Asianet Suvarna News Asianet Suvarna News

ಡಿಕೆಶಿಯನ್ನು ಸಿಎಂ ಮಾಡಿ, ಎಷ್ಟು ಬೇಕಾದ್ರೂ DCM ಮಾಡಲಿ: ಹೆಚ್ಚುವರಿ ಡಿಸಿಎಂಗೆ ಸ್ವಪಕ್ಷ ಶಾಸಕನಿಂದಲೇ ವಿರೋಧ

ಹೆಚ್ಚುವರಿ ಡಿಸಿಎಂಗೆ ಸ್ವಪಕ್ಷ ಶಾಸಕ ಶಿವಗಂಗಾ ಬಸವರಾಜ್ ವಿರೋಧ ವ್ಯಕ್ತಪಡಿಸಿದ್ದು, ಡಿಕೆಶಿಯನ್ನು ಸಿಎಂ ಮಾಡಿ, ಎಷ್ಟು ಬೇಕಾದ್ರೂ DCM ಮಾಡಲಿ ಎಂದಿದ್ದಾರೆ.

ಹೆಚ್ಚುವರಿ ಡಿಸಿಎಂಗೆ ಸ್ವಪಕ್ಷ ಶಾಸಕನಿಂದಲೇ ವಿರೋಧ ವ್ಯಕ್ತವಾಗಿದ್ದು, ಶಾಸಕ ಶಿವಗಂಗಾ ಬಸವರಾಜ್(MLA Shivaganga Basavaraj) ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ಹೆಚ್ಚುವರಿ ಡಿಸಿಎಂ(DCM) ಮಾಡುವುದಾದರೆ, ಡಿಕೆ ಶಿವಕುಮಾರ್‌ಗೆ ಸಿಎಂ ಸ್ಥಾನ(CM post) ನೀಡಿ ಎಂದು ಹೇಳುವ ಮೂಲಕ ಡಿಕೆಶಿ ಪರ ಶಿವಗಂಗಾ ಬಸವರಾಜ್ ಬ್ಯಾಟಿಂಗ್ ಮಾಡಿದ್ದಾರೆ. ಡಿಕೆಶಿಯನ್ನು ಸಿಎಂ ಮಾಡಿ, ಎಷ್ಟು ಬೇಕಾದ್ರೂ DCM ಮಾಡಲಿ. ಡಿಕೆಶಿ ಪಕ್ಷ ಸಂಘಟನೆ ‌ಮಾಡಿ ಅಧಿಕಾರಕ್ಕೆ ತಂದಿದ್ದಾರೆ ಎನ್ನುವ ಮೂಲಕ ಡಿಸಿಎಂ ಬೇಡಿಕೆ ಇಟ್ಟವರಿಗೆ ಶಾಸಕ ಶಿವಗಂಗಾ ಬಸವರಾಜ್ ತಿರುಗೇಟು ನೀಡಿದ್ದಾರೆ. 

ಇದನ್ನೂ ವೀಕ್ಷಿಸಿ:  ಮೈತ್ರಿ ಪಕ್ಷದಿಂದ ಚನ್ನಪಟ್ಟಣದಲ್ಲಿ ಸ್ಪರ್ಧೆ ಯಾರದ್ದು..? ಬಿಜೆಪಿ-ಜೆಡಿಎಸ್‌ ನಡುವೆ ಟಿಕೆಟ್‌ಗಾಗಿ ಜೋರಾದ ಫೈಟ್‌

Video Top Stories