ಮಠದ ಉದ್ಧಾರಕ್ಕೆ ಸ್ವಾಮಿಗಳಿರುತ್ತಾರೆ..ಅವರೇ ರಾಜಕೀಯಕ್ಕೆ ಬಂದ್ರೆ ಹೇಗೆ ?: ದಿಂಗಾಲೇಶ್ವರ ಶ್ರೀ ವಿರುದ್ಧ ಭಕ್ತರ ಕಿಡಿ

ಚುನಾವಣೆಗೆ ನಿಂತ್ರೆ ಫಕೀರೇಶ್ವರ ಮಠವನ್ನೂ ದಿವಾಳಿ ಮಾಡ್ತಾರೆ
ಚುನಾವಣೆಗೆ ಹಣ ಹೊಂದಿಸಲು ಮಠವನ್ನೇ ಮಾರುತ್ತಾರೋ ಹೇಗೆ?
18ನೇ ತಾರೀಕಿನವರೆಗೆ ಕಾಯುತ್ತೇವೆ..ಬಳಿಕ ಮುಂದಿನ ನಿರ್ಧಾರ
ಏಷ್ಯಾನೆಟ್‌ ಸುವರ್ಣ ನ್ಯೂಸ್‌ಗೆ ಫಕ್ಕೀರೇಶ್ವರ ಮಠದ ಭಕ್ತರ ಹೇಳಿಕೆ

Share this Video

ರಾಜಕೀಯ ಪ್ರವೇಶದ ಉಮೇದಿನಲ್ಲಿರುವ ದಿಂಗಾಲೇಶ್ವರ ಶ್ರೀಗಳಿಗೆ(Dingaleshwar Shree) ಶಾಕ್ ನೀಡಲಾಗಿದ್ದು, ಪೀಠತ್ಯಾಗ ಮಾಡಿ ಚುನಾವಣೆಗೆ(Election) ನಿಂತರೆ ಸೂಕ್ತ ಎಂದು  ಮಠದ ಭಕ್ತರು ಹೇಳುತ್ತಿದ್ದಾರೆ. ದಿಂಗಾಲೇಶ್ವರ ಶ್ರೀಗಳ ಚುನಾವಣೆ ಸ್ಪರ್ಧೆ ನಿರ್ಧಾರಕ್ಕೆ ಭಕ್ತರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಗದಗ(Gadaga) ಜಿಲ್ಲೆಯ ಶಿರಹಟ್ಟಿಯಲ್ಲಿ ಸಭೆ ನಡೆಸಿದ ಫಕ್ಕೀರೇಶ್ವರ ಮಠದ ಭಕ್ತರು, ಚುನಾವಣಾ ಕಣದಿಂದ ಹಿಂದೆ ಸರಿಯುವಂತೆ ದಿಂಗಾಲೇಶ್ವರ ಶ್ರೀಗಳಿಗೆ ಮನವಿ ಮಾಡಿದ್ದಾರೆ. ಮಾಜಿ‌ ಶಾಸಕ ಜಿ.ಎಂ.ಮಹಾಂತಶೆಟ್ಟರ್, ವೆಂಕನಗೌಡ ಗೋವಿಂದ ಗೌಡರ್ ನೇತೃತ್ವದಲ್ಲಿ ಮನವಿ ಮಾಡಲಾಗಿದೆ. ಸ್ಪರ್ಧೆ ಮಾಡೋದಾದ್ರೆ ಪೀಠತ್ಯಾಗ ಮಾಡಬೇಕೆಂದು ಭಕ್ತರ(Devotees) ಪಟ್ಟು ಹಿಡಿದಿದ್ದು, ಮಠದ ಪರಂಪರೆಗೆ ಧಕ್ಕೆ ಬಾರದಂತೆ ನಡೆದುಕೊಳ್ಳಲು ಶ್ರೀಗಳಿಗೆ ಮನವಿ ಮಾಡಲಾಗಿದೆ ಎಂದು ಏಷ್ಯಾನೆಟ್ ಸುವರ್ಣ ನ್ಯೂಸ್‌ಗೆ ಮಠದ ಭಕ್ತರು ಹೇಳಿದ್ದಾರೆ.

ಇದನ್ನೂ ವೀಕ್ಷಿಸಿ:  Narendra Modi: ನಾಳೆ ರಾಜ್ಯಕ್ಕೆ ಪ್ರಧಾನಿ ನರೇಂದ್ರ ಮೋದಿ ಭೇಟಿ: ಮೈಸೂರಲ್ಲಿ ಮೈತ್ರಿ ಎಫೆಕ್ಟ್ ಏನು..?

Related Video