Asianet Suvarna News Asianet Suvarna News

ಪಂಚ ಗ್ಯಾರಂಟಿ ಘೋಷಿಸಿದ ಕೈ ಸರ್ಕಾರ, ಏನೇನು ಷರತ್ತು..?: ಹೇಗಿದೆ “ಮೇಷ್ಟ್ರು” ರಾಮಯ್ಯನ ಐದು ಪಕ್ಕಾ ಲೆಕ್ಕ..?

ಜೂನ್ 11ರಿಂದ ಮಹಿಳೆಯರಿಗೆ ಬಸ್ ಪ್ರಯಾಣ ಉಚಿತ
ನನ್ನ ಹೆಂಡತಿಗೂ ಬಸ್ ಪ್ರಯಾಣ ಫ್ರೀ ಅಂದ್ರು ಸಿದ್ದು
ಜುಲೈ 1ರಿಂದ ಶುರು ಅನ್ನಭಾಗ್ಯ, ಗೃಹಜ್ಯೋತಿ ಸ್ಕೀಮ್

ಯಾವಾಗ ಗ್ಯಾರಂಟಿ.. ಎಲ್ಲಿ ಗ್ಯಾರಂಟಿ.. ಯಾರಿಗೆ ಗ್ಯಾರಂಟಿ..? ಈ ಪ್ರಶ್ನೆಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಉತ್ತರ ಕೊಟ್ಟಿದ್ದಾರೆ. ಕೊಟ್ಟ ಮಾತಿನಂತೆ ಐದು ಗ್ಯಾರಂಟಿಗಳನ್ನು ಸಿಎಂ ಸಿದ್ದರಾಮಯ್ಯ ಘೋಷಿಸಿದ್ದಾರೆ. ಸಾವಿರಾರು ಕೋಟಿಗಳ ಲೆಕ್ಕಾಚಾರವನ್ನು ಅಳೆದೂ ತೂಗಿ, ಲೆಕ್ಕಾಚಾರ ಹಾಕಿ ಗ್ಯಾರಂಟಿ ಸ್ಕೀಮ್‌ಗಳನ್ನು ಸಿಎಂ ಸಿದ್ದರಾಮಯ್ಯನವರು ಘೋಷಣೆ ಮಾಡಿದ್ದಾರೆ. ಗೃಹಜ್ಯೋತಿ, ಗೃಹಲಕ್ಷ್ಮೀ, ಶಕ್ತಿ, ಅನ್ನಭಾಗ್ಯ ಮತ್ತು ಯುವನಿಧಿ. ಈ ಐದು ಗ್ಯಾರಂಟಿ ಕಾರ್ಡ್'ಗಳನ್ನೇ ಮುಂದಿಟ್ಟುಕೊಂಡು ಮತ ಕೇಳಿತ್ತು ಕಾಂಗ್ರೆಸ್. ಚುನಾವಣಾ ಪ್ರಚಾರ ಸಭೆಗಳಲ್ಲಿ ಗ್ಯಾರಂಟಿಗಳ ಘೋಷಣೆಗಳೊಂದಿಗೆ ಕೈ ನಾಯಕರು ವೀರಾವೇಶದಿಂದ ಅಬ್ಬರಿಸಿಬಿಟ್ಟಿದ್ದರು. ಗ್ಯಾರಂಟಿ ಘೋಷಣೆಗೆ ಸಿಕ್ಕ ಬಳುವಳಿಯೋ ಗೊತ್ತಿಲ್ಲ, ಬರೋಬ್ಬರಿ 135 ಸ್ಥಾನ ಸೀಟುಗಳನ್ನು ನೀಡೋ ಮೂಲಕ ರಾಜ್ಯದ ಮತದಾರರು ಕಾಂಗ್ರೆಸ್‌ಗೆ ಪ್ರಚಂಡ ಬಹುಮತ ಕೊಟ್ಟಿದ್ದಾರೆ. 

ಇದನ್ನೂ ವೀಕ್ಷಿಸಿ: Odisha Train Accident:ರೈಲು ದುರಂತದಲ್ಲಿ 233ಕ್ಕೂ ಹೆಚ್ಚು ಮಂದಿ ಸಾವು, 900 ಜನರಿಗೆ ಗಾಯ: ಮುಂದುವರೆದ ರಕ್ಷಣಾ ಕಾರ್ಯಾಚರಣೆ