ಅಧಿವೇಶನದಲ್ಲಿ 2ನೇ ದಿನವೂ ಹಗರಣ ವಾಗ್ಯುದ್ಧ: ಸದನದಲ್ಲಿ ‘ದಲಿತ ಪದ’ ಬಳಕೆಗೆ ಶಾಸಕ ನರೇಂದ್ರ ಸ್ವಾಮಿ ವಿರೋಧ..!

ವಾಲ್ಮೀಕಿ ಹಗರಣ ಚರ್ಚೆ ವೇಳೆ ದಲಿತ ಪದ ಬಳಕೆಗೆ ತೀವ್ರ ಆಕ್ಷೇಪ
ಈ ಪದ ಬಳಕೆ ಮಾಡಿದ್ದಕ್ಕೆ ಶಾಸಕ ನರೇಂದ್ರ ಸ್ವಾಮಿ ವಿರೋಧ..!
ಶಾಸಕ ನರೇಂದ್ರಸ್ವಾಮಿ ಮಾತಿಗೆ ಸಚಿವ ಪರಮೇಶ್ವರ್ ಬೆಂಬಲ

First Published Jul 17, 2024, 12:27 PM IST | Last Updated Jul 17, 2024, 12:27 PM IST

ವಿಧಾನಸಭೆಯಲ್ಲಿ(Legislative Assembly) 2ನೇ ದಿನವೂ ವಾಲ್ಮೀಕಿ ಹಗರಣದ(Valmiki Corporation Scam) ವಾಗ್ಯುದ್ಧ ನಡೆದಿದೆ. ಭ್ರಷ್ಟಾಚಾರದ (Corruption) ಹೆಸರಲ್ಲಿ ಡಿ.ಕೆ. ಶಿವಕುಮಾರ್ ವರ್ಸಸ್ ಅಶ್ವತ್ಥನಾರಾಯಣ ನಡುವೆ ಮಾತಿನಚಕಮಕಿ ನಡೆಯಿತು. ಲೂಟಿಕೋರರ ಪಿತಾಮಹ ಎಂದಿದ್ದಕ್ಕೆ ಡಿಕೆಶಿ(DK Shivakumar ) ವಿರುದ್ಧ ಸಮರ ಸಾರಲಾಯಿತು. ಡಿಸಿಎಂ ಡಿಕೆಶಿ ಕ್ಷಮೆಗೆ ಅಶ್ವತ್ಥನಾರಾಯಣ, ಸುನೀಲ್‌ಕುಮಾರ್ ಆಗ್ರಹಿಸಿದರು. ಡಿಕೆಶಿ- ಅಶ್ವತ್ಥನಾರಾಯಣ (Ashwathtanarayan) ಜಟಾಪಟಿ.. ಸದನದಲ್ಲಿ ಗದ್ದಲ. ಎಸ್ಐಟಿ ತನಿಖೆ ಬಗ್ಗೆಯೂ ವಿಧಾನಸಭೆಯಲ್ಲಿ ಕೋಲಾಹಲ ಉಂಟಾಯಿತು. ವಾಲ್ಮೀಕಿ ಹಗರಣದ ಎಸ್ಐಟಿ ತನಿಖೆಗೆ ಅಶೋಕ್ ವಾಕ್ಸಮರ, ರೇವಣ್ಣರನ್ನ ಎರಡೇ ದಿನಕ್ಕೆ SIT ಅಧಿಕಾರಿಗಳು ಬಂಧಿಸುತ್ತಾರೆ. ಇಷ್ಟು ದಿನವಾದರೂ ನಾಗೇಂದ್ರರನ್ನ ಬಂಧಿಸಲಿಲ್ಲ ಯಾಕೆ ಎಂದು ಆರ್‌. ಅಶೋಕ್ ಪ್ರಶ್ನಿಸಿದರು.

ಇದನ್ನೂ ವೀಕ್ಷಿಸಿ:  ಜಮ್ಮು-ಕಾಶ್ಮೀರದಲ್ಲಿ ಪ್ರಪಾತಕ್ಕೆ ಬಿದ್ದ ಕಾರು.. ಬೆಂಗಳೂರಿನ ಮೂವರ ದುರ್ಮರಣ

Video Top Stories