ಮತ್ತಷ್ಟು ಸಾಮ್ರಾಜ್ಯ ವಿಸ್ತರಣೆಗೆ ಮುಂದಾದ ಸತೀಶ್ ಜಾರಕಿಹೊಳಿ: ಪುತ್ರನನ್ನು ರಾಜಕೀಯಕ್ಕೆ ಕರೆತರಲು ಪ್ರಯತ್ನ

ಪುತ್ರ ರಾಹುಲ್‌ರನ್ನು ಕಣಕ್ಕಿಳಿಸಿ ವಿರೋಧಿಗಳನ್ನು ಹಣಿಯಲು ಸತೀಶ್ ಪ್ಲ್ಯಾನ್
ರಾಯಭಾಗ- ಕುಡಚಿ ಕ್ಷೇತ್ರದ ಅಳಗವಾಡಿಯಲ್ಲಿ ಮನೆ ಮಾಡಲು ನಿರ್ಧಾರ
ಚಿಕ್ಕೋಡಿ ಲೋಕಸಭೆ ಕ್ಷೇತ್ರದಲ್ಲೂ ‌ಸಾಮ್ರಾಜ್ಯ ವಿಸ್ತರಣೆಗೆ ಸತೀಶ್ ‌ಪ್ಲ್ಯಾನ್!

First Published Jul 2, 2024, 4:11 PM IST | Last Updated Jul 2, 2024, 4:12 PM IST

ಮತ್ತಷ್ಟು ಸಾಮ್ರಾಜ್ಯ ವಿಸ್ತರಣೆಗೆ ಸಚಿವ ಸತೀಶ್ ಜಾರಕಿಹೊಳಿ(Satish Jarakiholi) ಅಣಿಯಾಗಿದ್ದಾರೆ. ಪುತ್ರಿ ಆಯ್ತು, ಈಗ ಪುತ್ರ ರಾಹುಲ್‌ ಜಾರಕಿಹೊಳಿಯನ್ನೂ (Rahul Jarakiholi) ರಾಜಕೀಯಕ್ಕೆ ಕರೆತರಲು ಪ್ರಯತ್ನ ಮಾಡಲಾಗುತ್ತಿದೆ. ಲೋಕಸಭೆ ಚುನಾವಣೆಯಲ್ಲಿ ಪುತ್ರಿಯನ್ನು ಸಂಸದೆ ಮಾಡುವಲ್ಲಿ ಸತೀಶ್‌ ಜಾರಕಿಹೊಳಿ ಸಕ್ಸಸ್ ಆಗಿದ್ದು, ಈಗ ಪುತ್ರನನ್ನು ವಿಧಾನಸಭೆಗೆ ಕರೆ ತರಲು ಈಗಿನಿಂದಲೇ ಪ್ಲ್ಯಾನ್ ಮಾಡಲಾಗುತ್ತಿದೆ. ರಾಜಕೀಯ (politics) ವಿರೋಧಿಗಳನ್ನು ಹಣಿಯಲು ಸತೀಶ್ ಜಾರಕಿಹೊಳಿ ಸಿದ್ಧತೆ ನಡೆಸುತ್ತಿದ್ದು, ಮಾವ-ಅಳಿಯನ‌ ಹಣಿಯಲು ಈಗಿನಿಂದಲೇ ಸತೀಶ್ ಕಾರ್ಯತಂತ್ರ ರೂಪಿಸುತ್ತಿದ್ದಾರೆ. ಶಾಸಕ ಮಹೇಂದ್ರ ತಮ್ಮಣ್ಣವರ, ಶಂಭು ಕಲ್ಲೋಳ್ಕರ್ ಟಾರ್ಗೆಟ್ ಮಾಡಿದ್ದು, ಸತೀಶ್ ಪುತ್ರಿ ವಿರುದ್ಧ ಪಕ್ಷೇತರ ಆಗಿ ಶಂಭು ಕಲ್ಲೋಳ್ಕರ್  ಕಣಕ್ಕಿಳಿದಿದ್ದರು. ಕುಡಚಿ- ರಾಯಭಾಗ ಕ್ಷೇತ್ರದಲ್ಲಿ ಸಂಘಟನೆಗೆ ಒತ್ತು ನೀಡಿರುವ ಸತೀಶ್ . ಸದ್ಯ ಎಸ್‌ಸಿ ಮೀಸಲಾಗಿರುವ ರಾಯಭಾಗ- ಕುಡಚಿ ವಿಧಾನಸಭೆ ಕ್ಷೇತ್ರಗಳು, 2028ರ ಚುನಾವಣೆಯಲ್ಲಿ ಒಂದು ಸಾಮಾನ್ಯ ಕ್ಷೇತ್ರವಾಗುವ ಸಾಧ್ಯತೆ ಇದೆ. ರಾಯಭಾಗ- ಕುಡಚಿ ಕ್ಷೇತ್ರದ ಅಳಗವಾಡಿಯಲ್ಲಿ ಮನೆ ಮಾಡಲು ನಿರ್ಧಾರ ಮಾಡಿದ್ದು, ಬೆಳಗಾವಿ ಲೋಕಸಭೆಯಲ್ಲಿ ಈಗಾಗಲೇ ಜಾರಕಿಹೊಳಿ ಕುಟುಂಬ ಹಿಡಿತ ಹೊಂದಿದೆ. 

ಇದನ್ನೂ ವೀಕ್ಷಿಸಿ:  ಉದ್ಯಮಿ ಶಿವಕಾಂತ ಸಾವಿಗೆ ಕಾರಣವಾಯಿತಾ ಮಾಟಮಂತ್ರ? ಇದರಿಂದಲೇ ಸಾವು ಎಂದು ಪತ್ನಿ ದೀಪಾ ಆರೋಪ!

Video Top Stories