Asianet Suvarna News Asianet Suvarna News

ಕೆಂಪೇಗೌಡ ಜಯಂತಿ ಹೆಸರಲ್ಲಿ ಸೇಡಿನ ರಾಜಕಾರಣ..? ಶಿಷ್ಟಾಚಾರ ಮರೆಯಿತಾ ಕಾಂಗ್ರೆಸ್ ಸರ್ಕಾರ..?

ದ್ವೇಷದ ರಾಜಕಾರಣಕ್ಕೆ ಮುಂದಾದ ಕಾಂಗ್ರೆಸ್‌ನ ಒಕ್ಕಲಿಗ ನಾಯಕರು..?
ಚುನಾವಣೆ ಸೋಲಿನ ಸೇಡು ಕಾರ್ಯಕ್ರಮದ ಮೂಲಕ ತೀರಿಸಿಕೊಂಡ್ರಾ..?
ನಾನೇ ಮುಂದಿನ  ಒಕ್ಕಲಿಗ ಜನಾಂಗದ ನಾಯಕ ಅಂತ ಸಂದೇಶ ನೀಡಿದ್ರಾ..?

ಕೆಂಪೇಗೌಡ ಜಯಂತಿ (Kempegowda Jayanti) ಹೆಸರಲ್ಲಿ ಒಕ್ಕಲಿಗ ನಾಯಕರಿಗೆ (Vokkaliga leaders) ಅನ್ಯಾಯ ಮಾಡುವ ಮೂಲಕ ಸೇಡಿನ ರಾಜಕಾರಣ(Revenge politics) ಮಾಡಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ. ಜಯಂತಿ ಹೆಸರಲ್ಲಿ ಒಕ್ಕಲಿಗ ನಾಯಕರ ಹೆಸರನ್ನು ಸರ್ಕಾರ ಕೈಬಿಟ್ಟಿದೆ ಎನ್ನಲಾಗ್ತಿದೆ. ಸರ್ಕಾರದ ನಡೆಗೆ ರಾಜ್ಯ ಒಕ್ಕಲಿಗ ಸಂಘ ತೀರ್ವ ವಿರೋಧ ವ್ಯಕ್ತಪಡಿಸಿದೆ. ಜೂನ್ 27 ರಂದು ನಗರದ ಕಂಠೀರವ ಕ್ರೀಡಾಂಗಣದಲ್ಲಿ  ಕಾರ್ಯಕ್ರಮ ನಡೆಯಲಿದೆ. ಕಾರ್ಯಕ್ರಮದ ಆಹ್ವಾನ ಪತ್ರಿಕೆಯಲ್ಲಿ ಒಕ್ಕಲಿಗ ನಾಯಕರ ಹೆಸರಿಲ್ಲ. ಮಾಜಿ ಪ್ರಧಾನಿ ಹಾಲಿ ರಾಜಸಭಾ ಸದಸ್ಯ ಹೆಚ್ ಡಿ ದೇವೆಗೌಡ,  ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಹೆಸರನ್ನು ಸರ್ಕಾರ ಕೈಬಿಟ್ಟಿದೆ. ಆಹ್ವಾನ ಪತ್ರಿಕೆಯಲ್ಲಿ ಇಬ್ಬರ ಹೆಸರನ್ನು ರಾಜ್ಯ ಸರ್ಕಾರ ಹಾಕಿಲ್ಲ.  ರಾಜ್ಯದ ವಿವಿಧ ಜಿಲ್ಲೆಗಳ ಒಕ್ಕಲಿಗ ನಾಯಕರ ಹೆಸರು ಪ್ರಕಟಿಸಲಾಗಿದೆ. 

ಇದನ್ನೂ ವೀಕ್ಷಿಸಿ:  ಡಿಕೆಶಿಯನ್ನು ಸಿಎಂ ಮಾಡಿ, ಎಷ್ಟು ಬೇಕಾದ್ರೂ DCM ಮಾಡಲಿ: ಹೆಚ್ಚುವರಿ ಡಿಸಿಎಂಗೆ ಸ್ವಪಕ್ಷ ಶಾಸಕನಿಂದಲೇ ವಿರೋಧ

Video Top Stories