Santosh Lad On Modi: ಈ ಬಾರಿ ಜನರು ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸ್ತಾರೆ ಅನ್ನೋ ವಿಶ್ವಾಸ ಇದೆ: ಸಂತೋಷ್‌ ಲಾಡ್

ಬಿಜೆಪಿಗಿಂತ ಜಾಸ್ತಿ ದೇಶದಲ್ಲಿರುವ ನೋವನ್ನ ಸ್ವಾಮೀಜಿಗಳು ತೋಡಿಕೊಳ್ಳಲಿ ಅನ್ನೋದು ನನ್ನ ಅಭಿಪ್ರಾಯ ಎಂದು ಸಚಿವ ಸಂತೋಷ್‌ ಲಾಡ್ ಧಾರವಾಡದಲ್ಲಿ ಹೇಳಿದ್ದಾರೆ. 

First Published Apr 1, 2024, 5:55 PM IST | Last Updated Apr 1, 2024, 5:56 PM IST


ಧಾರವಾಡ: ಪ್ರಧಾನಿ ಮೋದಿ ವಿರೋಧಿ ಅಲೆ ಆರಂಭವಾಗಿದೆ. ಅವರಿಂದ ಯಾವುದೇ ಅನುಕೂಲ ಆಗುವ ಕಾರ್ಯಕ್ರಮ ಆಗಿಲ್ಲ ಎಂದು 
ಧಾರವಾಡದಲ್ಲಿ ಸಚಿವ ಸಂತೋಷ್ ಲಾಡ್(Santosh Lad) ಹೇಳಿದ್ದಾರೆ. ನಮ್ಮ ಐದು ಗ್ಯಾರಂಟಿಗಳು ಮನೆ ಮನೆ ಮುಟ್ಟಿದೆ, ಜನ ಅರ್ಥ ಮಾಡಿಕೊಳ್ಳುತ್ತಿದ್ದಾರೆ. ಅವರು ಎಷ್ಟು ಸುಳ್ಳು ಹೇಳೋಕೆ ಪ್ರಯತ್ನ ಮಾಡುತ್ತಾರೆ, ಅದನ್ನ ಮಾಡ್ತಾನೆ ಇರ್ತಾರೆ ಅದೇನು ಹೊಸದಲ್ಲ. ಈ ಬಾರಿ ಜನರು ಕಾಂಗ್ರೆಸ್(Congress) ಪಕ್ಷವನ್ನು ಗೆಲ್ಲಿಸ್ತಾರೆ ಅನ್ನೋ ವಿಶ್ವಾಸ ಇದೆ. ಧಾರವಾಡದಲ್ಲೂ(Dharwad) ಕಾಂಗ್ರೆಸ್ ಬಾವುಟ ಹಾರಲಿದೆ. ಎಲ್ಲಾ ಜಿಲ್ಲಾಉಸ್ತುವಾರಿಗಳು ಮುತುವರ್ಜಿ ವಹಿಸ್ತಿದ್ದಾರೆ. ಎಲ್ಲಾ ಸಮಾಜದ ಮುಖಂಡರೊಂದಿಗೆ ಚುನಾವಣೆ ಮಾಡಬೇಕಾಗುತ್ತೆ. ಈ ಬಾರಿ ನಾನು ಇಲ್ಲಿ ಜವಾಬ್ದಾರಿ ತೆಗೆದುಕೊಂಡಿದ್ದೇನೆ. ಮುಖಂಡರನ್ನು ಬಿಟ್ರೆ ನಾನು ಜೀರೋ, ಎಲ್ಲರನ್ನು ತೆಗೆದುಕೊಂಡು ಹೋಗ್ತಿದ್ದಿವಿ. ನಮ್ಮ ಕಾರ್ಯಕರ್ತರನ್ನು ಬಿಟ್ರೆ ನಾನು ದೊಡ್ಡ ಜೀರೋ. ಎಲ್ಲರನ್ನು ತೆಗೆದುಕೊಂಡು ಹೋಗೋದೇ ನಮ್ಮ ಕಾಂಗ್ರೆಸ್ ಪಕ್ಷದ ಸಿದ್ಧಾಂತ. ದಿಂಗಾಲೇಶ್ವರ ಶ್ರೀಗಳಿಂದ(Dingaleshwara Swamiji) ನಾಳೆ ಧಾರವಾಡದಲ್ಲಿ ಸಭೆ ವಿಚಾರವಾಗಿ ಮಾತನಾಡಿ, ದಿಂಗಾಲೇಶ್ವರ ಶ್ರೀಗಳು ಬಹಳ ಪ್ರಭಾವಿ. ನನಗೆ ಅವರು 2006 ರಿಂದ ಪರಿಚಯ. ನಾನು ಕೂಡ ಅವರ ದೊಡ್ಡ ಅಭಿಮಾನಿ. ಅವರ ಮಾತಿನಲ್ಲಿ ಗಂಭೀರತೆ ಇದೆ, ಚುನಾವಣೆ ವಿಷಯ ಅಷ್ಟೇ ಅಲ್ಲ. ಅವರು ಯಾವಾಗ್ಲೂ ಮಾತನಾಡಿದ್ದಾಗ 10 ಸಾವಿರ ಜನ ಸೇರ್ತಾರೆ. ಅವರ ಸೈದ್ಧಾಂತಿಕ ಭಾಷಣ ಮತ್ತು ಸಮಾಜಕ್ಕೆ ಸಂದೇಶ ಕೊಡುತ್ತಾರೆ. ಅದನ್ನ ಕಡೆಗಣಿಸಲು ಸಾಧ್ಯ ಇಲ್ಲ. ಅವರದ್ದೇ ಯಾದ ಅಭಿಮಾನಿ ಬಳಗ ಇದೆ, ಕೇವಲ ಒಂದು ಸಮುದಾಯಕ್ಕೆ ಮಾತ್ರವಲ್ಲ. ದಿಂಗಾಲೇಶ್ವರ ಶ್ರೀ ಅಂದ್ರೆ ಕೇವಲ ಲಿಂಗಾಯತ ಸಮುದಾಯಕ್ಕೆ ಸೇರಿಲ್ಲ ಎಂದು ಸಚಿವ ಸಂತೋಷ್‌ ಲಾಡ್‌ ಹೇಳಿದರು.

ಇದನ್ನೂ ವೀಕ್ಷಿಸಿ:  Watch Video: ಅಕ್ಷರಸ್ತರೇ ಈ ಬಾರಿಯ ಗೇಮ್ ಚೇಂಜರ್ಸ್..! ಬ್ರಿಟನ್ ಪತ್ರಿಕೆಯಲ್ಲಿ ಕುತೂಹಲಕಾರಿ ಲೇಖನ..!

Video Top Stories