ಎದುರಾಳಿಯ ದಿಗ್ಬಂಧನಕ್ಕೆ ಮೋದಿ-ಶಾ ಹೆಣೆದ ವ್ಯೂಹವೇನು? ಯಾರಿಗೆ ಯಾವ ಕ್ಷೇತ್ರ..? ಯಾರಿಗೆ ಏನು ಟೆನ್ಷನ್..?

ಟಾರ್ಗೆಟ್ 400ಕ್ಕೆ ನಿಗೂಢ ಸೇನಾನಿಗಳ ರಹಸ್ಯ ಸೇನೆ?
ಪಂಚರಾಜ್ಯಗಳಲ್ಲಿ ಸಿದ್ಧವಾಗುತ್ತಿದೆ ಪಂಚರಣತಂತ್ರ!
ಯಾವ ಮುಹೂರ್ತಕ್ಕಾಗಿ ಕಾಯುತ್ತಿದೆ ಕೇಸರಿ ಪಡೆ..?
ಫಿಕ್ಸ್ ಆಗಿದೆಯಂತೆ  ಮಹಾನಾಯಕರ ಸಮರಾಂಗಣ!

First Published Feb 26, 2024, 5:33 PM IST | Last Updated Feb 26, 2024, 5:34 PM IST

ಲೋಕಸಮರದ ಶಂಖನಾದ ಮೊಳಗಿಸಲು ಸನ್ನದ್ಧವಾಗಿದೆ ಕೇಸರಿ ಪಡೆ. ಲೋಕಸಮರಕ್ಕೆ ಉಳಿದಿರೋದು ಅಮ್ಮಮ್ಮಾ ಅಂದ್ರೆ 100 ದಿನ. ರಾಷ್ಟ್ರ ರಾಜಕಾರಣದ ಭವಿಷ್ಯ ನಿರ್ಧರಿಸೋ, ಲೋಕಸಭಾ ಚುನಾವಣಾ(Loksabha Election) ಸಮರಕ್ಕೆ ದಿನಗಣನೆ ಶುರುವಾಗಿದೆ. ಈಗಿನಿಂದ ಲೆಕ್ಕ ಹಾಕಿದರೆ ಅಮ್ಮಮ್ಮ ಅಂದ್ರೆ 100 ದಿನ, ಬರೀ ನೂರು ದಿನ ಅಷ್ಟೇ ಬಾಕಿ. ಅಷ್ಟ್ರೊಳಗೆ, ಗೆಲುವು ದಕ್ಕಿಸಿಕೊಳ್ಳೋಕೆ ಏನು ಮಾಡಬೇಕು ಅನ್ನೋ ತಂತ್ರಗಾರಿಕೆ, ರಾಜಕೀಯ ಪಕ್ಷಗಳಲ್ಲಿ ಬಿರುಸಾಗಿ ಸಾಗ್ತಾ ಇದೆ. ಈ ಇಬ್ಬರೂ ಲೋಕಸಮರ ಗೆಲ್ಲೋದಕ್ಕೆ ತಂತ್ರಗಾರಿಕೆ ಹೆಣೀತಿದ್ದಾರೆ. ಶತಾಯಗತಾಯ ಚತುರ್ಶತಕ ಸಿಡಿಸಬೇಕು ಅಂತ, ಬಿಜೆಪಿ(BJP) ಹಾಗೂ  ಮಿತ್ರಪಕ್ಷಗಳು ತಮಗೆ ತಾವೇ ಟಾರ್ಗೆಟ್ ಕೊಟ್ಟಿಕೊಂಡಿದ್ದಾವೆ. ಆದ್ರೆ, ಕೇಸರಿ ಪಡೆಗೆ ಮೂರನೇ ಗೆಲುವಿಗೆ, ತೊಡರುಗಾಲು ಹಾಕೋಕೆ, ಹಸ್ತಪಡೆ(Congress) ಸಿದ್ಧತೆ ನಡೆಸ್ತಾ ಇದೆ. ಇದೇ ಕಾರಣಕ್ಕಾಗಿಯೇ ಇವತ್ತು, ಲೋಕಸಂಗ್ರಾಮದ ರೋಚಕತೆ ಹೆಚ್ಚಾಗಿರೋದು. ಈಗಾಗ್ಲೇ ಇಂಡಿ ಮೈತ್ರಿಕೂಟದಲ್ಲಿ ದಿನಕ್ಕೊಂದು ಸಂಚಲನಾತ್ಮಕ ಘಟನೆಗಳು ನಡೀತಿದ್ದಾವೆ. ಅದೆಲ್ಲಿ ಮೈತ್ರಿ ಗಟ್ಟಿಯಾಗಿ ಉಳಿದಿದೆಯೋ, ಮತ್ತೆಲ್ಲಿ ಮೈತ್ರಿಗೆ ಗ್ರಹಚಾರ ವಕ್ಕರಿಸಿದೆಯೋ ಹೇಳೋದೇ ಕಷ್ಟವಾಗಿದೆ. ಅದರಲ್ಲೂ ಮುಖ್ಯವಾಗಿ, ನಿತೀಶ್ ಕುಮಾರ್ ಮೈತ್ರಿಯ ಕೈ ಬಿಟ್ಟು ಬಿಜೆಪಿ ಜೊತೆ ಕೈ ಜೋಡಿಸಿದ್ದಾಗಿದೆ.

ಇದನ್ನೂ ವೀಕ್ಷಿಸಿ:  ಶರಿಯಾದಲ್ಲಿ ನಂಬಿಕೆ ಇದ್ದರೆ, ಮುಸ್ಲಿಮರು ನಮ್ಮ ಡಾಕ್ಟರ್ ಬಳಿ ಬರಬಾರದು: ಅನಂತಕುಮಾರ್‌ ಹೆಗಡೆ

Video Top Stories