Asianet Suvarna News Asianet Suvarna News

Watch Video: ಅಕ್ಷರಸ್ತರೇ ಈ ಬಾರಿಯ ಗೇಮ್ ಚೇಂಜರ್ಸ್..! ಬ್ರಿಟನ್ ಪತ್ರಿಕೆಯಲ್ಲಿ ಕುತೂಹಲಕಾರಿ ಲೇಖನ..!

ಮೋದಿ ವಿರುದ್ಧ ಆಡಳಿತ ವಿರೋಧಿ ಅಲೆಯಿಲ್ಲವಾ?
ಅಪಪ್ರಚಾರಕ್ಕೂ ಕುಗ್ಗದ ಮೋದಿ ಜನಪ್ರಿಯತೆ..!
ನಿಸ್ವಾರ್ಥ ರಾಜಕಾರಣವೇ ಮೋದಿಯ ಶಕ್ತಿ..!
 

ಲೋಕಸಭಾ ಚುನಾವಣೆ ಇನ್ನೇನು ಬಂದೇ ಬಿಡ್ತು, ಎಲ್ಲ ಕಡೆಗಳಲ್ಲಿ ಸೋಲು ಗೆಲುವಿನ ಲೆಕ್ಕಾಚಾರ ಶುರುವಾಗಿದೆ. ಗೆಲ್ಲೋದಕ್ಕೆ ಎಲ್ಲಾ ಪಕ್ಷಗಳು ತಮ್ಮ ತಮ್ಮ ಪ್ರಚಾರ ಕಾರ್ಯ ಶುರು ಮಾಡಿವೆ. ಇನ್ನೊಂದು ಕಡೆಯಲ್ಲಿ ಈಡೀ ಜಗತ್ತಿನ ಗಮನ ಕೂಡ ಭಾರತದ ಅತಿ ದೊಡ್ಡ ಪ್ರಜಾಪ್ರಭುತ್ವದ ಹಬ್ಬದ ಮೇಲೆ ನೆಟ್ಟಿದೆ. ಯಾಕೆಂದ್ರೆ ಭಾರತವೀಗ(India) ಹತ್ತರಲ್ಲಿ ಒಂದು ದೇಶವಾಗಿ ಉಳಿದಿಲ್ಲ. ಈ ಹೊತ್ತಲ್ಲಿ ಬ್ರಿಟಿಷ್ ಪತ್ರಿಕೆಯೊಂದರ ಲೇಖನ(Article) ಭಾರಿ ಸದ್ದು ಮಾಡ್ತಾ ಇದೆ. ಮೋದಿಯ ಮೂರನೇ ಗೆಲುವಿನ ಬಗ್ಗೆ ಕೆಲವು ವಿಚಾರಗಳನ್ನ ಹಂಚಿಕೊಂಡಿರೋ ಪತ್ರಿಕೆ ಸುಶಿಕ್ಷಿತರೇ ಮೋದಿಯ(Narendra modi) ಶ್ರೀರಕ್ಷೆ ಅನ್ನೋದನ್ನ ಹೇಳಿದೆ. ಆಧುನಿಕ ಭಾರತದ ಚುನಾವಣಾ ಚರಿತ್ರೆಯ ಸಾಮ್ರಾಟ ಅಂತ ಯಾರಾದ್ರೂ ಇದ್ರೆ ಅದು ಮೋದಿ, ನರೇಂದ್ರ ಮೋದಿ. ದೇಶದ ಚುನಾವಣಾ(Election) ರಾಜಕಾರಣದಲ್ಲಿ ಮೋದಿಗೆ ಸರಿಸಾಟಿಯಾಗಬಲ್ಲ ನಾಯಕ ಮತ್ತೊಬ್ಬನಿಲ್ಲ. ಇದು ಪದೇ ಪದೇ ಪ್ರೂವ್ ಆಗ್ತಾನೇ ಇದೆ. ಈಗಾಗ್ಲೇ ಸತತ 2 ಬಾರಿ ದೇಶ ಗೆದ್ದಿರುವ ನರೇಂದ್ರ, 3ನೇ ಬಾರಿ ಪ್ರಧಾನಿ ಪಟ್ಟಕ್ಕೇರೋದಕ್ಕೆ ಸಿದ್ಧತೆ ನಡೆಸ್ತಾ ಇದ್ದಾರೆ. ಮತ್ತೊಮ್ಮೆ ನಾನೇ ಬರ್ತೀನಿ ಅಂತ ಮೋದಿ ಅಬ್ಬರಿಸಿದ್ದೂ ಆಗಿದೆ. ಅಬ್ಕಿಬಾರ್ ಚಾರ್ ಸೌ ಪಾರ್ ಅನ್ನೋ ಘೋಷ ವಾಕ್ಯದಡಿ ಬಿಜೆಪಿ(BJP) ಹಾಗೂ ಮಿತ್ರ ಪಕ್ಷಗಳು ಮುನ್ನುಗ್ಗುತ್ತಿವೆ. ಮೋದಿಯಂತೂ 370 ಸೀಟುಗಳನ್ನ ಏಕಾಂಗಿಯಾಗಿ ಗೆಲ್ಲೋಕೆ ಸಂಕಲ್ಪ ತೊಟ್ಟಿದ್ದಾರೆ.

ಇದನ್ನೂ ವೀಕ್ಷಿಸಿ:  Loksabha Eection: ಜೋರಾದ ಅಭ್ಯರ್ಥಿಗಳ ನಾಮಪತ್ರ ಸಲ್ಲಿಕೆ ಭರಾಟೆ.. ಇಂದು ಕಾಂಗ್ರೆಸ್, ಬಿಜೆಪಿ ಅಭ್ಯರ್ಥಿಗಳಿಂದ ಉಮೇದುವಾರಿಕೆ!

Video Top Stories