Karnataka Election: ಬಹಿರಂಗ ಪ್ರಚಾರಕ್ಕೆ ಇಂದು ಸಂಜೆ 6 ಗಂಟೆಗೆ ತೆರೆ

ಅಭ್ಯರ್ಥಿಗಳ ಪರ ದಿಗ್ಗಜರ ಬಹಿರಂಗ ಕ್ಯಾಂಪೇನ್‌ಗೆ ಇಂದು ಕೊನೆಯ ದಿನವಾಗಿದೆ. ಇನ್ಮುಂದೆ ಅಭ್ಯರ್ಥಿಗಳ ಪ್ರಚಾರ ಮನೆ ಮನೆ ಪ್ರಚಾರಕಷ್ಟೇ ಸೀಮಿತವಾಗಲಿದೆ.

First Published May 8, 2023, 12:30 PM IST | Last Updated May 8, 2023, 12:30 PM IST

ವಿಧಾನಸಭಾ ಚುನಾವಣೆ ಹಿನ್ನೆಲೆ ದಿಗ್ಗಜ ನಾಯಕರು ನಡೆಸುವ ಬಹಿರಂಗ ಪ್ರಚಾರಕ್ಕೆ ಇಂದು ಸಂಜೆ ಆರು ಗಂಟೆಗೆ ತೆರೆ ಬೀಳಲಿದೆ. ನಾಳೆಯಿಂದ ಅಭ್ಯರ್ಥಿಗಳ ಕ್ಯಾಂಪೇನ್‌ ಮನೆಮನೆಗೆ ಅಷ್ಟೇ ಸೀಮಿತವಾಗಲಿದೆ. ಮತದಾನ ನಡೆಯುವ 48 ಗಂಟೆ ಮುಂಚೆ ಯಾವುದೇ ರೋಡ್ ಶೋ, ಪ್ರಚಾರವನ್ನು ತೆರೆದ ವಾಹನದಲ್ಲಿ ಮಾಡುವಂತಿಲ್ಲ. ಸ್ಟಾರ್ ಪ್ರಚಾರಕರು ಮತ್ತು ಅಭ್ಯರ್ಥಿಗಳು ಕ್ಷೇತ್ರದಲ್ಲಿ ಉಳಿಯುವಂತಿಲ್ಲ. ಒಂದು ವೇಳೆ ಕಾಣಿಸಿಕೊಂಡರೆ ಚುನಾವಣಾ ಆಯೋಗ ಅವರು ವಿರುದ್ಧ ಕ್ರಮ ಕೈಗೊಳ್ಳಲಿದೆ. ಬುಧವಾರ ಬೆಳಗ್ಗೆ 7ರಿಂದ ಸಂಜೆ 6ರವರಗೆ ಮತದಾನ ನಡೆಯಲಿದ್ದು, ಅಭ್ಯರ್ಥಿಗಳು ಮತದಾರರನ್ನು ಸೆಳೆಯುವ ಕೊನೆಯ ಸುತ್ತಿನ ಪ್ರಚಾರಕ್ಕೆ ಅಣಿಯಾಗುತ್ತಿದ್ದಾರೆ.

ಇದನ್ನೂ ವೀಕ್ಷಿಸಿ: ರಣಕಣದಲ್ಲಿ ಮೂರು ಪಕ್ಷಗಳ ದಿಗ್ಗಜರ ಕ್ಯಾಂಪೇನ್‌ ಹವಾ: ಒಂದೇ ವಾರದಲ್ಲಿ ಇಡೀ ಕುರುಕ್ಷೇತ್ರವನ್ನೇ ಆವರಿಸಿದ ಮೋದಿ

Video Top Stories