Asianet Suvarna News Asianet Suvarna News

2018ರಲ್ಲಿ ಕಾಂಗ್ರೆಸ್‌ ಜೊತೆ ನಮ್ಮ ಮೈತ್ರಿ ಇತ್ತು, SDPI ನಾಯಕನ ಹೇಳಿಕೆ

2018ರ ಕಾಂಗ್ರೆಸ್‌ ಜೊತೆಗಿನ ಒಳ ಒಪ್ಪಂದ ಬಾಯ್ಬಿಟ್ಟ ಎಸ್‌ಡಿಪಿಐ ಮುಖಂಡರೊಬ್ಬರು ಬಾಯ್ಬಿಟ್ಟಿದ್ದಾರೆ. ಕಳೆದ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್‌ ನಂಬಿಕೆ ದ್ರೋಹ ಮಾಡಿತ್ತು. ಈ ಬಾರಿ ಹಾಗಾಗಲು ಬಿಡೋದಿಲ್ಲ ಎಂದಿದ್ದಾರೆ.

ಬೆಂಗಳೂರು (ಮಾ.17): 2018ರ ಕಾಂಗ್ರೆಸ್‌ ಜೊತೆಗಿನ ಒಳ ಒಪ್ಪಂದವನ್ನು ಎಸ್‌ಡಿಪಿಐ ಮುಖಂಡರು ಬಹಿರಂಗ ಮಾಡಿದ್ದಾರೆ. ರಾಜಕೀಯ ಪ್ರಬುದ್ಧತೆ ಕೊರತೆ ಇಂದ ಕಾಂಗ್ರೆಸ್‌ ನಂಬಿ ಸೋತಿದ್ದೇವೆ. ಈ ಬಾರಿ ಹಾಗಾಗೋದಿಲ್ಲ. ಈ ಬಾರಿಯ ಕಣದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ಬಂಟ್ವಾಳ ಕ್ಷೇತ್ರದ ಎಸ್‌ಡಿಪಿಐ ಅಭ್ಯರ್ಥಿ ಇಲ್ಯಾಸ್‌ ತುಂಬೆ ಹೇಳಿದ್ದಾರೆ.

ಎಸ್‌ಡಿಪಿಐನ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯೂ ಆಗಿರುವ ತುಂಬೆ, ರಾಷ್ಟ್ರೀಯ ನಾಯಕರ ಸೂಚನೆಯಂತೆ 2018ರಲ್ಲಿ ಒಪ್ಪಂದ ಆಗಿತ್ತು. ಮೂರು ಕ್ಷೇತ್ರಗಳಲ್ಲಿ ಮಾತ್ರ ಎಸ್‌ಡಿಪಿಐ ಸ್ಪರ್ಧೆ ಮಾಡಬೇಕು. ಉಳಿದ ಎಲ್ಲಾ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ಗೆ ಬೆಂಬಲ ನೀಡಬೇಕು. ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್‌ ನೀಡಿದ ಮಾತನ್ನು ಪಾಲಿಸಿರಲಿಲ್ಲ ಎಂದು ಅವರು ಹೇಳಿದ್ದಾರೆ.

 

ಅಜಾನ್ ಕುರಿತು ವಿವಾದಾತ್ಮಕ ಹೇಳಿಕೆ : ಈಶ್ವರಪ್ಪ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ SDPI ಪ್ರತಿಭಟನೆ

ಬಂಟ್ವಾಳ ಕ್ಷೇತ್ರದ ಎಸ್‌ಡಿಪಿಐ ಅಭ್ಯರ್ಥಿಯಾಗಿರುವ ಇಲ್ಯಾಸ್‌ ತುಂಬೆ, 'ರಾಜ್ಯ ಕಾಂಗ್ರೆಸ್‌ನ ಹಿರಿಯ ತಲೆಗಳು ಕೂಡ ಕಳೆದ ಬಾರಿ ನಮಗೆ ಮನವಿ ಮಾಡಿಕೊಂಡಿದ್ದರು. ಚುನಾವಣೆಯಲ್ಲಿ ಬೆಂಬಲ ನೀಡುವಂತೆ ಹೇಳಿದ್ದರಿಂದ ಮೈತ್ರಿ ಮಾಡಿಕೊಂಡಿದ್ದೆವು' ಎಂದಿದ್ದಾರೆ.