Bhagwanth Khuba: ವಿಜಯೇಂದ್ರ ಕಾಲಿಗೆ ಬಿದ್ದ ಚವ್ಹಾಣ್: ಬೀದರ್‌ ಬಿಜೆಪಿಯಲ್ಲಿ ತೀವ್ರಗೊಂಡ ಆಂತರಿಕ ಕಚ್ಚಾಟ

ಯಾರು ಭ್ರಷ್ಟರು, ಯಾರು ಪ್ರಾಮಾಣಿಕರು ಎಂದು ಎಲ್ಲರಿಗೂ ಗೊತ್ತಿದೆ
ಉಸ್ತುವಾರಿ ಸಚಿವರಾಗಿದ್ದರೂ ಒಂದು ಕ್ಷೇತ್ರಕ್ಕೂ ಪ್ರಚಾರಕ್ಕೆ ಹೋಗಿಲ್ಲ
ಕಾಂಗ್ರೆಸ್ ಪಕ್ಷದ ವಿರುದ್ಧ ಒಂದೂ ಹೋರಾಟ ಮಾಡಿಲ್ಲ ಎಂದ ಖೂಬಾ
 

Share this Video
  • FB
  • Linkdin
  • Whatsapp

ಬೀದರ್ ಬಿಜೆಪಿಯಲ್ಲಿ ಆಂತರಿಕ ಕಚ್ಚಾಟ ತೀವ್ರಗೊಂಡಿದೆ. ಕೇಂದ್ರ ಸಚಿವ ಭಗವಂತ ಖೂಬಾಗೆ(Bhagwanth Khuba) ಟಿಕೆಟ್ ಕೊಡದಂತೆ ವೇದಿಕೆ ಕಾರ್ಯಕ್ರಮದಲ್ಲೇ ವಿಜಯೇಂದ್ರ(Vijayendra) ಕಾಲಿಗೆ ಬಿದ್ದು ಪ್ರಭು ಚವ್ಹಾಣ್(Prabhu Chavan) ಮನವಿ ಮಾಡಿದ್ದಾರೆ. ಬೀದರ್(Bidar) ಲೋಕಸಭೆ ಕ್ಷೇತ್ರಕ್ಕೆ ಒಳ್ಳೆಯ ಅಭ್ಯರ್ಥಿ ನೀಡಿ ಎಂದು ಭಗವಂತ ಖೂಬಾ ಸಮ್ಮುಖದಲ್ಲೇ ಒತ್ತಾಯ ಮಾಡಿದ್ದಾರೆ. ಇತ್ತ ಭಗವಂತ ಕೂಬಾ ಚವ್ಹಾಣ್ ಸೋಲಿಸಲು ನಾನು ಪ್ರಯತ್ನ ಮಾಡಿಲ್ಲ, ಕಾಂಗ್ರೆಸ್ ನಾಯಕರಿಗೆ ಮೆಚ್ಚಿಸಿಲು ಹೀಗೆ ಮಾಡುತ್ತಿರಬಹುದು ಎಂದು ತಿರುಗೇಟು ಕೊಟ್ಟಿದ್ದಾರೆ. 

ಇದನ್ನೂ ವೀಕ್ಷಿಸಿ: Caste census: ಜಾತಿಗಣತಿ ವರದಿ ತಿರಸ್ಕರಿಸಿ ಯಾವ್ಯಾವ ಸಚಿವರ ಸಹಿ ? ವರದಿ ಸ್ವೀಕರಿಸಿ ಸಹಿ ಹಾಕಿದ ಸಚಿವರು ಯಾರು ?

Related Video