ಉದ್ಯಮಿ ಶಿವಕಾಂತ ಸಾವಿಗೆ ಕಾರಣವಾಯಿತಾ ಮಾಟಮಂತ್ರ? ಇದರಿಂದಲೇ ಸಾವು ಎಂದು ಪತ್ನಿ ದೀಪಾ ಆರೋಪ!
ವಿಜಯ ಸಂಕೇಶ್ವರ, ಶಿವಕಾಂತ ಸಿದ್ನಾಳ ಪಾಲುದಾರಿಕೆಯ ಡೇರಿ
ವಿಜಯಕಾಂತ ಡೇರಿ ಆಸ್ತಿ ಕಬಳಿಸಲು ಹುನ್ನಾರ ಎಂದು ದೂರು
ಕೋಟ್ಯಾಂತರ ರೂ.ಆಸ್ತಿ ಕಬಳಿಸಲು ಮಾಟಮಂತ್ರದ ಆರೋಪ
ಮಾಜಿ ಸಂಸದರ ಕುಟುಂಬ ಕಲಹ ಬೆಳಗಾವಿಯಲ್ಲಿ(Belagavi) ಠಾಣೆ ಮೆಟ್ಟಿಲೇರಿದೆ. ಉದ್ಯಮಿಯ ಆಸ್ತಿ ಕಬಳಿಸಲು ಮಾಟಮಂತ್ರ(Black magic) ಮಾಡಿರುವ ಆರೋಪ ಕೇಳಿಬಂದಿದೆ. ಮಾಜಿ ಸಂಸದ ಎಸ್.ಬಿ ಸಿದ್ನಾಳ ಸೊಸೆ ದೀಪಾರಿಂದ ದೂರು ನೀಡಲಾಗಿದೆ. ಉದ್ಯಮಿ ವಿಜಯ ಸಂಕೇಶ್ವರ ಪುತ್ರಿ , ಸಿದ್ನಾಳ ಕಿರಿಯ ಸೊಸೆ ದೀಪಾ ಆಗಿದ್ದಾರೆ. ಬೆಳಗಾವಿಯ ಕ್ಯಾಂಪ್ ಪೊಲೀಸ್ ಠಾಣೆಯಲ್ಲಿ ದೀಪಾ ಸಿದ್ನಾಳ ದೂರು ನೀಡಿದ್ದಾರೆ. ವಿಜಯಕಾಂತ ಹಾಲಿನ ಡೇರಿ ಕಬಳಿಸಲು ಹುನ್ನಾರ ಎಂಬ ಆರೋಪ ಕೇಳಿಬಂದಿದೆ. ಇತ್ತಿಚೇಗಷ್ಟೇ ಅನಾರೋಗ್ಯದಿಂದ ಶಿವಕಾಂತ ಸಿದ್ನಾಳ ಸಾವಿಗೀಡಾಗಿದ್ದರು. ಶಿವಕಾಂತ ಸತ್ತ ಮೇಲೂ ಸಮಾಧಿಯ ಸುತ್ತಮುತ್ತ ಮಾಟಮಂತ್ರ..? ಮಾಡಲಾಗಿದೆಯಂತೆ. ಬೆಳಗಾವಿ ಕ್ಯಾಂಪ್ ಪೊಲೀಸ್ ಠಾಣೆಗೆ ನೀಡಿದ ದೂರಿನಲ್ಲಿ ಈ ಬಗ್ಗೆ ಉಲ್ಲೇಖ ಮಾಡಲಾಗಿದೆ. ಮೃತ ಶಿವಕಾಂತ ಸಹೋದರ ಶಶಿಕಾಂತ ಸಿದ್ನಾಳ ಪತ್ನಿ ವಾಣಿ ಸಿದ್ನಾಳ. ಪುತ್ರ ದಿಗ್ವಿಜಯ ಸಿದ್ನಾಳ ವಿರುದ್ಧ ಮಾಟಮಂತ್ರದ ಆರೋಪ ಕೇಳಿಬಂದಿದೆ. ಪ್ರತಿಷ್ಠಿತ ಆದಿತ್ಯ ಮಿಲ್ಕ್ ಕಂಪನಿಯ ಸಂಸ್ಥಾಪಕ ಶಿವಕಾಂತ ಸಿದ್ನಾಳ, 2002 ರಲ್ಲಿ ವಿಜಯ ಸಂಕೇಶ್ವರ ಪುತ್ರಿ ದೀಪಾ ಜತೆ ಶಿವಕಾಂತ ವಿವಾಹವಾಗಿತ್ತು. 2006 ರಲ್ಲಿ ವಿಜಯಕಾಂತ ಡೇರಿ ಸ್ಥಾಪಿಸಿದ್ದ ಶಿವಕಾಂತ ಸಿದ್ನಾಳ, ಬೈಲಹೊಂಗಲ ತಾಲೂಕಿನ ನೇಗಿನಹಾಳ ಗ್ರಾಮದಲ್ಲಿರುವ ಡೇರಿ. ವಿಜಯಕಾಂತ ಡೇರಿಗೆ ಡಾ. ವಿಜಯ ಸಂಕೇಶ್ವರ ಚೇರ್ಮನ್ ಆಗಿದ್ದರು. ಜೂನ್ 29 ರಂದು ಬೆಳಗಾವಿ ಕ್ಯಾಂಪ್ ಪೊಲೀಸ್ ಠಾಣೆಯಲ್ಲಿ FIR ದಾಖಲಾಗಿದೆ.
ಇದನ್ನೂ ವೀಕ್ಷಿಸಿ: ಕೆಪಿಸಿಸಿ ಹಂತದಲ್ಲಿ ಸತ್ಯಶೋಧನಾ ಸಮಿತಿ ರಚಿಸಲು ಮುಂದಾದ ಡಿಕೆಶಿ: ಲೀಡ್ ಕೊಡದ ಸಚಿವರಿಗೆ ಕಾದಿದೆಯಾ ಕಂಟಕ ..?