ಮೈತ್ರಿ ಪಕ್ಷದಿಂದ ಚನ್ನಪಟ್ಟಣದಲ್ಲಿ ಸ್ಪರ್ಧೆ ಯಾರದ್ದು..? ಬಿಜೆಪಿ-ಜೆಡಿಎಸ್‌ ನಡುವೆ ಟಿಕೆಟ್‌ಗಾಗಿ ಜೋರಾದ ಫೈಟ್‌

2 ಬಾರಿ ಸೋತಿರೋ ನಿಖಿಲ್‌ಗೆ ಚನ್ನಪಟ್ಟಣ ಟಿಕೆಟ್ ನೀಡಲು ಒತ್ತಾಯ
ಚನ್ನಪಟ್ಟಣದಲ್ಲಿ ಅಸ್ತಿತ್ವ ಉಳಿಸಿಕೊಳ್ಳಲು ನಿಖಿಲ್ ನಿಲ್ಲುವಂತೆ ಒತ್ತಡ
ನಿಖಿಲ್ ನಿಲ್ಲಿಸಿ ಗೆಲ್ಲಿಸಿಕೊಂಡು ಬರುವುದಾಗಿ ಕಾರ್ಯಕರ್ತರ ಒತ್ತಾಯ

First Published Jun 26, 2024, 1:39 PM IST | Last Updated Jun 26, 2024, 1:39 PM IST

ಚುನಾವಣೆ ಘೋಷಣೆಗೂ ಮುನ್ನವೇ ಚನ್ನಪಟ್ಟಣ(Channapatna By poll) ಅಖಾಡ ರಂಗೇರುತ್ತಿದೆ. ಬಿಜೆಪಿ-ಜೆಡಿಎಸ್(BJP-JDS) ನಡುವೆ ಟಿಕೆಟ್‌ಗಾಗಿ(Ticket) ಫೈಟ್ ಜೋರಾಗಿದೆ. ನಿಖಿಲ್‌ ಕುಮಾರಸ್ವಾಮಿಗೆ ಟಿಕೆಟ್ ನೀಡುವಂತೆ ಜೆಡಿಎಸ್ ಕಾರ್ಯಕರ್ತರಿಂದ ಕ್ಯಾಂಪೇನ್ ಮಾಡಲಾಗುತ್ತಿದೆ. ಸಾಮಾಜಿಕ ಜಾಲತಾಣದಲ್ಲಿ ಜೆಡಿಎಸ್ ಮುಖಂಡರು, ಕಾರ್ಯಕರ್ತರಿಂದ ಒತ್ತಾಯ ಕೇಳಿಬರುತ್ತಿದೆ. ಮೈತ್ರಿ ಅಭ್ಯರ್ಥಿಯಾಗಿ ನಿಖಿಲ್(Nikhil Kumaraswamy) ಕಣಕ್ಕಿಳಿಸುವಂತೆ ಎನ್‌ಡಿಎ ಮೈತ್ರಿಕೂಟಕ್ಕೆ ಆಗ್ರಹ ಮಾಡಲಾಗುತ್ತಿದೆ. ಎರಡು ಬಾರಿ ಸೋತಿರೋ ನಿಖಿಲ್‌ಗೆ ಚನ್ನಪಟ್ಟಣ ಟಿಕೆಟ್ ನೀಡಲು ಒತ್ತಾಯ ಕೇಳಿಬರುತ್ತಿದೆ. ಚನ್ನಪಟ್ಟಣದಲ್ಲಿ ಜೆಡಿಎಸ್ ಅಸ್ತಿತ್ವ ಉಳಿಸಿಕೊಳ್ಳಲು ನಿಖಿಲ್ ನಿಲ್ಲುವಂತೆ ಒತ್ತಡ ಹೇರಲಾಗುತ್ತಿದೆ. ನಿಖಿಲ್ ನಿಲ್ಲಿಸಿ ಗೆಲ್ಲಿಸಿಕೊಂಡು ಬರುವುದಾಗಿ ಕಾರ್ಯಕರ್ತರು ಹೇಳುತ್ತಿದ್ದು, ಸಿ.ಪಿ.ಯೋಗೇಶ್ವರ್ (CP Yogeshwar)ಟಿಕೆಟ್ ನೀಡುವಂತೆ ಬಿಜೆಪಿ ಕಾರ್ಯಕರ್ತರು ಒತ್ತಾಯ ಮಾಡುತ್ತಿದ್ದಾರೆ. ಸಿಪಿ ಯೋಗೇಶ್ವರ್ ಗೆ ತಾಲೂಕಿನ ನಾಡಿಮಿಡಿತ ಗೊತ್ತಿದೆ. ಕಾಂಗ್ರೆಸ್ ಎದುರಿಸಲು ಸಿಪಿವೈ ಸಮರ್ಥ ಅಭ್ಯರ್ಥಿ ಎಂದು ಬೆಂಬಲಿಗರು ಹೇಳುತ್ತಿದ್ದಾರೆ. ಡಾ.ಮಂಜುನಾಥ್ ಗೆಲುವಿಗೆ ಸಿ.ಪಿ.ಯೋಗೇಶ್ವರ್ ಹೋರಾಟ ನಡೆಸಿದ್ದು, ಉಪಚುನಾವಣೆ ಟಿಕೆಟ್ ನೀಡುವಂತೆ ಚನ್ನಪಟ್ಟಣ ತಾಲೂಕು ಬಿಜೆಪಿ ಘಟಕ ಒತ್ತಾಯ ಮಾಡುತ್ತಿದೆ.

ಇದನ್ನೂ ವೀಕ್ಷಿಸಿ:  ರೇಣುಕಾಸ್ವಾಮಿ ಕೊಲೆ ಪ್ರಕರಣ: ದರ್ಶನ್ ಗ್ಯಾಂಗ್‌ಗೆ ಹಲ್ಲೆ ಮಾಡಲು ಪೊಲೀಸ್ ಲಾಠಿ ಸಿಕ್ಕಿದ್ದು ಹೇಗೆ..?