ಉಳಿದ ಅವಧಿಗೂ ಸಿದ್ದರಾಮಯ್ಯ ಅವರೇ ಸಿಎಂ ಆಗಿ ಮುಂದುವರೆಯುತ್ತಾರೆ: ರಾಘವೇಂದ್ರ ಹಿಟ್ನಾಳ್‌

ಸಿಎಂ ಆಗಿ ಯಾರು ಮುಂದುವರೆಯಬೇಕು ಎಂಬುದರ ಬಗ್ಗೆ ಹೈಕಮಾಂಡ್‌ ತೀರ್ಮಾನ ತೆಗೆದುಕೊಂಡಿದೆ ಎಂದು ಶಾಸಕ ರಾಘವೇಂದ್ರ ಹಿಟ್ನಾಳ್‌ ಹೇಳಿದ್ದಾರೆ.

Share this Video
  • FB
  • Linkdin
  • Whatsapp

ಕೊಪ್ಪಳ: ಸಿದ್ದರಾಮಯ್ಯ ಸಿಎಂ ಸ್ಥಾನ(CM post) ಬಿಟ್ಟುಕೊಡಬೇಕೆಂದು ಒಕ್ಕಲಿಗ ಸ್ವಾಮೀಜಿ ಹೇಳಿಕೆ ವಿಚಾರವಾಗಿ ಶಾಸಕ ರಾಘವೇಂದ್ರ ಹಿಟ್ನಾಳ್‌ (Raghavendra Hitnal) ಕೊಪ್ಪಳದಲ್ಲಿ(Koppal) ಮಾತನಾಡಿದ್ದಾರೆ. ಉಳಿದ ಅವಧಿಗೂ ಸಿದ್ದರಾಮಯ್ಯ(Siddaramaiah) ಅವರೇ ಸಿಎಂ ಆಗಿ ಮುಂದುವರೆಯುತ್ತಾರೆ. ಅದರ ಬಗ್ಗೆ ಹೈಕಮಾಂಡ್ ತೀರ್ಮಾನ ತೆಗೆದುಕೊಂಡಿದೆ. ವರಿಷ್ಠರು ಇದರ ಬಗ್ಗೆ ಈಗಾಗಲೇ ಸ್ಪಷ್ಟಪಡಿಸಿದ್ದಾರೆ. ಈಗ ಸಿಎಂ ಆಗಿ ಸಿದ್ದರಾಮಯ್ಯ ಇದ್ದಾರೆ. ಐದು ವರ್ಷನೂ ಅವರೇ ಮುಂದುವರೆಯುತ್ತಾರೆ. ಸಿಎಂ ಸ್ಥಾನ ನೀಡಲು ಕೇವಲ ಒಬ್ಬಿಬ್ಬರು ಸ್ವಾಮೀಜಿ ಹೇಳುತ್ತಿಲ್ಲ. ಅಂತವರೇ ಇಂದು ಜಾಸ್ತಿಯಾಗಿದ್ದಾರೆ. ರಾಜಕೀಯಕ್ಕೂ ಧರ್ಮಕ್ಕೆ ಅಂತರ ಇದ್ದರೆ ಒಳ್ಳೇಯದು. ಸಿದ್ದರಾಮಯ್ಯ ರಾಜ್ಯದಲ್ಲಿ ಒಳ್ಳೆಯ ಆಡಳಿತ ನೀಡಿದ್ದಾರೆ ಎಂದರು. ಇನ್ನೂ ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ವಿಚಾರವಾಗಿ ಮಾತನಾಡಿದ ಅವರು, ಇದರ ಬಗ್ಗೆ ಹೈಕಮಾಂಡ್ ನಿರ್ಧಾರ ತೆಗೆದುಕೊಳ್ಳುತ್ತದೆ ಎಂದರು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಇದನ್ನೂ ವೀಕ್ಷಿಸಿ: ವಾಲ್ಮೀಕಿ ನಿಗಮ ಹಗರಣ ಇನ್ನೊಬ್ಬ ಶಾಸಕನ ಕೊರಳಿಗೂ ಉರುಳು ಪಕ್ಕಾ? ಕೊಟ್ಟವರು ಯಾರು.? ಪಡೆದವರು ಯಾರು..?

Related Video