ಅತಿರಥರ ಅಖಾಡ: ಸಿಂ'ಹಾಸನ'ದಲ್ಲಿ ಹೇಗಿದೆ ರಣಕಣ?, ಸ್ವರೂಪ್‌ ಪರ ರೇವಣ್ಣ ಫ್ಯಾಮಿಲಿ !

ಹಾಸನದಲ್ಲಿ ಜೆಡಿಎಸ್‌ ಮತ್ತು ಬಿಜೆಪಿ ನೇರ ಹಣಾಹಣಿ
ಹಾಸನವನ್ನ ಮರಳಿ ಕೈವಶ ಮಾಡಿಕೊಳ್ಳುತ್ತಾ ಜೆಡಿಎಸ್‌?
ಜಿಲ್ಲೆಯಲ್ಲಿ ಎರಡೂ ಪಕ್ಷಗಳಿಂದ ಅಬ್ಬರದ ಪ್ರಚಾರ
 

First Published Apr 27, 2023, 4:58 PM IST | Last Updated Apr 27, 2023, 4:58 PM IST

ಹಾಸನ: ಜಿಲ್ಲೆಯಲ್ಲಿ ವಿಧಾನಸಭಾ ಚುನಾವಣಾ ಅಖಾಡ ರಂಗೇರಿದ್ದು, ಪ್ರೀತಂ ಗೌಡ 50 ಸಾವಿರಕ್ಕಿಂತ ಹೆಚ್ಚು ಮತ ಪಡೆಯುವುದಾಗಿ ಸವಾಲು ಹಾಕಿದ್ದಾರೆ. ಇದಕ್ಕೆ ಜೆಡಿಎಸ್ ಅಭ್ಯರ್ಥಿ ಟಕ್ಕರ್‌ ಕೊಡ್ತಾರಾ ಎಂದು ನೋಡಬೇಕಿದೆ. 2018ರ ಫಲಿತಾಂಶ ನೋಡೋದಾದ್ರೆ, ಪ್ರೀತಂ ಗೌಡ 63 ಸಾವಿರ ಮತಗಳನ್ನು ಪಡೆದಿದ್ದಾರೆ. ಜೆಡಿಎಸ್‌ ಅಭ್ಯರ್ಥಿ ಹೆಚ್‌.ಎಸ್‌.ಪ್ರಕಾಶ್‌ಗೆ 50 ಸಾವಿರ ಮತ, ಕಾಂಗ್ರೆಸ್‌ನ ಹೆಚ್‌.ಕೆ.ಮಹೇಶ್‌ 38 ಸಾವಿರ ಮತಗಳು ಬಂದಿವೆ. ಒಟ್ಟಿನಲ್ಲಿ ಪ್ರೀತಂ ಗೌಡ 13 ಸಾವಿರ ಮತಗಳ ಅಂತರದಿಂದ ಗೆದ್ದಿದ್ದಾರೆ. ಹಾಗಾಗಿ ಈ ಬಾರಿ ಸಹ ಗೆಲ್ಲಲು ಬಿಜೆಪಿ ಮತ್ತು ಜೆಡಿಎಸ್ ಎರಡೂ ಪಕ್ಷಗಳು ಅಬ್ಬರದ ಪ್ರಚಾರ ಮಾಡುತ್ತಿವೆ.

ಇದನ್ನೂ ವೀಕ್ಷಿಸಿ: ನನ್ನ ವೋಟು ನನ್ನ ಮಾತು: ಹುಬ್ಬಳ್ಳಿ ಸೆಂಟ್ರಲ್‌ನಲ್ಲಿ ಜಗದೀಶ್‌ ಶೆಟ್ಟರ್‌ ಗೆಲ್ತಾರಾ ?