Asianet Suvarna News Asianet Suvarna News

Rajyasabha Election: ದೋಸ್ತಿಗೆ ತಿರುಮಂತ್ರ ಹಾಕಲು ಕೈ ಪ್ಲ್ಯಾನ್.. ನಡೆಯುತ್ತಾ ಅಡ್ಡ ಮತದಾನ..?

ಅಡ್ಡ ಮತದಾನದ ಸುಳಿವು ಕೊಟ್ಟ ಜೆಡಿಎಸ್ ಶಾಸಕ..ಯಾರಿಗೆ ಒಳೇಟು..? 
ಕಾಂಗ್ರೆಸ್ ಪರ ಕ್ರಾಸ್ ವೋಟ್ ಮಾಡ್ತಾರಾ ಜೆಡಿಎಸ್ ಶಾಸಕ ಕಂದಕೂರ್..?    
ಕಾಂಗ್ರೆಸ್ ಶಾಸಕನ ಅಕಾಲಿಕ ಮರಣ.. ಬದಲಾಯ್ತಾ ಮತ ಲೆಕ್ಕಾಚಾರ..?    

ರಾಜ್ಯಸಭಾ ರಹಸ್ಯ. ರಾಜ್ಯ ರಾಜಕಾರಣದಲ್ಲಿ ರೋಚಕ ಅಧ್ಯಾಯವೊಂದಕ್ಕೆ ಮುನ್ನು ಬರೆದಿರೋ ರಾಜ್ಯಸಭಾ ರಣರಂಗ. ಆ ರಣರಂಗಕ್ಕೆ ಮಂಗಳವಾರದ ಮುಹೂರ್ತ. ರಾಜ್ಯಸಭೆಗೆ(Rajyasabha) ಆಯ್ಕೆಯಾಗಲಿರೋದು ನಾಲ್ಕು ಮಂದಿ. ಅಖಾಡದಲ್ಲಿರೋದು ಐದು ಮಂದಿ. ಈ ಬಾರಿಯ ರಾಜ್ಯಸಭಾ ಚುನಾವಣೆಯಲ್ಲಿ ಸಂಖ್ಯಾಬಲದ ಪ್ರಕಾರ ಕರ್ನಾಟಕದಿಂದ(Karnataka) ರಾಜ್ಯಸಭೆಗೆ ಆಯ್ಕೆಯಾಗಿ ಹೋಗಲಿರುವ ಸದಸ್ಯ ಸಂಖ್ಯೆ ನಾಲ್ಕು. ಇದ್ರಲ್ಲಿ ಕಾಂಗ್ರೆಸ್"ಗೆ 3, ಬಿಜೆಪಿಗೆ(BJP) ಒಂದು ಸ್ಥಾನ. ಇದು ಮೇಲ್ನೋಟಕ್ಕೆ ಕಾಣ್ತಿರೋ ಲೆಕ್ಕಾಚಾರ. ಆದ್ರೆ ಒಳಗಿನ ಲೆಕ್ಕಾಚಾರವೇ ಬೇರೆ. ಕಾಂಗ್ರೆಸ್‌ನಿಂದ(Congress) ನಾಸಿರ್ ಹುಸೇನ್, ಜಿ.ಸಿ ಚಂದ್ರಶೇಖರ್ ಮತ್ತು ಹೈಕಮಾಂಡ್ ಅಭ್ಯರ್ಥಿ ಅಜಯ್ ಮಾಕೆನ್ ಅಖಾಡದಲ್ಲಿದ್ರೆ, ಬಿಜೆಪಿಯಿಂದ ನಾರಾಯಣ ಸಾ ಭಾಂಡಗೆ ಸ್ಪರ್ಧೆಯಲ್ಲಿದ್ದಾರೆ. ಆದ್ರೆ ಇಡೀ ಅಖಾಡವನ್ನೇ ರಣರಂಗವಾಗಿಸಿರೋದು ಬಿಜೆಪಿ-ಜೆಡಿಎಸ್ ದೋಸ್ತಿ ಪಾಳೆಯದಿಂದ ಸಿಡಿದಿರೋ ಐದನೇ ಅಸ್ತ್ರ. ಗೆಲ್ಲುವ ನಂಬರ್ ಇಲ್ಲದೇ ಇದ್ದರೂ, ಕಮಲದಳ ಮೈತ್ರಿ ಅಭ್ಯರ್ಥಿಯಾಗಿ ಕುಪೇಂದ್ರ ರೆಡ್ಡಿ ನಾಮಪತ್ರ ಸಲ್ಲಿಸಿರೋದು ಇಡೀ ಚುನಾವಣೆಯ ದಿಕ್ಕನ್ನೇ ಬದಲಿಸಿ ಬಿಟ್ಟಿದೆ.

ಇದನ್ನೂ ವೀಕ್ಷಿಸಿ:  ಎದುರಾಳಿಯ ದಿಗ್ಬಂಧನಕ್ಕೆ ಮೋದಿ-ಶಾ ಹೆಣೆದ ವ್ಯೂಹವೇನು? ಯಾರಿಗೆ ಯಾವ ಕ್ಷೇತ್ರ..? ಯಾರಿಗೆ ಏನು ಟೆನ್ಷನ್..?

Video Top Stories