Pratap Simha: ಜನರ ಕೆಲಸ ಮಾಡಲು ಅವಕಾಶ ಕೊಡು ಎಂದು ಕೇಳುತ್ತೇನೆ: ಫೇಸ್‌ಬುಕ್‌ನಲ್ಲಿ ಭಾವುಕರಾಗಿ ಪ್ರಾರ್ಥಿಸಿದ ಪ್ರತಾಪ್ ಸಿಂಹ

ದೇಶಕ್ಕೆ ಮೋದಿ ಬೇಕು, ನಮ್ಮಲ್ಲೂ ಸಣ್ಣ ಮೋದಿ ಬೇಕು. ನಾನು ಪ್ರಧಾನಿ ಮೋದಿ ಹೆಸರಿನಲ್ಲಿ ಚುನಾವಣೆ ಗೆದ್ದೆ ಎಂದು ಪ್ರತಾಪ್‌ ಸಿಂಹ ಫೇಸ್‌ಬುಕ್‌ ಲೈವ್‌ನಲ್ಲಿ ಭಾವುಕರಾಗಿ ಹೇಳಿದ್ದಾರೆ.

Share this Video
  • FB
  • Linkdin
  • Whatsapp

ರಾಜ್ಯ ಬಿಜೆಪಿ ಟಿಕೆಟ್ ಘೋಷಣೆಗೆ ಕೌಂಟ್‌ಡೌನ್ ಶುರುವಾಗಿದೆ. ಇದರ ಬೆನ್ನಲ್ಲೇ ಮೈಸೂರು(Mysore) ಸಂಸದ ಪ್ರತಾಪ್ ಸಿಂಹಗೆ(Pratap Simha) ಟಿಕೆಟ್ ಕೈ ತಪ್ಪುತ್ತಾ ಆತಂಕ ಶುರುವಾಗಿದೆ. ಟಿಕೆಟ್(Ticket) ಘೋಷಣೆಗೂ ಮುನ್ನವೇ ಪ್ರತಾಪ್ ಭಾವುಕ ಮಾತನಾಡಿದ್ದಾರೆ. ಫೇಸ್‌ಬುಕ್‌ನಲ್ಲಿ(Facebook) ಭಾವುಕರಾಗಿ ಪ್ರಾರ್ಥಿಸಿದ ಪ್ರತಾಪ್ ಸಿಂಹ, ನಾನು ದೇವರಲ್ಲಿ ವೈಯಕ್ತಿಕವಾಗಿ ಏನನ್ನೂ ಕೇಳಲ್ಲ. ಜನರ ಕೆಲಸ ಮಾಡಲು ಅವಕಾಶ ಕೊಡು ಎಂದು ಕೇಳುತ್ತೇನೆ. ಟಿಕೆಟ್ ಸಿಗುತ್ತೋ.. ಇಲ್ವೋ ಅಂತ ಕುತೂಹಲ ಇಟ್ಟುಕೊಳ್ಳಬೇಡಿ. ದೇವರು ಒಳ್ಳೆಯದನ್ನೇ ಮಾಡುತ್ತಾನೆ ಅನ್ನೋ ನಂಬಿಕೆ ಇದೆ. ದೇಶಕ್ಕೆ ಮೋದಿ ಬೇಕು, ನಮ್ಮಲ್ಲೂ ಸಣ್ಣ ಮೋದಿ ಬೇಕು. ನಾನು ಪ್ರಧಾನಿ ಮೋದಿ ಹೆಸರಿನಲ್ಲಿ ಚುನಾವಣೆ ಗೆದ್ದೆ. 10 ವರ್ಷಗಳಲ್ಲಿ ಹಲವಾರು ಕೆಲಸ ಮಾಡಿದ್ದೇನೆ ಎಂದು ಫೇಸ್‌ಬುಕ್‌ನಲ್ಲಿ ಮೈಸೂರು ಸಂಸದ ಪ್ರತಾಪ್ ಭಾವುಕ ಮಾತನಾಡಿದ್ದಾರೆ.

ಇದನ್ನೂ ವೀಕ್ಷಿಸಿ:  ಕೆಲ ಕ್ಷೇತ್ರಗಳಲ್ಲಿ ಬಿಜೆಪಿಯಿಂದ ಅದಲಿ ಬದಲಿ ಆಟ! ಉಡುಪಿ-ಚಿಕ್ಕಮಗಳೂರಿಗೆ ಶೋಭಾ ಬದಲು ಕೋಟ ಶ್ರೀನಿವಾಸ್‌ಗೆ ಟಿಕೆಟ್ !

Related Video