ಬಿಜೆಪಿ ಗೆಲ್ಲೋಕೆ..ಎದುರಾಳಿ ಸೋಲೋಕೆ..3 ಕಾರಣ?! ರಾಜಕೀಯ ಚಾಣಾಕ್ಷ ನುಡಿದ ಭವಿಷ್ಯವೇನು ..?

ಮೋದಿ ಸೆಟ್ ಮಾಡಿದ ಟಾರ್ಗೆಟ್ 400ರ ರಹಸ್ಯವೇನು..?
ರಾಜಕೀಯ ತಂತ್ರಜ್ಞ ಹೇಳಿದ ಸಿಂಹಾಸನ ರಹಸ್ಯ ಏನು..?
ಬ್ರಾಂಡ್ ಮೋದಿಗೆ ಬಿಗ್ ಚಾಲೆಂಜ್ ಯಾರು ಗೊತ್ತಾ..?

First Published May 20, 2024, 4:07 PM IST | Last Updated May 20, 2024, 4:08 PM IST

ಬಿಜೆಪಿ(BJP) ಗೆಲ್ಲೋಕೆ.. ಎದುರಾಳಿ ಸೋಲೋಕೆ.. ಆ ಮೂರು ಅಂಶಗಳೇ ಪ್ರಮುಖ ಕಾರಣವಂತೆ. ಈ ಮಾತನ್ನ ಹೇಳಿರೋದು ಮತ್ಯಾರೋ ಅಲ್ಲ, ದೇಶದ ರಾಜಕೀಯ ಚಾಣಾಕ್ಷ ಅಂತ ಕರೆಸಿಕೊಳ್ಳೋ, ಪ್ರಶಾಂತ್ ಕಿಶೋರ್ (Prashant Kishor). ಕೇಸರಿ ಪಾಳಯದ ಟಾರ್ಗೆಟ್ 400ರ ಬಗ್ಗೆ, ಸಂಚಲನ ಸೃಷ್ಟಿಸಿರೋ ಕಾಂಗ್ರೆಸ್(Congress) ಗ್ಯಾರಂಟಿ ಬಗ್ಗೆ, ಕಾಂಗ್ರೆಸ್ ಮುಂದಾಳ್ತನದ ಇಂಡಿ ಮೈತ್ರಿಕೂಟದ ಬಗ್ಗೆನೂ ಇವರು ಮಾತಾಡಿದ್ದಾರೆ. ದೇಶದಲ್ಲೆಡೆ ಚುನಾವಣೆ ಕಾವು ತೀವ್ರವಾಗ್ತಾ ಇದೆ. ಒಂದೊಂದು ಹಂತದ ಚುನಾವಣೆ(Lok Sabha elections 2024) ಮುಗಿದ ಮೇಲೂ ಒಂದೊಂದು ಲೆಕ್ಕಾಚಾರ ಬಯಲಾಗ್ತಾ ಇದೆ. ಹಲವಾರು ಸಮೀಕ್ಷೆಗಳು ಒಂದೊಂದು ಲೆಕ್ಕವನ್ನು ಬರೆದಿಟ್ಟುಕೊಂಡಿದ್ದಾವೆ. ಪ್ರಶಾಂತ್ ಕಿಶೋರ್.. ಎಲೆಕ್ಷನ್ ಸ್ಪೆಷಲಿಸ್ಟ್.. ಮತಸಂಗ್ರಾಮದಲ್ಲಿ ಈತ ಸಾರಥಿಯಾದ್ರೆ, ಗೆಲುವು ದಕ್ಕಿಸಿಕೊಳ್ಳೋದು ಕಷ್ಟದ ಮಾತಲ್ಲ. ದೇಶದ ಮೂಲೆಮೂಲೆಯ ಜನಾಭಿಪ್ರಾಯ ಸಂಗ್ರಹ ಮಾಡಿ, ಅದನ್ನ ಲೆಕ್ಕ ಹಾಕಿ, ಅಂತಿಮ ಫಲಿತಾಂಶ ಏನು ಅಂತ ಹೇಳಬಲ್ಲ ಜಾಣ್ಮೆ ಇವರಿಗಿದೆ. ನರೇಂದ್ರ ಮೋದಿ(Narendra Modi), ಬಂಗಾಳದ ದೀದಿ, ನಿತೀಶ್ ಕುಮಾರ್, ಜಗನ್ ಮೋಹನ್ ರೆಡ್ಡಿ, ಇವರೆಲ್ಲರ ಹಿಂದಿದ್ದ ಗೆಲುವಿನ ಶಕ್ತಿಯಂತಿದ್ದವರು ಪ್ರಶಾಂತ್ ಕಿಶೋರ್.2014ರಲ್ಲಿ ಮೋದಿ ಪರವಾಗಿ ಗಟ್ಟಿಯಾಗಿ ನಿಂತಿದ್ದ ಈ ರಾಜಕೀಯ ನಿಪುಣ, ಈಗ 2024ರ ಭವಿಷ್ಯ ನುಡಿದಿದ್ದಾರೆ. ಇತ್ತೀಚೆಗೆ ರಾಜಕೀಯ ಪ್ರಚಾರದಿಂದ, ಲೆಕ್ಕಾಚಾರದಿಂದ ವಿಮುಖರಾದಂತೆ ಕಾಣ್ತಾ ಇದ್ದ ಪ್ರಶಾಂತ್ ಕಿಶೋರ್, ತಮ್ಮ ನಿಗೂಢ ಲೆಕ್ಕಾಚಾರವನ್ನು ಈಗ ಬಯಲಾಗಿಸಿದ್ದಾರೆ.

ಇದನ್ನೂ ವೀಕ್ಷಿಸಿ:  ದೇವರಾಜೇಗೌಡ-ಶಿವರಾಮೇಗೌಡ ಸಂಭಾಷಣೆ ಆಡಿಯೋ ವೈರಲ್‌! ರೇವಣ್ಣಗೆ ಇಂದು ಜಾಮೀನಾ? ಜೈಲಾ?