Shettar-Ramesh Jarakiholi:ಜಗದೀಶ್ ಶೆಟ್ಟರ್ ಭೇಟಿಯಾದ ರಮೇಶ್: ಹೆಬ್ಬಾಳ್ಕರ್ ಪುತ್ರ ಮೃಣಾಲ್‌ ಸೋಲಿಸಲು ಜಾರಕಿಹೊಳಿ ಪ್ಲ್ಯಾನ್ !

ಮಗಳನ್ನು ಗೆಲ್ಲಿಸಿಕೊಳ್ಳಲು ಮಣಾಲ್‌ಗೆ ಬೆಂಬಲ ನೀಡಬೇಕಾದ ಅನಿವಾರ್ಯತೆ
ಚಿಕ್ಕೋಡಿಯಿಂದ ಕಣಕ್ಕಿಳಿದಿರುವ ಸತೀಶ್ ಪುತ್ರಿ ಪ್ರಿಯಂಕಾ ಜಾರಕಿಹೊಳಿ
ಈ ಸಲ ಮೊದಲ ಬಾರಿ ಜಾರಕಿಹೊಳಿ ಬ್ರದರ್ಸ್ ನಡುವೆಯೇ ಫೈಟ್ ಜೋರು

First Published Mar 29, 2024, 12:32 PM IST | Last Updated Mar 29, 2024, 12:32 PM IST

ದಿನೇ ದಿನೇ ಬೆಳಗಾವಿಯಲ್ಲಿ ಲೋಕಸಭಾ ಕದನಕಣ ಕಾವೇರುತ್ತಿದೆ. ಕದನಕಣದ ಪ್ರಚಾರ ಅಖಾಡಕ್ಕೆ ರಮೇಶ್ ಜಾರಕಿಹೊಳಿ(Ramesh Jarakiholi) ಎಂಟ್ರಿ ಕೊಟ್ಟಿದ್ದು, ಲಕ್ಷ್ಮೀ ಹೆಬ್ಬಾಳ್ಕರ್(Lakshmi Hebbalkar) ಪುತ್ರನನ್ನು ಸೋಲಿಸಲು ರಮೇಶ್ ಪಣ ತೊಟ್ಟಿದ್ದಾರೆ. ಏಕಾಏಕಿ ಬೆಳಗಾವಿಯಲ್ಲಿ(Belagavi) ಜಗದೀಶ್ ಶೆಟ್ಟರ್‌ರನ್ನು(Jagadish Shettar) ರಮೇಶ್‌ ಭೇಟಿಯಾಗಿದ್ದಾರೆ. ಸುರೇಶ ಅಂಗಡಿ ನಿವಾಸದಲ್ಲಿ ಉಭಯ ನಾಯಕರು ಭೇಟಿ ಮಾಡಿದ್ದಾರೆ. ಒಂದೂವರೆ ಗಂಟೆಗಳ ಕಾಲ ಚುನಾವಣೆ ತಂತ್ರದ ಬಗ್ಗೆ ಸುದೀರ್ಘ ಚರ್ಚೆ ನಡೆಸಿದ್ದಾರೆ. ಸೋಮವಾರದಿಂದ ಚುನಾವಣೆ ಪ್ರಚಾರಕ್ಕೆ ಧುಮಕುವುದಾಗಿ ರಮೇಶ್ ಭರವಸೆ ನೀಡಿದ್ದು, ಬೆಳಗಾವಿಯಲ್ಲಿ ಬಿಜೆಪಿ(BJP) ಗೆಲ್ಲಿಸಲು ಪಣ ತೊಟ್ಟಿರುವ ರಮೇಶ್ ಜಾರಕಿಹೊಳಿ. ವಿಧಾನಸಭೆ ಚುನಾವಣೆ ಸೇಡನ್ನು ತೀರಿಸಿಕೊಳ್ಳಲು ರಮೇಶ್ ತಂತ್ರ ರೂಪಿಸುತ್ತಿದ್ದಾರೆ. ವಿಧಾನಸಭೆ ಚುನಾವಣೆಯಲ್ಲಿ ಲಕ್ಷ್ಮಿ ಹೆಬ್ಬಾಳ್ಕರ್ ಸೋಲಿಸಲು ಶತಪ್ರಯತ್ನ. ಆದರೆ ಆಗ ಸೋಲಿಸಲು ವಿಫಲವಾಗಿದ್ದ ರಮೇಶ್ ಜಾರಕಿಹೊಳಿ. ಇದೀಗ ಹೆಬ್ಬಾಳ್ಕರ್ ಪುತ್ರ ಮೃಣಾಲ್‌ ಸೋಲಿಸಲು ಜಾರಕಿಹೊಳಿ ಪ್ಲ್ಯಾನ್ ಮಾಡಿದ್ದಾರೆ. ಮತ್ತೊಂದೆಡೆ ಮೃಣಾಲ್‌ಗೆ ಬೆನ್ನಿಗೆ ಸಚಿವ ಸತೀಶ್ ಜಾರಕಿಹೊಳಿ ನಿಂತಿದ್ದು, ಗೋಕಾಕದಲ್ಲಿ ಮೃಣಾಲ್‌ ಜೊತೆಗೆ ಸತೀಶ್ ಜಾರಕಿಹೊಳಿ ಮಾತನಾಡಿದ್ದಾರೆ. ಇತ್ತ ಶೆಟ್ಟರ್ ಗೆಲ್ಲಿಸಲು ರಮೇಶ್ ತಂತ್ರ, ಮೃಣಾಲ್ ಗೆಲ್ಲಿಸಲು ಸತೀಶ್ ಪಣ ತೊಟ್ಟಿದ್ದಾರೆ.

ಇದನ್ನೂ ವೀಕ್ಷಿಸಿ:  Uddhav Thackeray: ಎಂವಿಎ ನಡುವೆ ಮುನಿಸೇಕೆ..? ಬಿಜೆಪಿ ಏಕಪಕ್ಷೀಯ ನಿರ್ಧಾರಕ್ಕೆ ಸಿಟ್ಟಿಗೆದ್ರಾ ಏಕನಾಥ್ ಶಿಂಧೆ..?