ಯಾರೇ ಬರಲಿ ಜನ ತೀರ್ಮಾನ ಮಾಡ್ತಾರೆ: ಭರತ್‌ ಬೊಮ್ಮಾಯಿ

'ತಂದೆಯ ಅಭಿವೃದ್ಧಿ ಕೆಲಸಕ್ಕೆ ಜನ ವೋಟ್‌ ಹಾಕ್ತಾರೆ'
'ಅಭಿವೃದ್ಧಿ ಕೆಲಸಕ್ಕೆ ತಕ್ಕಂತೆ ಫಲಿತಾಂಶ ಬರಲಿದೆ'
ಶಿಗ್ಗಾವಿಯಲ್ಲಿ ಸಿಎಂ ಪುತ್ರ ಭರತ್ ಬೊಮ್ಮಾಯಿ ಹೇಳಿಕೆ

First Published Apr 19, 2023, 3:16 PM IST | Last Updated Apr 19, 2023, 3:16 PM IST

ಹಾವೇರಿ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇಂದು ಶಿಗ್ಗಾವಿ-ಸವಣೂರು ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದಾರೆ. ಅದಕ್ಕೂ ಮೊದಲು ಶಿಗ್ಗಾವಿಯಲ್ಲಿ ಬೃಹತ್ ರೋಡ್ ಶೋ ನಡೆಸಿದರು. ಈ ಸಂದರ್ಭದಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ, ಚಿತ್ರನಟ ಸುದೀಪ್ ಮತ್ತಿತರರು ಹಾಜರಿದ್ದರು. ಈ ಬಗ್ಗೆ ಮಾತನಾಡಿದ ಭರತ್‌ ಬೊಮ್ಮಾಯಿ ತಂದೆಯ ಅಭಿವೃದ್ಧಿ ಕೆಲಸ ನೋಡಿ ಜನ ಮತ ನೀಡುತ್ತಾರೆ. ತಂದೆಯವರ ಅಭಿವೃದ್ಧಿ ಜೊತೆಗೆ ಬಿಜೆಪಿ ಸರ್ಕಾರದ ಅಭಿವೃದ್ಧಿ ನೋಡಿ ಅದಕ್ಕೆ ತಕ್ಕಂತೆ ಮೇ.13 ರಂದು ವಿಧಾನಸಭಾ ಚುನಾವಣೆಯಲ್ಲಿ ಫಲಿತಾಂಶ ಬರುತ್ತದೆ. ಅವರು ಸತತ 15 ವರ್ಷದಿಂದ ಅಭಿವೃದ್ಧಿ ಕೆಲಸ ಮಾಡಿದ ಪರಿಣಾಮವಾಗಿ ಅವರು ಸಿಎಂ ಆದರು. 150 ಮಿಷನ್‌ನನ್ನು ತಲುಪಲು ನಾವು ತುಂಬಾ ಪ್ರಯತ್ನ ಮಾಡಿದ್ದೇವೆ. ಅದಕ್ಕೆ ತಕ್ಕಂತೆ ಫಲಿತಾಂಶ ಸಹ ಬರಲಿದೆ ಎಂದು ಭರತ್‌ ಬೊಮ್ಮಾಯಿ ಹೇಳಿದರು.

ಇದನ್ನೂ ವೀಕ್ಷಿಸಿ: ಸಿಎಂ ತವರಿನಲ್ಲಿ ನಾಮಿನೇಷನ್‌ ಜಾತ್ರೆ,ಶಿಗ್ಗಾವಿಯಲ್ಲಿ ಬೊಮ್ಮಾಯಿ ಶಕ್ತಿ ಪ್ರದರ್ಶನ