ಪ್ರಚಾರಕ್ಕೆ ದೆಹಲಿ ದಿಗ್ಗಜರ ದಾಂಗುಡಿ: ಹಳೇ ಮೈಸೂರು ಭಾಗದಲ್ಲಿ ಶಾ ರೋಡ್‌ ಶೋ

ಹಳೇ ಮೈಸೂರನ್ನೇ ಟಾರ್ಗೆಟ್‌ ಮಾಡಿರುವ ಬಿಜೆಪಿ
ಮೈಸೂರು ಭಾಗದಲ್ಲಿ ಅಮಿತ್‌ ಶಾ ಪ್ರಚಾರ
ಗುಂಡ್ಲುಪೇಟೆಯಿಂದ ಸಕಲೇಶಪುರಕ್ಕೆ ಶಾ ಭೇಟಿ

Share this Video
  • FB
  • Linkdin
  • Whatsapp

ಮೈಸೂರು: ನಾಮಪತ್ರ ಸಲ್ಲಿಕೆ ಬಳಿಕ ರಾಜ್ಯ ವಿಧಾನಸಭಾ ಚುನಾವಣಾ ಕಣ ರಂಗೇರಿದ್ದು, ಮೈಸೂರು ಭಾಗದಲ್ಲಿ ಅಮಿತ್‌ ಶಾ ಪ್ರವಾಸ ಮಾಡಲಿದ್ದಾರೆ. ಇಂದು ರಾತ್ರಿ ಅಮಿತ್‌ ಶಾ ಮೈಸೂರಿಗೆ ಬಂದು, ಖಾಸಗಿ ಹೋಟೆಲ್‌ನಲ್ಲಿ ವಾಸ್ತವ್ಯ ಹೂಡಲಿದ್ದಾರೆ. ನಾಳೆಯಿಂದ ಎರಡು ದಿನದ ಕಾಲ ಅಮಿತ್‌ ಶಾ ಮೈಸೂರು ಹಾಗೂ ಚಾಮರಾಜನಗರದಲ್ಲಿ ಪ್ರಚಾರ ಮಾಡಲಿದ್ದಾರೆ. ಈ ಮೂಲಕ ಹಳೇ ಮೈಸೂರು ಭಾಗವನ್ನು ಕೇಸರಿ ಪಡೆ ಟಾರ್ಗೆಟ್‌ ಮಾಡಿದಂತೆ ಕಾಣುತ್ತಿದೆ. ನಾಳೆ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿದ ಬಳಿಕ ಗುಂಡ್ಲುಪೇಟೆಯಿಂದ ಅಮಿತ್‌ ಶಾ ರೋಡ್‌ ಆರಂಭಿಸಲಿದ್ದಾರೆ. ಗುಂಡ್ಲುಪೇಟೆಯಿಂದ ಸಕಲೇಶಪುರಕ್ಕೆ ಭೇಟಿ ನೀಡಿ, ಅಲ್ಲಿನ ಅಭ್ಯರ್ಥಿ ಪರ ಪ್ರಚಾರ ಮಾಡಲಿದ್ದಾರೆ. ಅಲ್ಲದೇ ಸಿದ್ದರಾಮಯ್ಯರನ್ನು ವರುಣದಲ್ಲಿ ಸೋಲಿಸುವ ಕುರಿತು ಪದಾಧಿಕಾರಿಗಳ ಜೊತೆ ಚರ್ಚೆ ನಡೆಸಲಿದ್ದಾರೆ ಎಂದು ತಿಳಿದುಬಂದಿದೆ.

ಇದನ್ನೂ ವೀಕ್ಷಿಸಿ: ಸಿಎಂ ಬೊಮ್ಮಾಯಿ ಅಬ್ಬರದ ಪ್ರಚಾರ: ಬಸವೇಶ್ವರರ ಪುತ್ಥಳಿಗೆ ಮಾಲಾರ್ಪಣೆ

Related Video