Asianet Suvarna News Asianet Suvarna News

ಜಾತಿ ಗಣತಿ ಸುಳಿಯಲ್ಲಿ ಸಿದ್ದರಾಮಯ್ಯ ಸರ್ಕಾರ, ಸ್ವಪಕ್ಷದಿಂದಲೇ ಪತ್ರ ಸಮರ!

ಜಾತಿ ಗಣತಿ ಸಮೀಕ್ಷೆ ವರದಿಯ ಮೂಲ ಪ್ರತಿ ನಾಪತ್ತೆ ವಿವಾದ, ಜಾತಿ ಗಣತಿ ಸುಳಿಯಲ್ಲಿ ಸಿದ್ದರಾಮಯ್ಯ ಸರ್ಕಾರ, ಸ್ವಪಕ್ಷದಿಂದಲೇ ವಿರೋಧ, ಕಾಂಗ್ರೆಸ್ ಕಾರ್ಯಕರ್ತರಿಗಿಲ್ಲ ನಿಗಮ ಮಂಡಳಿ ಭಾಗ್ಯ, ತಿಕ್ಕಾಟ ಶುರು ಸೇರಿದಂತೆ ಇಂದಿನ ಇಡೀ ದಿನದ ಪ್ರಮುಖ ಸುದ್ದಿ ನ್ಯೂಸ್ ಹವರ್ ವಿಡಿಯೋ ಇಲ್ಲಿದೆ.

First Published Nov 22, 2023, 11:53 PM IST | Last Updated Nov 22, 2023, 11:53 PM IST

ಜಾತಿ ಗಣತಿ ವರದಿ ಸ್ವೀಕರಿಸದಂತೆ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಸಹಿ ಹಾಕಿದ್ದರೆ, ಇತ್ತ ಜಾತಿ ಗಣ ವರದಿ ಬಿಡುಗಡೆ ಮಾಡುವುದಾಗಿ ಸಿದ್ದರಾಮಯ್ಯ ಘೋಷಿಸಿದ್ದಾರೆ. ಈ ಕುರಿತು ಕಾಂಗ್ರೆಸ್ ನಾಯಕ ಬಸವರಾಜ್ ರಾಯರೆಡ್ಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಒಕ್ಕಲಿಗ ಸಮುದಾಯ, ಕಾಂಗ್ರೆಸ್ ಶಾಸಕರು ವಿರೋಧಿಸುವದರಲ್ಲಿ ತಪ್ಪಿಲ್ಲ. ಆದರೆ ಸರ್ಕಾರದ ಭಾಗವಾಗಿರುವ ಉಪಮುಖ್ಯಮಂತ್ರಿ, ಸಚಿವರೇ ವಿರೋಧಿಸಿದರೆ ಅರ್ಥವೇನು ಎಂದು ಪ್ರಶ್ನಿಸಿದ್ದಾರೆ.  
ಇತ್ತ ಜಾತಿಗಣತಿ ಮೂಲ ಪ್ರತಿ ನಾಪತ್ತೆಗೆ ಬಸನಗೌಡ ಪಾಟೀಲ್, ಹೆಚ್‌ಡಿ ಕುಮಾರಸ್ವಾಮಿ ಸೇರಿದಂತೆ ಹಲವರು ಆಕ್ರೋಶ ಹೊರಹಾಕಿದ್ದಾರೆ.
 

Video Top Stories