ಶೆಟ್ಟರ್‌, ಸವದಿಗೆ ಟಿಕೆಟ್‌ ನೀಡಿಲ್ಲ, ಇನ್ನೂ ರಮ್ಯಾಗೆ ಕೊಡೋಕಾಗುತ್ತಾ?: ಅಶೋಕ್‌

ಬಿಜೆಪಿಯಿಂದ ನನಗೆ ಆಫರ್‌ ಬಂದಿತ್ತು ಎಂದ ರಮ್ಯಾ
ನಟಿ ರಮ್ಯಾ ಹೇಳಿಕೆಗೆ ಆರ್‌. ಅಶೋಕ್‌ ತಿರುಗೇಟು
ಕಾಂಗ್ರೆಸ್‌ಗೆ ಅನುಕೂಲ ಆಗಲೆಂದು ರಮ್ಯಾರಿಂದ ಹೇಳಿಕೆ

Share this Video
  • FB
  • Linkdin
  • Whatsapp

ಬೆಂಗಳೂರು: ಬಿಜೆಪಿಯಿಂದ ನನಗೆ ಆಫರ್‌ ಬಂದಿತ್ತು ಎಂದು ನಟಿ ರಮ್ಯಾ ಹೇಳಿದ್ದಾರೆ. ಅವರ ಈ ಹೇಳಿಕೆಗೆ ಆರ್‌.ಅಶೋಕ್‌ ತಿರುಗೇಟು ನೀಡಿದ್ದು, ರಮ್ಯಾರನ್ನು ಬಿಜೆಪಿಗೆ ಆಹ್ವಾನಿಸುವಷ್ಟು ನಮ್ಮ ಪಾರ್ಟಿ ಬರಗೆಟ್ಟಿಲ್ಲ. ಚುನಾವಣೆ ಸಮಯದಲ್ಲಿ ಅವರು ಗಿಮಿಕ್‌ ಮಾಡುತ್ತಿದ್ದಾರೆ. ಜಗದೀಶ್‌ ಶೆಟ್ಟರ್‌ರಂತ ಮಾಜಿ ಸಿಎಂ ಹಾಗೂ ಲಕ್ಷ್ಮಣ ಸವದಿಯಂತ ಮಾಜಿ ಡಿಸಿಎಂ ಅಂತವರಿಗೆ ನಾವು ಟಿಕೆಟ್‌ ನೀಡಿಲ್ಲ. ಅಂತದ್ರಲ್ಲಿ ರಮ್ಯಾ ಅವರನ್ನು ಕರೆದು ಯಾಕೆ ಸಚಿವ ಸ್ಥಾನ ಕೊಡೋಣ ಎಂದು ಆರ್‌. ಅಶೋಕ್‌ ಪ್ರಶ್ನಿಸಿದ್ದಾರೆ. ಅವರು ಕಾಂಗ್ರೆಸ್‌ನ ಸಾಮಾಜಿಕ ಮಾಧ್ಯಮದ ಸಂಚಾಲಕರಾಗಿದ್ದರು. ಕಾಂಗ್ರೆಸ್‌ಗೆ ಅನುಕೂಲ ಆಗಲಿ ಎಂದು ಅವರು ಈ ರೀತಿ ಹೇಳಿದ್ದಾರೆ. ನಮ್ಮ ಪಾರ್ಟಿಯಿಂದ ಅವರನ್ನು ಯಾರು ಕರೆದಿಲ್ಲ ಎಂದು ಹೇಳುವ ಮೂಲಕ ಅಶೋಕ್‌ ತಿರುಗೇಟು ನೀಡಿದ್ದಾರೆ. 

ಇದನ್ನೂ ವೀಕ್ಷಿಸಿ:ಪ್ರಚಾರಕ್ಕೆ ದೆಹಲಿ ದಿಗ್ಗಜರ ದಾಂಗುಡಿ: ಹಳೇ ಮೈಸೂರು ಭಾಗದಲ್ಲಿ ಶಾ ರೋಡ್‌ ಶೋ

Related Video