ಕೆಲ ಕ್ಷೇತ್ರಗಳಲ್ಲಿ ಬಿಜೆಪಿಯಿಂದ ಅದಲಿ ಬದಲಿ ಆಟ! ಉಡುಪಿ-ಚಿಕ್ಕಮಗಳೂರಿಗೆ ಶೋಭಾ ಬದಲು ಕೋಟ ಶ್ರೀನಿವಾಸ್‌ಗೆ ಟಿಕೆಟ್ !

ಬಿಜೆಪಿ ಹೈಕಮಾಂಡ್‌ ಕೆಲವು ಕ್ಷೇತ್ರಗಳಲ್ಲಿ ಅದಲಿ ಬದಲಿ ಆಟವನ್ನು ಆಡುತ್ತಿದ್ದು, ಬೆಂಗಳೂರು ಉತ್ತರದಿಂದ ಸದಾನಂದಗೌಡ ಬದಲು ಶೋಭಾ ಕರಂದ್ಲಾಜೆಗೆ ಟಿಕೆಟ್ ನೀಡಲು ನಿರ್ಧರಿಸಲಾಗಿದೆ ಎಂದು ಹೇಳಲಾಗ್ತಿದೆ. 

Share this Video
  • FB
  • Linkdin
  • Whatsapp

ಕೆಲ ಕ್ಷೇತ್ರಗಳಲ್ಲಿ ಬಿಜೆಪಿ ಹೈಕಮಾಂಡ್‌(BJP Highcommand) ಅದಲಿ ಬದಲಿ ಆಟವನ್ನು ಆಡುತ್ತಿದೆ. ಉಡುಪಿ- ಚಿಕ್ಕಮಗಳೂರಿಗೆ ಶೋಭಾ ಕರಂದ್ಲಾಜೆ(Shobha Karandlaje) ಬದಲು ಕೋಟ ಶ್ರೀನಿವಾಸ್‌ ಪೂಜಾರಿಗೆ(Kota Srinivasa Poojary) ಟಿಕೆಟ್ ನೀಡಬೇಕು ಎಂದು ಚಿಂತನೆ ನಡೆಸಲಾಗಿದೆಯಂತೆ. ಬೆಂಗಳೂರು ಉತ್ತರದಿಂದ ಸದಾನಂದಗೌಡ ಬದಲು ಶೋಭಾ ಕರಂದ್ಲಾಜೆಗೆ ಟಿಕೆಟ್(Ticket) ನೀಡಲು ನಿರ್ಧರಿಸಲಾಗಿದೆ ಎಂದು ಹೇಳಲಾಗ್ತಿದೆ. ಇನ್ನೂ ಏಳು ಕ್ಷೇತ್ರಗಳನ್ನ ಬಿಜೆಪಿ(BJP) ಬಾಕಿ ಉಳಿಸಿಕೊಂಡಿದೆ. ಈ 7 ಕ್ಷೇತ್ರಗಳ ಬಗ್ಗೆ ಬಿಜೆಪಿ ಹೈಕಮಾಂಡ್‌ನಲ್ಲಿ ಭಾರೀ ಚರ್ಚೆ ನಡೆಯುತ್ತಿದೆ. ಉತ್ತರ ಕನ್ನಡ, ಚಾಮರಾಜನಗರ, ಚಿಕ್ಕಬಳ್ಳಾಪುರ, ಬೆಳಗಾವಿ, ಚಿತ್ರದುರ್ಗ, ರಾಯಚೂರು, ಹಾವೇರಿ ಕ್ಷೇತ್ರಗಳು ಇನ್ನೂ ಪೆಂಡಿಂಗ್ ಇವೆ. ಈ ಕ್ಷೇತ್ರದ ನಾಯಕರೋಂದಿಗೆ ಚರ್ಚಿಸಿ ಟಿಕೆಟ್ ಘೋಷಣೆ ಮಾಡುವ ಸಾಧ್ಯತೆ ಇದೆ. ಒಟ್ಟು 7 ಕ್ಷೇತ್ರಗಳನ್ನ ಘೋಷಿಸದೇ ಬಿಜೆಪಿ ಬಾಕಿ ಉಳಿಸಿಕೊಂಡಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಇದನ್ನೂ ವೀಕ್ಷಿಸಿ: BJP Ticket to New Faces: ಹಳಬರಿಗೆ ಕೊಕ್..ಹೊಸಬರಿಗೆ ಹೈಕಮಾಂಡ್ ಅವಕಾಶ: ಯಾರು ಯಾರಿಗೆ ಈ ಬಾರಿ ಚಾನ್ಸ್‌ ಸಿಗಲಿದೆ ?

Related Video