ಶಿಕಾರಿಪುರ ಜನ ನನಗೂ ಆಶೀರ್ವಾದ ಮಾಡುತ್ತಾರೆ: ವಿಜಯೇಂದ್ರ

ಉಮೇದುವಾರಿಕೆ ಸಲ್ಲಿಸಿದ ಬಿ.ವೈ. ವಿಜಯೇಂದ್ರ
ಶಿಕಾರಿಪುರ ವಿಧಾನಸಭಾ ಕ್ಷೇತ್ರದಿಂದ ಸಲ್ಲಿಕೆ
ನಾಮಪತ್ರ ಸಲ್ಲಿಸಿ ಮಾತನಾಡಿದ ವಿಜಯೇಂದ್ರ

First Published Apr 19, 2023, 4:26 PM IST | Last Updated Apr 19, 2023, 5:35 PM IST

ಶಿವಮೊಗ್ಗ: ಶಿಕಾರಿಪುರದಲ್ಲಿ ವಿಧಾನಸಭಾ ಚುನಾವಣಾ ರಣಕಣ ರಂಗೇರಿದ್ದು, ಬಿ.ವೈ. ವಿಜಯೇಂದ್ರ ಇಂದು ಉಮೇದುವಾರಿಕೆ ಸಲ್ಲಿಕೆ ಮಾಡಿದರು. ಇದಕ್ಕೂ ಮೊದಲು ಅದ್ಧೂರಿ ರೋಡ್‌ ಶೋ ಮೂಲಕ ಶಕ್ತಿಪದರ್ಶನ ಮಾಡಿದರು. ಬಳಿಕ ಮಾತನಾಡಿದ ಅವರು, ಶಾಹಿ ಗಾರ್ಮೆಂಟ್‌ ಬಗ್ಗೆ ಹೇಳಲು ನನಗೆ ಹೆಮ್ಮೆ ಎನಿಸುತ್ತದೆ. ಇದರಿಂದ ನಾಲ್ಕರಿಂದ ಐದು ಸಾವಿರ ಮಹಿಳೆಯರಿಗೆ ಉದ್ಯೋಗ ಸಿಕ್ಕಿದೆ. ಹಾಗಾಗಿ ಈ ಕುಟುಂಬಗಳು ನೆಮ್ಮದಿಯಾಗಿ ಜೀವನ ನಡೆಸುತ್ತಿವೆ. ನಾನು ಉದ್ಯೋಗ ಸೃಷ್ಟಿ ಕಡೆಗೆ ಹೆಚ್ಚು ಗಮನಕೊಡುತ್ತೇನೆ. ವಿರೋಧ ಪಕ್ಷದವರು ಯಡಿಯೂರಪ್ಪ ಏನು ಮಾಡಿದ್ದಾರೆ ಎಂದು ಕೇಳುತ್ತಾರೆ. ಇವತ್ತು ರೈತರು ಬಗರ್‌ಹುಕುಂ ಜಾಗದಲ್ಲಿ ಸಾಗುವಳಿ ಮಾಡುತ್ತಾರೆ ಎಂದರೇ ಅದಕ್ಕೆ ಶಕ್ತಿ ನೀಡಿರುವುದು ಮಾಜಿ ಸಿಎಂ ಬಿ.ಎಸ್‌. ಯಡಿಯೂರಪ್ಪನರು. ಈಗ ಇದಕ್ಕೆ ಎರಡು ಮೂರು ತಲೆಮಾರಿನ ದಾಖಲೆಗಳನ್ನು ಕೇಳುತ್ತಿದ್ದಾರೆ. ಆದ್ರೆ ಮುಂದೆ ಕೇವಲ ಒಂದು ತಲೆಮಾರಿನ ದಾಖಲೆಗಳ ಮೂಲಕ ಸಾಗುವಳಿಗೆ ಅವಕಾಶ ನೀಡಲು ಕಾನೂನನ್ನು ತರುತ್ತೇವೆ. ಅಲ್ಲದೇ ಮಹಿಳಾ ಸಂಘಗಳಿಗೆ ಶಕ್ತಿಯನ್ನು ತುಂಬುವ ಕೆಲಸವನ್ನು ನಾನು ಪ್ರಮಾಣಿಕವಾಗಿ ಮಾಡುತ್ತೇನೆ. ಇವತ್ತು ನಾನು ಶಿಕಾರಿಪುರ ವಿಧಾನಸಭಾ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಿದ್ದೇನೆ. ಯಡಿಯೂರಪ್ಪನವರು ಈ ಕ್ಷೇತ್ರದ ಜನರನ್ನು ತಮ್ಮ ಕುಟುಂಬದಂತೆ ನೋಡಿಕೊಂಡು ಬಂದಿದ್ದಾರೆ. ನಾನು ಕೂಡ ಅದೇ ರೀತಿ ನೋಡುವೆ ಎಂದು ಬಿಜೆಪಿ ಅಭ್ಯರ್ಥಿ ಬಿ.ವೈ. ವಿಜಯೇಂದ್ರ ಹೇಳಿದರು.

ಇದನ್ನೂ ವೀಕ್ಷಿಸಿ: ಯಾರೇ ಬರಲಿ ಜನ ತೀರ್ಮಾನ ಮಾಡ್ತಾರೆ: ಭರತ್‌ ಬೊಮ್ಮಾಯಿ

Video Top Stories