ಅಥಣಿಯಲ್ಲಿ ಸವದಿ Vs ಕುಮಟಳ್ಳಿ: ಹೇಗಿದೆ ರಣಕಣ?

ಅಥಣಿಯಲ್ಲಿ ಹೇಗಿರಲಿದೆ ಎಲೆಕ್ಷನ್‌ ಫೈಟ್‌?
ಕುತೂಹಲ ಮೂಡಿಸಿದ ರಮೇಶ್‌ ಜಾರಕಿಹೊಳಿ ಪ್ಲ್ಯಾನ್‌
ಸವದಿ ವಿರುದ್ಧವಾಗಿ ರಮೇಶ್‌ ಜಾರಕಿಹೊಳಿ ಕೆಲಸ

Share this Video
  • FB
  • Linkdin
  • Whatsapp

ಬೆಳಗಾವಿ:ವಿಧಾನಸಭಾ ಚುನಾವಣೆ ಹಿನ್ನೆಲೆ ಅಥಣಿಯಲ್ಲಿ ಜಿದ್ದಾಜಿದ್ದಿನ ಸ್ಪರ್ಧೆ ಇದ್ದು, ಬಿಜೆಪಿ ಬಿಟ್ಟು ಕಾಂಗ್ರೆಸ್‌ ಸೇರಿರುವ ಲಕ್ಷ್ಮಣ ಸವದಿ ಮಣಿಸಲು ಮಹೇಶ್ ಕುಮಟಳ್ಳಿ ತಂತ್ರವನ್ನು ಹೂಡಿದ್ದಾರೆ. ಸವದಿ ಸೋಲಿಸಲು ರಮೇಶ್‌ ಜಾರಕಿಹೊಳಿ ಏನು ಪ್ಲ್ಯಾನ್‌ ಮಾಡಿದ್ದಾರೆ ಎಂಬುದು ಇನ್ನೂ ತಿಳಿದಿಲ್ಲ. ಸವದಿ ಮೂರು ಬಾರೀ ಈ ಹಿಂದೆ ಅಥಣಿ ಕ್ಷೇತ್ರದಿಂದ ಗೆದ್ದಿದ್ದಾರೆ. ಈ ಬಾರಿ ಕಾಂಗ್ರೆಸ್‌ ಮತಗಳ ಜೊತೆ ಲಿಂಗಾಯತ ಮತಗಳು ಸಹ ಸವದಿಗೆ ಬೀಳುವ ಸಾಧ್ಯತೆ ಇದೆ. ರಮೇಶ್‌ ಜಾರಕಿಹೊಳಿ ಈಗಾಗಲೇ ಸವದಿ ವಿರುದ್ಧವಾಗಿ ಕೆಲಸ ಮಾಡುತ್ತಿದ್ದಾರೆ. ಇನ್ನೂ ಮಹೇಶ್‌ ಕುಮಟಳ್ಳಿ ಮಾತ್ರ ಅಭಿವೃದ್ಧಿ ಹೆಸರಿನಲ್ಲಿ ಚುನಾವಣೆಯನ್ನು ಎದುರಿಸುತ್ತಿದ್ದಾರೆ.

ಇದನ್ನೂ ವೀಕ್ಷಿಸಿ: ರಾಜಕೀಯ ಅಖಾಡಕ್ಕೆ ಸಿದ್ದು ಕುಟುಂಬದ 3ನೇ ತಲೆಮಾರು ಎಂಟ್ರಿ..!

Related Video