ಬಿಎಂಟಿಸಿ ಬಸ್‌ನಲ್ಲಿ ರಾಹುಲ್‌ ಗಾಂಧಿ ರೌಂಡ್ಸ್‌: ಪ್ರಯಾಣಿಕರ ಜೊತೆ ಸಂವಾದ

ರಾಜ್ಯದಲ್ಲಿ ಕಾಂಗ್ರೆಸ್‌ ಗೆಲ್ಲಿಸಲು ರಾಹುಲ್‌ ಗಾಂಧಿ ರಣತಂತ್ರ
ಬೆಂಗಳೂರಿನಲ್ಲಿ ಬಿಎಂಟಿಸಿ ಬಸ್‌ನಲ್ಲಿ ಪ್ರಯಾಣಿಸಿದ ರಾಹುಲ್‌
ಪ್ರಯಾಣಿಕರ ಜೊತೆ ಸಂವಾದ ನಡೆಸುತ್ತಲೇ ರಾಹುಲ್ ಪ್ರಯಾಣ 

First Published May 8, 2023, 1:36 PM IST | Last Updated May 8, 2023, 1:36 PM IST

ಬೆಂಗಳೂರು: ಚುನಾವಣೆಗೆ ಇನ್ನೇರಡು ದಿನ ಮಾತ್ರ ಬಾಕಿ ಇದೆ. ಈ ಹಿನ್ನೆಲೆ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಮಿಂಚಿನ ಸಂಚಾರ ನಡೆಸುತ್ತಿದ್ದಾರೆ. ಇಂದು ಬಿಎಂಟಿಸಿ ಬಸ್‌ನಲ್ಲಿ ರಾಹುಲ್‌ ಗಾಂಧಿ ಪ್ರಯಾಣಿಕರೊಂದಿಗೆ ಸಂವಾದ ನಡೆಸುತ್ತಲೇ ಸಂಚಾರ ಮಾಡಿದ್ದಾರೆ. ಕನ್ನಿಂಗ್ ಹ್ಯಾಮ್ ರಸ್ತೆಯಿಂದ ರಾಮಮೂರ್ತಿ ನಗರ ಕಡೆ ಹೋಗುತ್ತಿದ್ದ ಬಸ್‌ನಲ್ಲಿ ರಾಹುಲ್ ಗಾಂಧಿ ಪ್ರಯಾಣ ಬೆಳೆಸಿದ್ದಾರೆ. ಸುಮಾರು 6 ಕಿಮೀಗೂ ಹೆಚ್ಚು ದೂರ ಬಸ್‍ನಲ್ಲೇ ಪ್ರಯಾಣ ಮಾಡಿದ್ದಾರೆ. ರಾಹುಲ್‌ ಗಾಂಧಿ ಜೊತೆ ಬಸ್‌ನಲ್ಲಿದ್ದ ಮಹಿಳೆಯರು ಫೋಟೋವನ್ನು ತೆಗೆಸಿಕೊಂಡರು. ಬಸ್‌ನಲ್ಲಿ ರಾಹುಲ್‌ ಪ್ರಯಾಣಿಸುವ ವಿಡಿಯೋ ಸದ್ಯ ವೈರಲ್‌ ಆಗುತ್ತಿದೆ. 

ಇದನ್ನೂ ವೀಕ್ಷಿಸಿ: Karnataka Election: ಬಹಿರಂಗ ಪ್ರಚಾರಕ್ಕೆ ಇಂದು ಸಂಜೆ 6 ಗಂಟೆಗೆ ತೆರೆ

Video Top Stories