ರಾಹುಲ್ ಗಾಂಧಿ ಅನರ್ಹತೆಗೆ ಕೆರಳಿದ ಕಾಂಗ್ರೆಸ್, ಪ್ರತಿಭಟನೆಗೆ ಕರೆ ನೀಡಿದ ಸಿದ್ದರಾಮಯ್ಯ!
ರಾಹುಲ್ ಗಾಂಧಿ ಅನರ್ಹತೆ ವಿರುದ್ಧ ಕಾಂಗ್ರೆಸ್ ಸಿಡಿದೆದ್ದಿದೆ. ಬಿಜೆಪಿ ವಿರುದ್ದ ಅತ್ಯಂತ ಕಟು ಶಬ್ದಗಳಲ್ಲಿ ಟೀಕೆ ಮಾಡುತ್ತಿದೆ. ಇದು ಬಿಜೆಪಿಯ ಹೇಡಿತನದ ಪ್ರದರ್ಶನ, ಪ್ರಜಾಪ್ರಭುತ್ವ ವಿರೋಧಿ ಧೋರಣೆಗೆ ದಿಕ್ಕಾರ ಎಂದು ಕಾಂಗ್ರೆಸ್ ಹೇಳಿದೆ.
ಸಂಸದ ಸ್ಥಾನದಿಂದ ರಾಹುಲ್ ಗಾಂಧಿಯನ್ನು ಅನರ್ಹತೆ ವಿಚಾರವನ್ನು ಕಾಂಗ್ರೆಸ್ ಹಿರಿಯ ನಾಯಕ ಸಿದ್ದರಾಮಯ್ಯ ಖಂಡಿಸಿದ್ದಾರೆ. ಇದು ಬಿಜೆಪಿಯ ಹೇಡಿತನದ ಪ್ರದರ್ಶನ ಎಂದಿದ್ದಾರೆ. ಇದರ ವಿರುದ್ದ ಪ್ರತಿಭಟನೆಗೆ ಸಿದ್ದರಾಮಯ್ಯ ಕರೆ ನೀಡಿದ್ದಾರೆ. ಸಂಸದ ಸ್ಥಾನದಿಂದ ರಾಹುಲ್ ಗಾಂಧಿಯನ್ನು ತೆಗೆದು ಹಾಕಬಹುದು. ಆದರೆ ಭಾರತೀಯರು ಹೃದಯದಲ್ಲಿ ಸ್ಥಾನ ನೀಡಿದ್ದಾರೆ ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ. ಬಿಜೆಪಿಯ ಪ್ರಜಾಪ್ರಭುತ್ವ ಧೋರಣೆಗೆ ಧಿಕ್ಕಾರ ಎಂದು ಡಿಕೆಶಿ ಹೇಳಿದ್ದಾರೆ.