ಮಹಾರಾಷ್ಟ್ರದಲ್ಲಿ ಎನ್‌ಡಿಎ ಕೂಟಕ್ಕೆ ಕಾದಿದ್ಯಾ ಬಿಗ್ ಶಾಕ್? ವಿಧಾನಸಭೆಯಲ್ಲೂ ಲೋಕಸಭೆ ಮಾದರಿಯ ಫಲಿತಾಂಶ..?

ಮಹಾರಾಷ್ಟ್ರದ 288 ಕ್ಷೇತ್ರಗಳ ಮತದಾರರಿಂದ ಅಭಿಪ್ರಾಯ
ಎನ್‌ಡಿಎ ಹಿನ್ನಡೆಗೆ ಮೈತ್ರಿಯೇ ಕಾರಣ ಎಂದ ಸಕಾಲ್ ಸರ್ವೆ
ಮಹಾರಾಷ್ಟ್ರದಲ್ಲಿ ಜನತೆಗೆ ಬಿಜೆಪಿ ಮಿತ್ರಪಕ್ಷಗಳ ಮೇಲೆ ಆಕ್ರೋಶ

First Published Jul 17, 2024, 12:44 PM IST | Last Updated Jul 17, 2024, 12:45 PM IST

ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯ(Maharashtra assembly elections) ಮೊದಲ ಸರ್ವೆ(Survey) ಬಹಿರಂಗಗೊಂಡಿದೆ. ಇಲ್ಲಿಯೂ ಎನ್‌ಡಿಎ(NDA) ಕೂಟಕ್ಕೆ ಬಿಗ್‌ ಶಾಕ್‌ ಕಾದಿದೆ ಎನ್ನಲಾಗ್ತಿದೆ. ವಿಧಾನಸಭೆಯಲ್ಲೂ ಲೋಕಸಭೆ ಮಾದರಿಯ ಫಲಿತಾಂಶ ಬರುವ ಸಾಧ್ಯತೆ ಇದೆ. ಪರಿಷತ್ ಚುನಾವಣೆ ಗೆಲುವಿನ ಅಲೆಯಲ್ಲಿದ್ದ ಬಿಜೆಪಿಗೆ (BJP) ಆಘಾತ ಉಂಟಾಗಿದೆ. ಮಹಾರಾಷ್ಟ್ರದಲ್ಲಿ ಮತ್ತೆ ಅತಂತ್ರ ಸರ್ಕಾರವೆಂದು ಸಕಾಲ್ ಸರ್ವೆ(Sakal Survey) ಹೇಳಿದೆ. ಈ ಬಾರಿಯೂ ಯಾರಿಗೂ ಬಹುಮತ ಬರೋದಿಲ್ಲವೆಂದು ಸರ್ವೆ ಹೇಳಿದೆ. I.N.D.I.A ಕೂಟ ಸ್ಥಾನ ಹೆಚ್ಚು ಮಾಡಿಕೊಳ್ಳಲಿದೆ ಎಂದು ಸಮೀಕ್ಷೆ ಹೇಳಿದೆ. 288 ಕ್ಷೇತ್ರಗಳಲ್ಲಿ I.N.D.I.Aಗೆ 139 ಸ್ಥಾನ ಗಳಿಸಬಹುದು ಎಂದು ಸರ್ವೆ ಹೇಳಿದೆ. ಶಿಂಧೆ ನೇತೃತ್ವದ ಎನ್‌ಡಿಎ ಸರ್ಕಾರಕ್ಕೆ 140 ಸ್ಥಾನ ಎಂದು ಸಮೀಕ್ಷೆ ಹೇಳಿದೆ.

ಇದನ್ನೂ ವೀಕ್ಷಿಸಿ:  ಅಧಿವೇಶನದಲ್ಲಿ 2ನೇ ದಿನವೂ ಹಗರಣ ವಾಗ್ಯುದ್ಧ: ಸದನದಲ್ಲಿ ‘ದಲಿತ ಪದ’ ಬಳಕೆಗೆ ಶಾಸಕ ನರೇಂದ್ರ ಸ್ವಾಮಿ ವಿರೋಧ..!

Video Top Stories