಕೆ ಸಿದ್ದು ಕುಟುಂಬದ 3ನೇ ತಲೆಮಾರು ಎಂಟ್ರಿ..!

ಸಿದ್ದರಾಮಯ್ಯ ಮೊಮ್ಮಗನ ರಾಜಕೀಯ ಎಂಟ್ರಿಗೆ ವೇದಿಕೆ ಸಿದ್ಧ! 
ಅಪ್ಪನ ಜಾಗ ತುಂಬಲು ತಾತನ ಜೊತೆ ಬಂದ ಧವನ್ ರಾಕೇಶ್!
ಮೊಮ್ಮಗನ ರಾಜಕೀಯ ಆಸಕ್ತಿ ಕಂಡು ಹಿರಿ ಹಿರಿ ಹಿಗ್ಗಿದರು ಸಿದ್ದು!

Share this Video
  • FB
  • Linkdin
  • Whatsapp

ಚಾಮರಾಜನಗರ: ಪ್ರತಿಪಕ್ಷ ನಾಯಕ ಸಿದ್ದರಾಮಯ್ಯನವರ ಮೊಮ್ಮಗ ಧವನ್‌ ರಾಕೇಶ್‌ ರಾಜಕೀಯಕ್ಕೆ ಕಾಲಿಡಲು ಸಿದ್ಧರಾಗಿ ನಿಂತಿದ್ದಾರೆ. ವರುಣಾ ವಾರ್‌ನಲ್ಲಿ ತಾತನನ್ನು ಗೆಲ್ಲಿಸಲು ಮೊಮ್ಮಗ ಎಂಟ್ರಿ ಕೊಟ್ಟಿದ್ದಾರೆ. ಈ ಮೂಲಕ ವರುಣಾ ಯುದ್ಧದಲ್ಲಿ ಸಿದ್ದರಾಮಯ್ಯನವರಿಗೆ ಆನೆಬಲ ಬಂದಾತಾಗಿದೆ. ಪಕ್ಕಾ ರಾಜಕೀಯ ಲೆಕ್ಕಾಚಾರದೊಂದಿಗೆ ಸಿದ್ದು ಮೊಮ್ಮಗನನ್ನು ಅಖಾಡಕ್ಕೆ ಇಳಿಸಿದ್ದಾರೆ ಎನ್ನಲಾಗ್ತಿದೆ. ಈ ಮೂಲಕ ಮಾಜಿ ಸಿಎಂ ಸಿದ್ದರಾಮಯ್ಯ ಕುಟುಂಬದ 3ನೇ ತಲೆಮಾರು ರಾಜಕೀಯಕ್ಕೆ ಪಾದಾರ್ಪಣೆ ಮಾಡಿದಂತಾಗಿದೆ. ಮೊಮ್ಮಗನ ಎಂಟ್ರಿಯಂತೂ ರಾಜಕೀಯಕ್ಕೆ ಆಗಿದೆ. ಆದ್ರೆ ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ವರುಣಾದಿಂದ ಸಿದ್ದರಾಮಯ್ಯ ಗೆಲ್ಲುತ್ತಾರಾ ಎಂದು ಕಾದು ನೋಡಬೇಕಿದೆ.

ಇದನ್ನೂ ವೀಕ್ಷಿಸಿ: ಕಾಂಗ್ರೆಸ್‌ ಫೈನಲ್‌ ಪಟ್ಟಿ ಬಿಡುಗಡೆ: ಹೈಕಮಾಂಡ್‌ ಲೆಕ್ಕಾಚಾರವೇನು?

Related Video