ನನ್ನ ವೋಟು ನನ್ನ ಮಾತು: ಹುಬ್ಬಳ್ಳಿ ಸೆಂಟ್ರಲ್‌ನಲ್ಲಿ ಜಗದೀಶ್‌ ಶೆಟ್ಟರ್‌ ಗೆಲ್ತಾರಾ ?

ಹುಬ್ಬಳ್ಳಿ ಸೆಂಟ್ರಲ್‌ ಕ್ಷೇತ್ರದ ಕೆಲ ಮತದಾರರು ಜಗದೀಶ್‌ ಶೆಟ್ಟರ್‌ಗೆ ವೋಟ್‌ ಹಾಕುತ್ತೇವೆ ಎಂದರೇ, ಇನ್ನೂ ಕೆಲವರು ನಮಗೆ ಪಕ್ಷ ಮುಖ್ಯ ಎಂದು ಹೇಳಿದ್ದಾರೆ. 

Share this Video
  • FB
  • Linkdin
  • Whatsapp

ಹುಬ್ಬಳ್ಳಿ: ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ಮೇ.10 ರಂದು ನಡೆಯಲಿದ್ದು, ಫಲಿತಾಂಶ 13ಕ್ಕೆ ಬರಲಿದೆ. ಧಾರವಾಡ ಜಿಲ್ಲೆಯ ಹುಬ್ಬಳ್ಳಿ- ಧಾರವಾಡ ಸೆಂಟ್ರಲ್ ವಿಧಾನಸಭಾ ಕ್ಷೇತ್ರವು ಮಹಾನಗರ ಪಾಲಿಕೆಯನ್ನು ಒಳಗೊಂಡಿದೆ. ಇಲ್ಲಿ 67 ವಾರ್ಡ್‌ಗಳಿವೆ. ಈ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಪಾರುಪತ್ಯವಿದೆ. ಈ ಕ್ಷೇತ್ರವೊಂದರಿಂದಲೇ ಆಯ್ಕೆಯಾದ ಇಬ್ಬರು ರಾಜ್ಯದ ಮುಖ್ಯಮಂತ್ರಿಗಳಾಗಿದ್ದಾರೆ. ಈ ಬಾರಿ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಜಗದೀಶ್‌ ಶೆಟ್ಟರ್‌ ಇದ್ದು, ಬಿಜೆಪಿಯಿಂದ ಮಹೇಶ್‌ ಟೆಂಗಿನಕಾಯಿ, ಜೆಡಿಎಸ್‌ನಿಂದ ಸಿದ್ದಲಿಂಗೇಶ್ವರ ಗೌಡ ಅಭ್ಯರ್ಥಿಯಾಗಿದ್ದಾರೆ. ಇಲ್ಲಿ ಜಗದೀಶ್‌ ಶೆಟ್ಟರ್‌ ಮತ್ತು ಬಿಜೆಪಿ ನಡುವೆ ನೇರವಾದ ಸ್ಪರ್ಧೆ ಇದೆ. ಇಲ್ಲಿನ ಜನರು ಅಭ್ಯರ್ಥಿಗಳ ಬಗ್ಗೆ ಏನ್‌ ಹೇಳ್ತಾರೆ ಅಂತಾ ನೀವೇ ಕೇಳಿ..

ಇದನ್ನೂ ವೀಕ್ಷಿಸಿ: ಮಂಡ್ಯವನ್ನೇ ಯೋಗಿ ಆಯ್ಕೆ ಮಾಡಿಕೊಂಡದ್ದೇಕೆ ?: ಸನ್ಯಾಸಿ ಸಿಎಂ ಹೆಜ್ಜೆಯ ಹಿಂದಿನ ಕಾಲಭೈರವ ರಹಸ್ಯ!

Related Video