Asianet Suvarna News Asianet Suvarna News

ಬಾಗಲಕೋಟೆ ಬಿಜೆಪಿಯಲ್ಲಿ ಬಂಡಾಯ: ಪದಾಧಿಕಾರಿಗಳ ನೇಮಕ ವಿಚಾರದಲ್ಲಿ ನಾಯಕರು ಅಸಮಾಧಾನ

ಬಾಗಲಕೋಟೆ ಲೋಕಸಭೆಯಲ್ಲಿ ಅಸಮಾಧಾನದ ಹೊಗೆ
ಬಾದಾಮಿ ಬಿಜೆಪಿಯಲ್ಲಿ ಶುರುವಾಯ್ತು ಅಸಮಾಧಾನ
ಚುನಾವಣೆಯಲ್ಲಿ ತಟಸ್ಥವಾಗಿ ಉಳಿಯಲು ತೀರ್ಮಾನ

ಬಾಗಲಕೋಟೆ ಬಿಜೆಪಿಯಲ್ಲಿ(BJP) ಅಸಮಾಧಾನದ ಹೊಗೆ ಭುಗಿಲೆದ್ದಿದ್ದು, ಬಾದಾಮಿ(Badami) ಬಿಜೆಪಿಯಲ್ಲಿ ಅಸಮಾಧಾನ ಶುರುವಾಗಿದೆ. ಬೆಂಬಲಿಗರ ಸಭೆಯಲ್ಲಿ  ಇಬ್ಬರು ಬಿಜೆಪಿ ಮುಖಂಡರು ತಟಸ್ಥವಾಗಿರಲು ನಿರ್ಧಾರ ಮಾಡಿದ್ದಾರೆ ಎನ್ನಲಾಗ್ತಿದೆ. ಮಾಜಿ ಶಾಸಕ ಎಂ.ಕೆ.ಪಟ್ಟಣಶೆಟ್ಟಿ ಮತ್ತು ಮಹಾಂತೇಶ ಮಮದಾಪೂರ ಸಭೆ ನಡೆಸಿದ್ದಾರೆ. ಬಾದಾಮಿಯಲ್ಲಿ  ಬೆಂಬಲಿಗರ ಸಭೆ ನಡೆಸಿದ ಎಂ.ಕೆ.ಪಟ್ಟಣಶೆಟ್ಟಿ. ಪದಾಧಿಕಾರಿಗಳ ನೇಮಕ ವಿಚಾರದಲ್ಲಿ ನಾಯಕರು ಅಸಮಾಧಾನ ಹೊರಹಾಕಿದ್ದು, ವಿಧಾನಸಭೆ ಚುನಾವಣೆ ವೇಳೆ ಸಂಧಾನ ನಡೆಸಿ ಮರೆತು ಹೋಗಿದ್ರು. ನಾಯಕರು ಸಮಸ್ಯೆ ಪರಿಹರಿಸದಿದ್ದರೆ ಚುನಾವಣೆಯಲ್ಲಿ ತಟಸ್ಥ ನಿಲುವು ತಾಳುವ ಸಾಧ್ಯತೆ ಇದೆ. ಗದ್ದಿಗೌಡರ್ ಬಾಗಲಕೋಟೆ ಬಿಜೆಪಿ ಅಭ್ಯರ್ಥಿಯಾಗಿದ್ದಾರೆ.

ಇದನ್ನೂ ವೀಕ್ಷಿಸಿ:  ಮಠದ ಉದ್ಧಾರಕ್ಕೆ ಸ್ವಾಮಿಗಳಿರುತ್ತಾರೆ..ಅವರೇ ರಾಜಕೀಯಕ್ಕೆ ಬಂದ್ರೆ ಹೇಗೆ ?: ದಿಂಗಾಲೇಶ್ವರ ಶ್ರೀ ವಿರುದ್ಧ ಭಕ್ತರ ಕಿಡಿ